ಶ್ರೀ ಅರ್ಕೇಶ್ವರಸ್ವಾಮಿ ದೇಗುಲ ಜೀರ್ಣೋದ್ಧಾರ

| Published : Nov 01 2025, 01:15 AM IST

ಸಾರಾಂಶ

ರಾಮನಗರ: ನಗರದ ಶ್ರೀ ಅರ್ಕೇಶ್ವರಸ್ವಾಮಿ ದೇವಾಲಯ ಜೀರ್ಣೋದ್ಧಾರ ಧಾರ್ಮಿಕ ಕಾರ್ಯಕ್ಕೆ ಬೆಂಗಳೂರಿನ ವಿಜಯನಗರ ಕ್ಷೇತ್ರ ಶಾಸಕ ಎಂ.ಕೃಷ್ಣಪ್ಪ ಅವರ ಪುತ್ರ ಪ್ರದೀಪ್ ಎಂ.ಕೃಷ್ಣಪ್ಪ ಭೇಟಿ ನೀಡಿ 10 ಲಕ್ಷ ರು.ಗಳ ಸಹಾಯಧನ ಚೆಕ್ ವಿತರಣೆ ಮಾಡಿದರು.

ರಾಮನಗರ: ನಗರದ ಶ್ರೀ ಅರ್ಕೇಶ್ವರಸ್ವಾಮಿ ದೇವಾಲಯ ಜೀರ್ಣೋದ್ಧಾರ ಧಾರ್ಮಿಕ ಕಾರ್ಯಕ್ಕೆ ಬೆಂಗಳೂರಿನ ವಿಜಯನಗರ ಕ್ಷೇತ್ರ ಶಾಸಕ ಎಂ.ಕೃಷ್ಣಪ್ಪ ಅವರ ಪುತ್ರ ಪ್ರದೀಪ್ ಎಂ.ಕೃಷ್ಣಪ್ಪ ಭೇಟಿ ನೀಡಿ 10 ಲಕ್ಷ ರು.ಗಳ ಸಹಾಯಧನ ಚೆಕ್ ವಿತರಣೆ ಮಾಡಿದರು.

ಸಮಿತಿಯ ಪದಾಧಿಕಾರಿಗಳಿಗೆ ಚೆಕ್ ಹಸ್ತಾಂತರಿಸಿದ ಪ್ರದೀಪ್ ಎಂ.ಕೃಷ್ಣಪ್ಪ , ಪುರಾತನ ದೇವಾಲಯಗಳು ಜನರಿಗೆ ನೆಮ್ಮದಿಯನ್ನು ನೀಡುವ ತಾಣಗಳ ಜೊತೆಗೆ ನಮ್ಮ ಸಾಂಸ್ಕೃತಿಕ, ಧಾರ್ಮಿಕ ನೆಲೆಗಟ್ಟನ್ನು ಹೆಚ್ಚಿಸಿವೆ, ಅಂತಹ ಪುರಾತನ ದೇವಾಲಯ ಜೀರ್ಣೋದ್ಧಾರ ಮಾಡುವುದು ಇಂದಿನ ದಿನಗಳಲ್ಲಿ ದುಸ್ಸಾಹಸದ ಕೆಲಸವಾಗಿದೆ. ಸಮಿತಿಯವರ ಜೊತೆ ಕೈ ಜೋಡಿಸಿ ಆ ಕಾರ್ಯಕ್ಕೆ ನಮ್ಮ ತಂದೆಯವರ ನಿರ್ದೇಶನದಂತೆ ದೇವಾಲಯಕ್ಕೆ ನೆರವು ನೀಡುವ ಕೆಲಸ ಮಾಡಿದ್ದೇನೆ. ದೇವಾಲಯ ನಿರ್ಮಾಣ ಕಾರ್ಯ ಬೇಗ ನಡೆದು ಲೋಕಾರ್ಪಣೆಯಾಗಲಿ ಎಂದು ಹೇಳಿದರು.

ಶ್ರೀ ಅರ್ಕೇಶ್ವರಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸಿಎನ್‌ಆರ್ ವೆಂಕಟೇಶ್ ಮಾತನಾಡಿ, ಅರ್ಕಾವತಿ ದಂಡೆಯಲ್ಲಿರುವ ದಕ್ಷಿಣಾಭಿಮುಖವಾಗಿರುವ ಶ್ರೀ ಅರ್ಕೆಶ್ವರ ದೇವಾಲಯ ಇಲ್ಲಿನ ವಿಶೇಷವಾಗಿದೆ. ಇದಕ್ಕೆ ಪುರಾತನ ಇತಿಹಾಸವಿದ್ದು, ಈಗ ಜೀಣೋದ್ದಾರ ಕಾರ್ಯ ನಡೆಯುತ್ತಿದೆ. ಇದಕ್ಕೆ ನೆರವು ನೀಡುವಂತೆ ಸಮಿತಿಯ ಪರವಾಗಿ ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಅವರಲ್ಲಿ ಮನವಿ ಮಾಡಿದ್ದೆವು. ಇಂದು ಅವರ ಪುತ್ರ ಪ್ರದೀಪ್ ಎಂ.ಕೃಷ್ಣಪ್ಪ ಮೂಲಕ 10 ಲಕ್ಷ ರು. ನೆರವು ನೀಡಿ ಜೀರ್ಣೋದ್ಧಾರ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಅವರಿಗೆ ಸಮಿತಿಯ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಶ್ರೀ ಅರ್ಕೇಶ್ವರಸ್ವಾಮಿ ಸೇವಾ ಸಂಘದ ಕಾರ್ಯದರ್ಶಿ ಎಸ್.ಟಿ.ನಂದೀಶ್, ಖಜಾಂಚಿ ಕೆ.ಆರ್.ನಾಗೇಶ್, ಸಮಿತಿ ಸದಸ್ಯರಾದ ಅರ್ಕೇಶ್ವರ, ಚಂದ್ರಶೇಖರ್, ಪುಟ್ಟರಾಜು, ಪಾರುಪತ್ತೇದಾರರಾದ ಮುದುರೈವೀರನ್, ನಗರಸಭಾ ಸದಸ್ಯ ಸೋಮಶೇಖರ್, ಮುಖಂಡರಾದ ಬಾನಂದೂರು ಗಂಗಾಧರ್, ವಕೀಲ ಮಂಜೇಶ್‌ಗೌಡ ಮತ್ತಿತರರು ಹಾಜರಿದ್ದರು.

31ಕೆಆರ್ ಎಂಎನ್ 5.ಜೆಪಿಜಿ

ರಾಮನಗರದ ಶ್ರೀ ಅರ್ಕೇಶ್ವರಸ್ವಾಮಿ ದೇವಾಲಯ ಜೀರ್ಣೋದ್ಧಾರ ಧಾರ್ಮಿಕ ಕಾರ್ಯಕ್ಕೆ ಬೆಂಗಳೂರಿನ ವಿಜಯನಗರ ಕ್ಷೇತ್ರ ಶಾಸಕ ಎಂ.ಕೃಷ್ಣಪ್ಪ ಅವರ ಪುತ್ರ ಪ್ರದೀಪ್ ಎಂ.ಕೃಷ್ಣಪ್ಪ 10 ಲಕ್ಷ ರು.ಗಳ ಸಹಾಯಧನ ಚೆಕ್ ವಿತರಣೆ ಮಾಡಿದರು.