ಜಾನಪದ ಮಹಾಕಾವ್ಯ ಇತಿಹಾಸ ದೇಶದೆಲ್ಲೆಡೆ ಪಸರಿಸಿ: ಡಾ. ನಾಗರಾಜಮೂರ್ತಿ

| Published : Jul 17 2025, 12:42 AM IST / Updated: Jul 17 2025, 12:43 AM IST

ಜಾನಪದ ಮಹಾಕಾವ್ಯ ಇತಿಹಾಸ ದೇಶದೆಲ್ಲೆಡೆ ಪಸರಿಸಿ: ಡಾ. ನಾಗರಾಜಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಜಾನಪದ ಮೌಖಿಕ ಮಹಾಕಾವ್ಯ-ರಂಗ ಪ್ರಯೋಗದಲ್ಲಿನ ಹೊಸ ಸಾಧ್ಯತೆಗಳು ಕುರಿತು ಭಾರಿಘಾಟ್‌ ಡಾ.ಎಚ್‌.ಎಸ್. ಶಿವಪ್ರಕಾಶರ ನಾಟಕಗಳಲ್ಲಿ ಜಾನಪದ ಮೌಖಿಕ ಪರಂಪರೆಯ ಅನಾವರಣ ಕುರಿತು ಶೇಷಾದ್ರಿಪುರಂ ಸಂಜೆ ಕಾಲೇಜು ನಾಟಕ ವಿಭಾಗದ ಮುಖ್ಯಸ್ಥ ಜಗದೀಶ್ ಸಿ.ಜಾಲ ವಿಚಾರಮಂಡಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಜಾನಪದ ಮೌಖಿಕ ಮಹಾಕಾವ್ಯಗಳ ಅಧ್ಯಯನದಿಂದ ಪ್ರಜ್ಞೆ ವಿಕಸನವಾಗುತ್ತದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಕೆ.ವಿ. ನಾಗರಾಜಮೂರ್ತಿ ಅಭಿಪ್ರಾಯಪಟ್ಟರು.

ನಗರದ ಜೆಎಸ್‌ಎಸ್‌ ಮಹಿಳಾ ಕಾಲೇಜಿನಲ್ಲಿ ಕರ್ನಾಟಕ ನಾಟಕ ಅಕಾಡೆಮಿ, ಜೆಎಸ್ಎಸ್ ಮಹಿಳಾ ಕಾಲೇಜು ಹಾಗೂ ರಂಗವಾಹಿನಿ ಸಹಯೋಗದಲ್ಲಿ ಆಯೋಜಿಸಿದ್ದ ಜಾನಪದ ಮೌಖಿಕ ಮಹಾಕಾವ್ಯಗಳು ಮತ್ತು ಕನ್ನಡ ರಂಗಭೂಮಿ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಮಂಟೇಸ್ವಾಮಿ, ಮಹದೇಶ್ವರ, ಮೈಲಾರ ಲಿಂಗ ಸೇರಿದಂತೆ ಇತರೆ ಹಲವು ಮಹಾಕಾವ್ಯಗಳು ಜಾನಪದ ಕ್ಷೇತ್ರದಲ್ಲಿ ಶ್ರೀಮಂತಿಕೆಯನ್ನು ತಂದುಕೊಟ್ಟಿವೆ. ಈ ಮಹಾಕಾವ್ಯಗಳು ಸಂಪದ್ಭರಿತ ಕಾವ್ಯಗಳಾಗಿವೆ. ಮಂಟೇಸ್ವಾಮಿಯ ನೀಲಗಾರರು, ಮಹದೇಶ್ವರರ ಗುಡ್ಡರು ಈ ಭಾಗದ 4 ರಿಂದ 5 ಜಿಲ್ಲೆಗಳಲ್ಲಿ ಹಾಡುತ್ತಿದ್ದಾರೆ ಎಂದರು.

ಮಹಾಕಾವ್ಯಗಳಿಗೆ ನೂರಾರು ವರ್ಷಗಳ ಇತಿಹಾಸವಿದೆ. ಇವು ಯಾವುದೇ ಒಂದು ಜನಾಂಗಕ್ಕೆ ಸೇರಿದವಲ್ಲ. ಮಹದೇಶ್ವರ, ಮಂಟೇಸ್ವಾಮಿ ಇವರು ಅನುಭಾವಿಗಳು. ಜನರನ್ನು ಕಷ್ಟ ಕಾಲದಲ್ಲಿ ಕಾಪಾಡಿದವರು. ಈ ಮಹಾಕಾವ್ಯಗಳ ಕಾವ್ಯ ಪರಂಪರೆಯನ್ನು ದೇಶದೆಲ್ಲೆಡೆ ಪಸರಿಸುವ ಅಗತ್ಯವಿದೆ ಮಹಾಕಾವ್ಯಗಳು ಆತ್ಮಶಕ್ತಿ, ಆತ್ಮಪ್ರಜ್ಞೆಯನ್ನು ಉಂಟುಮಾಡುತ್ತವೆ. ಪ್ರಸ್ತುತ ದೇಶದಲ್ಲಿ ಏಕಮುಖಿ ಸಂಸ್ಕೃತಿ ಹೇರುವ ಹುನ್ನಾರ ನಡೆಯುತ್ತಿದೆ. ಜಾನಪದ ಕಾವ್ಯಗಳು ವೈದಿಕ ಸಂಸ್ಕೃತಿಗೆ ವಿರುದ್ಧವಾಗಿವೆ ಎಂದರು.

ವಿಚಾರಮಂಡನೆ: ಜಾನಪದ ಮೌಖಿಕ ಮಹಾಕಾವ್ಯ-ರಂಗ ಪ್ರಯೋಗದಲ್ಲಿನ ಹೊಸ ಸಾಧ್ಯತೆಗಳು ಕುರಿತು ಭಾರಿಘಾಟ್‌ ಡಾ.ಎಚ್‌.ಎಸ್. ಶಿವಪ್ರಕಾಶರ ನಾಟಕಗಳಲ್ಲಿ ಜಾನಪದ ಮೌಖಿಕ ಪರಂಪರೆಯ ಅನಾವರಣ ಕುರಿತು ಶೇಷಾದ್ರಿಪುರಂ ಸಂಜೆ ಕಾಲೇಜು ನಾಟಕ ವಿಭಾಗದ ಮುಖ್ಯಸ್ಥ ಜಗದೀಶ್ ಸಿ.ಜಾಲ

ವಿಚಾರಮಂಡಿಸಿದರು.

ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಎಂ.ಸ್ವಾಮಿ, ಜೆಎಸ್‌ಎಸ್ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಮಹದೇವಸ್ವಾಮಿ, ರಂಗವಾಹಿನಿ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ, ಕಲಾವಿದರಾದ ಘಟಂ ಕೃಷ್ಣ, ಉಮ್ಮತ್ತೂರು ಬಸವರಾಜು, ರಾಮಣ್ಣ ಸೇರಿದಂತೆ ವಿದ್ಯಾರ್ಥಿನಿಯರು ಹಾಜರಿದ್ದರು.