ನಗರದ ಅಡವೀಂದ್ರಸ್ವಾಮಿ ಮಠದಲ್ಲಿ 2026ನೇ ಸಾಲಿನ ದಸರಾ ಮಹೋತ್ಸವ, 46ನೇ ವರ್ಷದ ಶ್ರೀದೇವಿ ಪುರಾಣ ಪ್ರವಚನ ಹಾಗೂ 12ನೇ ವರ್ಷದ ಶ್ರೀಅನ್ನಪೂರ್ಣೇಶ್ವರಿದೇವಿ ಮಹಾರಥೋತ್ಸವ ಅ.11 ರಿಂದ 23ರವರೆಗೆ ಜರುಗಲಿದೆ.
ಕನ್ನಡಪ್ರಭ ವಾರ್ತೆ ಗದಗ
ನಗರದ ಅಡವೀಂದ್ರಸ್ವಾಮಿ ಮಠದಲ್ಲಿ 2026ನೇ ಸಾಲಿನ ದಸರಾ ಮಹೋತ್ಸವ, 46ನೇ ವರ್ಷದ ಶ್ರೀದೇವಿ ಪುರಾಣ ಪ್ರವಚನ ಹಾಗೂ 12ನೇ ವರ್ಷದ ಶ್ರೀಅನ್ನಪೂರ್ಣೇಶ್ವರಿದೇವಿ ಮಹಾರಥೋತ್ಸವ ಅ.11 ರಿಂದ 23ರವರೆಗೆ ಜರುಗಲಿದೆ ಎಂದು ಜಾತ್ರಾಮಹೋತ್ಸವ ಸಮಿತಿ ಅಧ್ಯಕ್ಷ ಸಂತೋಷ ಕಬಾಡರ ಹೇಳಿದರು.ನಗರದ ಅಡವೀಂದ್ರಸ್ವಾಮಿ ಮಠದಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಮಠದ ಆರಾಧ್ಯ ದೇವತೆ ಶ್ರೀಅನ್ನಪೂರ್ಣೇಶ್ವರಿ ದೇವಿಯ ಮಹಾರಥೋತ್ಸವ ಅ.22ರಂದು ಮಹಿಳೆಯರಿಂದ ಜರುಗಲಿದೆ ಎಂದರು.
ಅ.11ರಂದು ಬೆಳಗ್ಗೆ 9ಕ್ಕೆ ಹಿರೇವಡ್ಡಟ್ಟಿಯ ಶ್ರೀ ವೀರೇಶ್ವರ ಶಿವಾಚಾರ್ಯ ಸ್ವಾಮಿಗಳಿಂದ ಧರ್ಮ ಧ್ವಜಾರೋಹಣ, ಸಂಜೆ 6.30ಕ್ಕೆ ಗದಗ ಶಿವಾನಂದ ಬ್ರಹನ್ಮಠದ ಜ. ಶ್ರೀಸದಾಶಿವಾನಂದ ಸ್ವಾಮಿಗಳ ಸಾನ್ನಿಧ್ಯದಲ್ಲಿ ಘಟಸ್ಥಾಪನೆ ಹಾಗೂ ಶ್ರೀದೇವಿ ಪುರಾಣ ಪ್ರಾರಂಭೋತ್ಸವ ಜರುಗಲಿದೆ ಎಂದು ತಿಳಿಸಿದರು.ಅ.13ಕ್ಕೆ ಲಲಿತ ಸಹಸ್ರನಾಮ ಪಠಣ, ಶ್ರೀದೇವಿಗೆ ಹಾಗೂ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಅ.15ರಂದು ಮಹಿಳೆಯರಿಗಾಗಿ ಅಡುಗೆ ಸ್ಪರ್ಧೆ, ಅ.16ಕ್ಕೆ ಶ್ರೀದೇವಿಗೆ ಹಾಗೂ ಮುತೈದೆಯರಿಗೆ ಅರಿಷಿಣ, ಕುಂಕುಮ ಬಳೆಸೇವೆ ನಡೆಯಲಿದೆ. ಅ.20ಕ್ಕೆ ಆಯುಧಪೂಜೆ, ಕುಮಾರಿ ಪೂಜೆ ಹಾಗೂ ಶ್ರೀದೇವಿ ಪುರಾಣಮಂಗಲೋತ್ಸವ ನಡೆಯಲಿದೆ. ಅ.21ರಂದು ಬೆಳಗ್ಗೆ 10ಕ್ಕೆ ಹರಗುರು ಚರ ಮೂರ್ತಿಗಳಿಂದ ತೇರಿನ ಕಳಸಾರೋಹಣ, ಬೆಳಗ್ಗೆ 11ಕ್ಕೆ ಜ.ರೇಣುಕಾಚಾರ್ಯ ಮಂದಿರದ ಶ್ರೀಚಂದ್ರಶೇಖರ ದೇವರ ಸಾನ್ನಿಧ್ಯದಲ್ಲಿ ವಿಜಯದಶಮಿ ಬನ್ನಿ ಮುಡಿಯುವ ಕಾರ್ಯಕ್ರಮ ಜರುಗಲಿದೆ ಎಂದರು.
ಅ.22ಕ್ಕೆ ಬೆಳಗ್ಗೆ 9.30ಕ್ಕೆ ಶ್ರೀಅನ್ನಪೂರ್ಣೇಶ್ವರಿ ದೇವಿಗೆ ಹಾಗೂ ಕತೃ ಗದ್ದುಗೆಗೆ ರುದ್ರಾಭಿಷೇಕ, ಶ್ರೀಮಠದ ಸಂಸ್ಥಾಪಕ ಶ್ರೀಗಳ ಪುಣ್ಯಸ್ಮರಣೋತ್ಸವ, ಮಹಾಪ್ರಸಾದ, ಮಧ್ಯಾಹ್ನ 12 ಕ್ಕೆ ಚೊಚ್ಚಲ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮ, ಸಂಜೆ 5ಕ್ಕೆ ಶ್ರೀಅನ್ನಪೂರ್ಣೇಶ್ವರಿದೇವಿ ಮಹಾರಥೋತ್ಸವ ಸದ್ಭಕ್ತ ಮಹಿಳೆಯರಿಂದ ಸಂಭ್ರಮದಿಂದ ಜರುಗುವುದು. ಸಂಜೆ 7.30ಕ್ಕೆ ಬಿ.ಬಿ.ಬಣ್ಣದ ಜಾನಪದ ಕಲಾಮೇಳದವರಿಂದ ಶ್ರೀದೇವಿ ಮಹಾತ್ಮೆ ದೊಡ್ಡಾಟ ಪ್ರದರ್ಶನಗೊಳ್ಳಲಿದೆ. ಅ.3ರಂದು ಸಂಜೆ 6.30ಕ್ಕೆ ಪುರವಂತರ ಸಮ್ಮುಖದಲ್ಲಿ ವಾದ್ಯ-ವೈಭವದೊಂದಿಗೆ ಕಡುಬಿನ ಕಾಳಗ ಜರುಗಲಿದೆ ಎಂದು ಹೇಳಿದರು.ಜಾತ್ರಾಮಹೋತ್ಸವ ಸಮಿತಿ ಗೌರವಾಧ್ಯಕ್ಷ ಸದಾಶಿವಯ್ಯ ಮದರಿಮಠ ಹಾಗೂ ಚಂದ್ರು ಬಾಳಿಹಳ್ಳಿಮಠ ಮಾತನಾಡಿದರು.
ಜಾತ್ರಾಮಹೋತ್ಸವ ಸಮಿತಿ ಕಾರ್ಯದರ್ಶಿ ಶಿವಪ್ರಭು ನೀಲಗುಂದ, ಕೋಶಾಧ್ಯಕ್ಷ ಪ್ರಭುಗೌಡ ಪಾಟೀಲ, ಮಹಿಳಾ ಅಧ್ಯಕ್ಷೆ ಶಿವಲೀಲಾ ಅಕ್ಕಿ, ಅಶ್ವಿನಿ ನೀಲಗುಂದ, ಬಿ.ಎಂ. ಬಿಳೆಯಲಿ, ಎಲ್.ಎಸ್. ನೀಲಗುಂದ, ಪ್ರೊ. ಕೆ.ಎಚ್. ಬೇಲೂರ, ಜಿ.ಎಂ. ಯಾನಮಶಟ್ಟಿ, ನಿಂಗಪ್ಪ ಬಳಿಗಾರ, ಪ್ರಕಾಶ ಅಕ್ಕಿ, ಎಸ್.ಎಸ್. ಪಾಟೀಲ, ಎನ್.ಕೆ. ನಾಲ್ವತ್ತವಾಡಮಠ, ಬಿ.ಬಿ. ಸಂಕನೂರ, ಪಿ.ಸಿ. ಪುರಾಣಿಕಮಠ, ಪ್ರಕಾಶ ಬಂಡಿ, ಸಿದ್ದಣ್ಣ ಜವಳಿ, ಮಾರುತಿ ಹೆಬ್ಬಾರ, ಬಸವರಾಜ ಬ್ಯಾಹಟ್ಟಿ, ಪ್ರಭುಗೌಡ ಪಾಟೀಲ, ಪ್ರವೀಣ ವಾರಕರ, ಸುಶೀಲಾ ಕೋಟಿ, ಗೌರಾದೇವಿ ಶಾಬಾದಿಮಠ, ಪ್ರಮಿಳಾದೇವಿ ಬಳಿಗಾರ, ಜಯಶ್ರೀ ಉಗಲಾಟದ, ಸುವರ್ಣ ಶಿವನಗೌಡರ, ಜ್ಯೋತಿ ದಾನಪ್ಪಗೌಡರ, ಶಿವಲೀಲಾ ಕುರಡಗಿ, ಸುವರ್ಣ ವಸ್ತ್ರದ, ಜಯಶ್ರೀ ವಸ್ತ್ರದ, ಗೀತಾಬಾಯಿ ಮುಲ್ಜಿ, ವೀಣಾ ಕಾವೇರಿ, ಅನ್ನಪೂರ್ಣ ಕಬಾಡರ, ಅಮೃತಾ ವಾರಕರ, ವೇದಾ ಬಿದರೂರ ಇತರರಿದ್ದರು.