ಸಾರಾಂಶ
ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರಾವಣ ಶನಿವಾರ ಸಂಪನ್ನಗೊಂಡಿತು. ವಿಶೇಷ ಪೂಜೆ, ಮಂಗಳಾರತಿ ನೆರವೇರಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಸಮೀಪದ ಕಕ್ಕುಂದಕಾಡು ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರಥಮ ಶ್ರಾವಣ ಶನಿವಾರ ಭಕ್ತಾದಿಗಳ ಸಂಗಮದೊಂದಿಗೆ ಶ್ರದ್ಧಾ ಭಕ್ತಿಯಿಂದ ಸಂಪನ್ನಗೊಂಡಿತು.ಪ್ರತಿವರ್ಷದಂತೆ ಶ್ರಾವಣ ಶನಿವಾರ ಪ್ರಯುಕ್ತ ದೇವಾಲಯದಲ್ಲಿ ಶನಿವಾರ ಬೆಳಗ್ಗೆ ಏಳು ಗಂಟೆಗೆ ಅಭಿಷೇಕ, 11 ಗಂಟೆಯಿಂದ 12 ಗಂಟೆವರೆಗೆ ನೆರೆದ ಭಕ್ತಾದಿಗಳು ತಮ್ಮ ಭಕ್ತಿ ಅನುಸಾರ ವಿವಿಧ ಪೂಜಾ ಕೈಂಕರ್ಯಗಳು ಸೇವೆಯ , ಸಂಕಲ್ಪ ನೆರವೇರಿಸಿ ಭಕ್ತಿ ಪರವಶರಾದರು. ಮಧ್ಯಾಹ್ನ 12:30 ಕ್ಕೆ ವೆಂಕಟೇಶ್ವರನಿಗೆ ವಿಶೇಷ ಮಹಾಪೂಜೆ, ಮಹಾಮಂಗಳಾರತಿಯ ಕಾರ್ಯಕ್ರಮಗಳು ಶ್ರದ್ದಾಭಕ್ತಿಯಿಂದ ನೆರವೇರಿಸಲಾಯಿತು. ನೆರೆದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಿಸಿದ ಬಳಿಕ ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ದೇವಾಲಯದ ಮುಖ್ಯ ಅರ್ಚಕ ಸುಧೀರ ಅವರು ಪೂಜಾ ಕೈಂಕರ್ಯಗಳು ನೆರವೇರಿಸಿಕೊಟ್ಟರು. ದೇವಸ್ಥಾನದಲ್ಲಿ ಶ್ರಾವಣ ಶನಿವಾರ ಪೂಜಾ ಕಾರ್ಯಕ್ರಮಗಳು ಅ. 31 ರ ವರೆಗೆ ನಡೆಯಲಿವೆ.
ಈ ಸಂದರ್ಭ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಟಿ. ಆರ್. ಶ್ರೀನಿವಾಸ, ಕಾರ್ಯ ಅಧ್ಯಕ್ಷ ಟಿ. ಕೆ. ಸೂರ್ಯ ಕುಮಾರ್ , ಕಾರ್ಯದರ್ಶಿ ಟಿ. ಎನ್. ರಮೇಶ್, ಖಜಾಂಚಿ ಎಂ.ಪಿ ಗೋಪಾಲ, ನಿರ್ದೇಶಕರಾದ ರಾಧಾಕೃಷ್ಣ ರೈ, ಸೀನ, ಶ್ಯಾಮ್ ಮಂದಪ್ಪ ಇತರ ನಿರ್ದೇಶಕರು ಗ್ರಾಮ ಪಂಚಾಯಿತಿ ಅಧ್ಯಕ್ಷ ವನಜಾಕ್ಷಿ ರೇಣುಕೇಶ್, ಉಪ ಅಧ್ಯಕ್ಷ ಕುಲ್ಲೇಟಿರ ಹೇಮಾ ಅರುಣ್, ಹಿರಿಯರಾದ ಟಿ.ವಿ.ಶ್ರೀನಿವಾಸ್ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು.