ನಾಳೆ ತರೀಕೆರೆಯಲ್ಲಿ ಶ್ರೀ ಆದಿ ಶಂಕರಾಚಾರ್ಯ ವೃತ್ತ ಲೋಕಾರ್ಪಣೆ

| Published : Apr 11 2025, 12:37 AM IST

ಸಾರಾಂಶ

ತರೀಕೆರೆ, ಪಟ್ಟಣದ ದೇವರಪ್ಪ ಬೀದಿ, ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನ ಸಮೀಪ ನಿರ್ಮಿಸಿರುವ ಶ್ರೀ ಆದಿ ಶಂಕರಾಚಾರ್ಯರ ಮೂರ್ತಿ ಸಮೇತ ವೃತ್ತವನ್ನು ಏ.12 ರಂದು ಶ್ರೀ ಶೃಂಗೇರಿಯ ಶ್ರೀ ವಿಧುಶೇಖರ ಭಾರತೀ ಸ್ವಾಮಿ ಲೋಕಾರ್ಪಣೆ ಗೊಳಿಸಲಿದ್ದಾರೆ.

- ಶೃಂಗೇರಿಯ ಶ್ರೀ ವಿಧುಶೇಖರ ಭಾರತೀ ಸ್ವಾಮಿ ಉಪಸ್ಥಿತಿ । ವಿಪ್ರ ವಿದ್ಯಾರ್ಥಿ ವೇದಿಕೆ ಪರಿಕಲ್ಪನೆ ಸಾಕಾರ

ಕನ್ನಡಪ್ರಭ ವಾರ್ತೆ, ತರೀಕೆರೆಪಟ್ಟಣದ ದೇವರಪ್ಪ ಬೀದಿ, ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನ ಸಮೀಪ ನಿರ್ಮಿಸಿರುವ ಶ್ರೀ ಆದಿ ಶಂಕರಾಚಾರ್ಯರ ಮೂರ್ತಿ ಸಮೇತ ವೃತ್ತವನ್ನು ಏ.12 ರಂದು ಶ್ರೀ ಶೃಂಗೇರಿಯ ಶ್ರೀ ವಿಧುಶೇಖರ ಭಾರತೀ ಸ್ವಾಮಿ ಲೋಕಾರ್ಪಣೆ ಗೊಳಿಸಲಿದ್ದಾರೆ.

ವಿಪ್ರ ವಿದ್ಯಾರ್ಥಿ ವೇದಿಕೆ, ಬ್ರಾಹ್ಮಣ ಸೇವಾ ಸಮಿತಿ ಹಾಗೂ ಶ್ರೀ ಶಾಂಕರ ಪ್ರಜ್ಞಾ ವೇದಿಕೆ ಸಹಕಾರದಲ್ಲಿ ನಿರ್ಮಾಣ ಮಾಡಲಾದ ಶ್ರೀ ಶಂಕರಾ ಚಾರ್ಯರ ವೃತ್ತದಲ್ಲಿ ಶ್ರೀ ಶಂಕರರ ಮೂರ್ತಿಯನ್ನು ವಿಶೇಷ ವಾಸ್ತು ಶೈಲಿಯಲ್ಲಿ ನಿರ್ಮಿಸಿದ ಮಂಟಪದಲ್ಲಿ ಪ್ರತಿಷ್ಠಾಪಿಸಿ ಸುಂದರ ಆ ಪರಿಕಲ್ಪನೆಗೆ ಜೀವ ತುಂಬಿದಂತೆ ನಿರ್ಮಿಸಿ ಲೋಕಾರ್ಪಣೆಗೆ ಸಜ್ಜುಗೊಳಿಸಲಾಗಿದೆ.

ನನಸಾದ ಕನಸು: ತರೀಕೆರೆಯಲ್ಲಿ 1999ರಲ್ಲಿ ಪ್ರಾರಂಭವಾದ ವಿಪ್ರ ವಿದ್ಯಾರ್ಥಿ ವೇದಿಕೆ ಆರಂಭದಿಂದಲೂ ಅನೇಕ ಸಾಂಸ್ಕೃತಿಕ, ಧಾರ್ಮಿಕ ಚಟುವಟಿಕೆ ನಡೆಸುತ್ತಾ ಬಂದಿದೆ. ವೇದಿಕೆಯ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಪಟ್ಟಣದಲ್ಲಿ ಶ್ರೀ ಆದಿ ಶಂಕರಾಚಾರ್ಯ ವೃತ್ತ ನಿರ್ಮಿಸುವ ಮಹತ್ತರ ಕಾರ್ಯಕ್ಕೆ ಮುನ್ನುಡಿ ಬರೆದು ಒಂದು ಶುಭ ಮುಹೂರ್ತದಲ್ಲಿ ಶಾಸ್ತ್ರೋಕ್ತವಾಗಿ ಪ್ರಾರಂಭವಾದ ನಿರ್ಮಾಣ ಕಾರ್ಯ ಒಂದೇ ವರ್ಷದಲ್ಲಿ ಅಂದರೆ ನಿಗದಿತ ವೇಳೆಯಲ್ಲೇ ಪೂರ್ಣಗೊಳಿಸಿ ತನ್ನ ಕನಸನ್ನು ನನಸಾಗಿಸಿ ಕೊಂಡಿದೆ.

ಶ್ರೀ ಶಂಕರಾಚಾರ್ಯ ಮೂರ್ತಿ ಸಮೇತ ವೃತ್ತ ಲೋಕಾರ್ಪಣೆ ಇಡೀ ತರೀಕೆರೆಯಲ್ಲೆ ಹಬ್ಬದ ವಾತಾವರಣ ಮೂಡಿಸಿದೆ. ಶೃಂಗೇರಿಯೊಂದಿಗೆ ಪ್ರಾಚೀನ ಕಾಲದಿಂದ ಅವಿನಾಭಾವ ಸಂಬಂದ ತರೀಕೆರೆಗೆ ಇದೆ. ಇಡೀ ಜಿಲ್ಲೆಯಲ್ಲೇ ಶ್ರೀ ಗುರು ಪೀಠದ ಸನ್ನಿಧಾನದಲ್ಲಿ ತರೀಕೆರೆ ನಾಗರಿಕರು ಅಚಲ ಭಕ್ತಿ ಶ್ರದ್ಧೆಯಿಂದ ನಡೆದುಕೊಳ್ಳುತ್ತಾ ಬಂದಿದ್ದಾರೆ. ಶೃಂಗೇರಿ ಶ್ರೀ ಶಾರದ ಪೀಠಾಧೀಶರಾದ ಶ್ರೀ ಭಾರತಿತೀರ್ಥ ಸ್ವಾಮಿಗಳ ಪೂರ್ವಾನುಗ್ರಹದೊಂದಿಗೆ ವಿಧುಶೇಖರ ಭಾರತೀ ಶ್ರೀಗಳು ವೃತ್ತ ಲೋಕಾರ್ಪಣೆಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಶ್ರೀಗಳ ದರ್ಶನ ಮತ್ತು ಸ್ವಾಗತಕ್ಕೆ ತರೀಕೆರೆ ಸಜ್ಜಾಗಿದೆ. ಶ್ರೀ ಶಂಗೇರಿ ಪೀಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ನೀಲನಕ್ಷೆ ತಯಾರಿ ಯಿಂದ ಹಿಡಿದು ಸ್ಥಳ ಪರಿಶೀಲಿಸಿ, ನಿರ್ಮಾಣದ ಪ್ರತಿ ಹಂತದ ಪ್ರಗತಿ ವೀಕ್ಷಿಸಿ ಅನುಗ್ರಹಿಸಿರುವ ಶಂಕರಾಚಾರ್ಯ ವೃತ್ತದ ಪರಿಕಲ್ಪನೆ ಸಾಕಾರಕ್ಕೆ ಶ್ರಮಿಸಿದ ಪಟ್ಟಣದ ವಿಪ್ರ ವಿದ್ಯಾರ್ಥಿ ವೇದಿಕೆ ಆಶಯದಂತೆ ಬೆಂಗಳೂರಿನ ಹೆಸರಾಂತ ಆರ್ಕಿಟೆಕ್ಟ್, ಶ್ರೀ ಕುಕ್ಕೆ ಸುಬ್ರಹ್ಮಣ್ಯ, ಕುಕ್ಕೆ ಆರ್ಕಿಟೆಕ್ಟ್ಸ್ ಅತ್ಯಂತ ಸುಂದರವಾಗಿ ವಿನ್ಯಾಸಗೊಳಿಸಿದ್ದಾರೆ. ವೃತ್ತದ ವಿನ್ಯಾಸ ಹೊಯ್ಸಳ ವಾಸ್ತುಶಿಲ್ಪದಂತೆ, ಮೇಲ್ಚಾವಣಿ ಕೇರಳದ ಕಾಲಟಿ ದೇವಸ್ಥಾನ ಮಾದರಿಯಲ್ಲಿ ನಿರ್ಮಿಸಿದ್ದು ನಾಡಿನ ಹೆಸರಾಂತ ಶಿಲ್ಪಿ ಮೈಸೂರಿನ ಸೂರ್ಯಪ್ರಕಾಶ್ (ಶ್ರೀ ಯೋಗಿರಾಜ್ ಅವರ ಪುತ್ರ) ಶ್ರೀ ಶಂಕರರ ವಿಗ್ರಹವನ್ನು ಕೆತ್ತಿದ್ದಾರೆ. ಒಟ್ಟಾರೆ ಈ ನೂತನ ವೃತ್ತ ತರೀಕೆರೆಯ ಒಂದು ಪ್ರಮುಖ ಹೆಗ್ಗುರುತಾದರೂ ಅಚ್ಚರಿ ಪಡಬೇಕಿಲ್ಲ. -- ಬಾಕ್ಸ್--

ವೃತ್ತ ಲೋಕಾರ್ಪಣೆ ಹರ್ಷ ತಂದಿದೆ

ಪಟ್ಟಣದಲ್ಲಿ ಶ್ರೀ ಆದಿ ಶಂಕರಾಚಾರ್ಯ ವೃತ್ತ ನಿರ್ಮಿಸಬೇಕೆಂಬುದು ನಮ್ಮ ಮಹತ್ತರ ಕನಸಾಗಿದ್ದು, ವೇದಿಕೆ ಬೆಳ್ಳಿಹಬ್ಬದ ಈ ಸಂದರ್ಭದಲ್ಲಿ ಅದು ನನಸಾಗುತ್ತಿರುವುದು ಸಂತಸ ತಂದಿದೆ ಎಂದು ವೇದಿಕೆ ಅರುಣ್ ಬಾರ್ಗವ ನೀರುಗುಂದ ಹರ್ಷ ವ್ಯಕ್ತಪಡಿಸಿದ್ದಾರೆ.

9ಕೆಟಿಆರ್.ಕೆ.25ಃ ತರೀಕೆರೆಯಲ್ಲಿ ನಿರ್ಮಿಸಿರುವ ಶ್ರೀಮಜದ್ಗುರು ಶ್ರೀ ಆದಿ ಶಂಕರಾಚಾರ್ಯ ವೃತ್ತಅವಧಿಯೊಳಗೆ ಮುಗಿದ ಗುಣಮಟ್ಟದ ಕಾಮಗಾರಿ: ಪ್ರತಿ ಷಷ್ಠಿಯ ರಥೋತ್ಸವಕ್ಕೆ ಹೆಸರಾದ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಸಮೀಪವೇ ವೃತ್ತ ನಿರ್ಮಾಣವಾಗಿರುವುದು ಧಾರ್ಮಿಕ ಶ್ರದ್ಧಾಕೇಂದ್ರದ ಮೆರುಗನ್ನು ಹೆಚ್ಚಿಸಲಿದೆ ಎನ್ನಬಹುದು ಲೋಕಾರ್ಪಣೆ ಕಾರ್ಯಕ್ಕೆ ಸಕಲ ಸಿದ್ದತೆ ನಡೆದಿದ್ದು, ಶ್ರೀ ಶಾಂಕರ ಪ್ರಜ್ಞಾ ವೇದಿಕೆ ಸಾಧಕರ ನಿಶ್ಚಿತ ಗುರಿ, ಪ್ರಾಮಾಣಿಕ ಪ್ರಯತ್ನದಿಂದ ಈ ಕಾರ್ಯ ನೇರವೇರುತ್ತಿದೆ.