ಸಾರಾಂಶ
ಎರಡು ದಿನಗಳಲ್ಲಿ ಹತ್ತು ಹಾಡುಗಳನ್ನು ಕಲಿಸಿ, ಹಾಡಿಸಲಾಯಿತು. ಸಂಜೆ ಸಮಾರೋಪದಲ್ಲಿ ಎಲ್ಲರಿಗೂ ಪ್ರಮಾಣಪತ್ರ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಮೈಸೂರು
ಕರ್ನಾಟಕ ಸುಗಮ ಸಂಗೀತ ಪರಿಷತ್ತು ಜಿಲ್ಲಾ ಘಟಕವು ಹೂಟಗಳ್ಳಿ ಕೆಎಚ್‌ಬಿ ಕಾಲೋನಿಯ ಶ್ರೀ ಅಂನೇತೇಶ್ವರ ಭವನದಲ್ಲಿ ಏರ್ಪಡಿಸಿದ್ದ ಸುಗಮ ಸಂಗೀತ ಕಲಿಕಾ ಶಿಬಿರಕ್ಕೆ ಭಾನುವಾರ ಸಂಜೆ ವರ್ಣರಂಜಿತ ತೆರೆ ಬಿದ್ದಿತು.ಎದೆತುಂಬಿ ಹಾಡುವೆನು ಖ್ಯಾತಿಯ ಬಿ.ವಿ. ಶ್ರೀನಿವಾಸ್ ಹಾಗೂ ಖ್ಯಾತ ಗಾಯಕಿ ನಾಗಚಂದ್ರಿಕಾ ಭಟ್ ಅವರು ಶಿಬಿರ ನಡೆಸಿಕೊಟ್ಟರು. ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ ವಿ. ಬೈರಿ, ಕವಿ ಜಯಪ್ಪ ಹೊನ್ನಾಳಿ, ಎಂಜಿನಿಯರ್ ವೀರೇಶ್, ಗಾಯಕರಾದ ಉಪ್ಪುಂದ ರಾಜೇಶ್ ಪಡಿಯಾರ್, ಎನ್. ಬೆಟ್ಟೇಗೌಡ, ನ. ಗಂಗಾಧರಪ್ಪ ಮೊದಲಾದವರು ಪಾಲ್ಗೊಂಡಿದ್ದರು.
ಎರಡು ದಿನಗಳಲ್ಲಿ ಹತ್ತು ಹಾಡುಗಳನ್ನು ಕಲಿಸಿ, ಹಾಡಿಸಲಾಯಿತು. ಸಂಜೆ ಸಮಾರೋಪದಲ್ಲಿ ಎಲ್ಲರಿಗೂ ಪ್ರಮಾಣಪತ್ರ ನೀಡಲಾಯಿತು. ಸುಮಾರು 110ಕ್ಕೂ ಹೆಚ್ಚು ಮಂದಿ ಶಿಬಿರದಲ್ಲಿ ಪಾಲ್ಗೊಂಡಿದ್ದರು.ಉದ್ಘಾಟನಾ ಸಮಾರಂಭದಲ್ಲಿ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ, ಕಾರ್ಯಾಧ್ಯಕ್ಷ ಕಿಕ್ಕೇಶಿ ಕೃಷ್ಣಮೂರ್ತಿ. ಕಾರ್ಯದರ್ಶಿ ಬಿ.ವಿ. ಪ್ರವೀಣ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಮತ್ತಿತರರು ಭಾಗವಹಿಸಿದ್ದರು.