ಏ.18 ರಂದು ಶ್ರೀ ದೊಡ್ಡಕೇರಮ್ಮ ನೂತನ ದೇವಾಲಯ ಲೋಕಾರ್ಪಣೆ

| Published : Apr 14 2025, 01:18 AM IST

ಏ.18 ರಂದು ಶ್ರೀ ದೊಡ್ಡಕೇರಮ್ಮ ನೂತನ ದೇವಾಲಯ ಲೋಕಾರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ಒಂದೂವರೆ ಕೋಟಿ ರು ವೆಚ್ಚದಲ್ಲಿ ಶ್ರೀ ದೊಡ್ಡಕೇರಮ್ಮ ದೇವಿಯ ಭವ್ಯ ದೇವಾಲಯ ಹಾಗೂ 50 ಲಕ್ಷ ರು. ವೆಚ್ಚದಲ್ಲಿ ಐದು ಅಂತಸ್ತುಗಳ ಭವ್ಯ ರಥವನ್ನು ತೇಗದ ಮರದಿಂದ ನೂತನವಾಗಿ ನಿರ್ಮಿಸಲಾಗಿದೆ. ಎರಡು ದಿನಗಳ ಪೂಜಾ ಕಾರ್ಯಕ್ರಮಗಳು ಹಾಗೂ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ಗ್ರಾಮ ದೇವತೆ ಶ್ರೀದೊಡ್ಡಕೇರಮ್ಮ ತಾಯಿ ನೂತನ ದೇವಾಲಯ ಲೋಕಾರ್ಪಣೆ, ದೇವಾಲಯ ಕಳಸ ಪ್ರತಿಷ್ಠಾನ ಹಾಗೂ ದೇವಿ ಶ್ರೀ ರಥದ ಸಮರ್ಪಣೆ ಸಮಾರಂಭ ಏ.18 ರಂದು ನಡೆಯಲಿದೆ ಎಂದು ದೇವಾಲಯ ಸಮಿತಿ, ಪುರ ಪ್ರಮುಖರು ತಿಳಿಸಿದರು.

ದೇವಾಲಯ ಸಮಿತಿ ಮುಖ್ಯಸ್ಥರು ಹಾಗೂ ಪುರ ಪ್ರಮುಖರಾದ ಪಟೇಲ್ ಚಂದ್ರಶೇಖರ್, ಹೆಗ್ಗಡಿ ಕೆ.ಎನ್.ಕೃಷ್ಣೇಗೌಡ ಹಾಗೂ ಪುರಸಭೆ ಸದಸ್ಯ ಕೆ.ಎಸ್.ಪ್ರಮೋದ್ ಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿ ಕಾರ್ಯಕ್ರಮದ ಮಾಹಿತಿ ಬಿಡುಗಡೆ ಮಾಡಿದರು.

ಒಂದೂವರೆ ಕೋಟಿ ರು ವೆಚ್ಚದಲ್ಲಿ ಶ್ರೀ ದೊಡ್ಡಕೇರಮ್ಮ ದೇವಿಯ ಭವ್ಯ ದೇವಾಲಯ ಹಾಗೂ 50 ಲಕ್ಷ ರು. ವೆಚ್ಚದಲ್ಲಿ ಐದು ಅಂತಸ್ತುಗಳ ಭವ್ಯ ರಥವನ್ನು ತೇಗದ ಮರದಿಂದ ನೂತನವಾಗಿ ನಿರ್ಮಿಸಲಾಗಿದೆ. ಎರಡು ದಿನಗಳ ಪೂಜಾ ಕಾರ್ಯಕ್ರಮಗಳು ಹಾಗೂ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಲಿದೆ ಎಂದರು.

ಕಾರ್ಯಕ್ರಮಕ್ಕೆ ಮೈಸೂರು ಕೊಡಗು ಲೋಕಸಭಾ ಸದಸ್ಯ ಮೈಸೂರು ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಒಡೆಯರ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಎಚ್.ಟಿ.ಮಂಜು, ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಮಾಜಿ ಶಾಸಕರಾದ ಕೆ.ಬಿ. ಚಂದ್ರಶೇಖರ್, ಬಿ.ಪ್ರಕಾಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಪುರಸಭೆ ಅಧ್ಯಕ್ಷೆ ಪಂಕಜಾ, ಉಪಾಧ್ಯಕ್ಷೆ ಸೌಭಾಗ್ಯ ಸೇರಿದಂತೆ ಪುರಸಭೆ ಎಲ್ಲಾ ಸದಸ್ಯರು, ದಾನಿಗಳು ಹಾಗೂ ಪಟ್ಟಣದ ನಾಗರಿಕರು ಭಾಗವಹಿಸುವರು.

ಬಸವಣ್ಣ, ರೇಣುಕಾರ ಜಯಂತಿ ಒಂದೇ ದಿನ ಆಚರಿಸುವುದು ಸರಿಯಲ್ಲ: ಮಂಜುನಾಥ್

ಪಾಂಡವಪುರ:

ವಿಶ್ವಗುರು ಬಸವಣ್ಣ ಮತ್ತು ಕಾಲ್ಪನಿಕ ವ್ಯಕ್ತಿ ರೇಣುಕಾರ ಜಯಂತಿಯನ್ನು ಒಂದೇ ದಿನ ಆಚರಿಸಲು ವೀರಶೈವ ಸಂಸ್ಥೆ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಮುಂದಾಗಿರುವ ನಡೆ ಸರಿಯಲ್ಲ ಎಂದು ಜಿಲ್ಲಾ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಬೆಟ್ಟಹಳ್ಳಿ ಮಂಜುನಾಥ್ ಖಂಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಹುದೇವರ ಆಚರಣೆ, ಮೂಡನಂಬಿಕೆ, ಕಂದಾಚಾರದ ಹೋಮ ಶಾಸ್ತ್ರ ಹೇಳುವ ಕಾಲ್ಪನಿಕ ವ್ಯಕ್ತಿ ರೇಣುಕಾಚಾರ್ಯರ ಪರಂಪರೆ ಯಾವುದೇ ಕಾರಣಕ್ಕೂ ಬಸವಣ್ಣನವರ ಜಯಂತಿ ಜೊತೆಯಲ್ಲಿ ಕಾಲ್ಪನಿಕ ವ್ಯಕ್ತಿ ಫೋಟೋ ಇಡಕೂಡದು ಎಂದು ಹೇಳಿದ್ದಾರೆ.

ಬಸವಣ್ಣನವರ ವಿಚಾರಗಳು, ಹೆಸರನ್ನು ಮರೆಮಾಚುವ ಕೆಲಸ ಮನುವಾದಿಗಳಿಂದ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯನವರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಕಡ್ಡಾಯವಾಗಿ ಭಾವಚಿತ್ರವನ್ನು ಇಡುವಂತೆ ಆದೇಶಿಸಿದೆ ಎಂದು ತಿಳಿಸಿದ್ದಾರೆ.

ಸರ್ಕಾರದ ರಜೆ ಜೊತೆ ಎಲ್ಲಾ ಕಚೇರಿಗಳನ್ನು ಎಲ್ಲಾ ಅಧಿಕಾರಿಗಳು ಒಳಗೊಂಡಂತೆ ಅರ್ಥಪೂರ್ಣವಾಗಿ ಆಚರಿಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಇದನ್ನು ಸಹಿಸದ ಪಟಭದ್ರ ಹಿತ ಶಕ್ತಿಗಳು ಬಸವಣ್ಣ ಬಸವಾದಿ ಶರಣರ ತತ್ವ ಆದರ್ಶಗಳಿಗೆ ತಳುಕು ಹಾಕುವ ದಿಕ್ಕು ತಪ್ಪಿಸುವ ಅವಿವೇಕದ ಕೆಲಸವನ್ನು ಮಾಡಬಾರದು ಎಂದು ಎಚ್ಚರಿಸಿದ್ದಾರೆ.