ಸಾರಾಂಶ
ಹೊನ್ನಾಳಿ ತಾಲೂಕಿನ ಬೀರಗೊಂಡನಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
- ದಿಡಗೂರು, ಹೀರೆಬಾಸೂರು ಇನ್ನಿತರ ಗ್ರಾಮಗಳ ಭಕ್ತರು ಭಾಗಿ - - - ಹೊನ್ನಾಳಿ: ತಾಲೂಕಿನ ಬೀರಗೊಂಡನಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಶ್ರೀ ಬಸವಣ್ಣ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆಸಿದ ನಂತರ ತಾಲೂಕಿನ ದಿಡಗೂರು, ಹೀರೆಬಾಸೂರು ಗ್ರಾಮದ ಆಂಜನೇಯಸ್ವಾಮಿ ದೇವರ ಉತ್ಸವ ಮೂರ್ತಿಗಳು ರಥದ ಸುತ್ತಲು ಮೂರು ಸುತ್ತು ಪ್ರದಕ್ಷಿಣೆ ನಡೆಸಿದವು. ಬಳಿಕ ಬಲಿ ಅನ್ನವನ್ನು ತಂದು ರಥೋತ್ಸವಕ್ಕೆ ಪೂಜೆ ಸಲ್ಲಿಸಲಾಯಿತು. ರಥಕ್ಕೆ ಬಲಿಅನ್ನ ನೈವೆದ್ಯ ಮಾಡಲಾಯಿತು.ಶ್ರೀ ಬಸವೇಶ್ವರ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿದ ಬಳಿಕ ನೆರೆದಿದ್ದ ಭಕ್ತರು ಶ್ರೀಬಸವೇಶ್ವರ ಸ್ವಾಮಿಗೆ ಜೈಕಾರದೊಂದಿಗೆ ರಥವನ್ನು ಎಳೆದರು. ರಥೋತ್ಸವ ಮುಂದೆ ಹೋಗುತ್ತಿದ್ದಂತೆ ಭಕ್ತರು ಅದರಲ್ಲೂ ಮಹಿಳೆಯರು ಮಂಡಕ್ಕಿ, ಮೆಣಸಿನ ಕಾಳು ಜೊತೆಗೆ ಬಾಳೆಹಣ್ಣು, ತೆಂಗಿನಕಾಯಿ ಸಮರ್ಪಿಸಿ ಭಕ್ತಿ ಮೆರೆದರು.
ರಥೋತ್ಸವ ಅಂಗವಾಗಿ ರಥಕ್ಕೆ ಬಣ್ಣಬಣ್ಣದ ಬಾವುಟಗಳು ಹಾಗೂ ಹೂವಿನ ಹಾರಗಳಿಂದ ಅಲಂಕಾರ ಮಾಡಲಾಗಿತ್ತು. ಜೊತೆಗೆ ಗ್ರಾಮದ ವಿವಿಧ ದೇವಸ್ಥಾನಗಳಿಗೆ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ರಥೋತ್ಸವ ಅಂಗವಾಗಿ ಶನಿವಾರ ಬೆಳಗ್ಗೆಯಿಂದಲೇ ಶ್ರೀ ಬಸವೇಶ್ವರ ಸ್ವಾಮಿಗೆ ವಿವಿಧ ಧಾರ್ಮಿಕ ಪೂಜೆಗಳ ನೆರವೇರಿಸಲಾಯಿತು.- - - -12ಎಚ್.ಎಲ್.ಐ2:
ಬೀರಗೊಂಡನಹಳ್ಳಿಯಲ್ಲಿ ಶ್ರೀ ಬಸವೇಶ್ವರ ರಥೋತ್ಸವ ನಡೆಯಿತು.