ತರೀಕೆರೆ, ಶ್ರೀ ಗುರು ರೇವಣಸಿದ್ದೇಶ್ವರಸ್ವಾಮಿ ದೇವಸ್ಥಾನ ಆವರಣದಲ್ಲಿ ಶ್ರೀ ಗುರು ರೇವಣಸಿದ್ದೇಶ್ವರಸ್ವಾಮಿ ನೂತನ ರಥವನ್ನು ಶ್ರೀ ಗುರು ರೇವಣಸಿದ್ದೇಶ್ವರ ಕುರುಬರ ಸಮಾಜದ ಅಧ್ಯಕ್ಷ, ಪದಾಧಿಕಾರಿ ಮತ್ತು ಸದಸ್ಯರಿಗೆ ಹಸ್ತಾಂತರ ಜತೆಗೆ ವಿವಿಧ ಪೂಜಾ ಕಾರ್ಯಕ್ರಮ ಗುರುವಾರ ನೇರವೇರಿತು.

- ಶಿಲ್ಪ ಕಲಾವಿದರಿಂದ ಶಾಸ್ತ್ರೋಕ್ತವಾಗಿ ಬಹುಸುಂದರ ರಥ ನಿರ್ಮಾಣ: ಟಿ.ಎಸ್.ರಮೇಶ್

ಕನ್ನಡಪ್ರಭ ವಾರ್ತೆ, ತರೀಕೆರೆ

ಶ್ರೀ ಗುರು ರೇವಣಸಿದ್ದೇಶ್ವರಸ್ವಾಮಿ ದೇವಸ್ಥಾನ ಆವರಣದಲ್ಲಿ ಶ್ರೀ ಗುರು ರೇವಣಸಿದ್ದೇಶ್ವರಸ್ವಾಮಿ ನೂತನ ರಥವನ್ನು ಶ್ರೀ ಗುರು ರೇವಣಸಿದ್ದೇಶ್ವರ ಕುರುಬರ ಸಮಾಜದ ಅಧ್ಯಕ್ಷ, ಪದಾಧಿಕಾರಿ ಮತ್ತು ಸದಸ್ಯರಿಗೆ ಹಸ್ತಾಂತರ ಜತೆಗೆ ವಿವಿಧ ಪೂಜಾ ಕಾರ್ಯಕ್ರಮ ಗುರುವಾರ ನೇರವೇರಿತು.

ತರೀಕೆರೆಯ ಶ್ರೀ ಗುರು ರೇವಣಸಿದ್ದೇಶ್ವರ ಕುರುಬರ ಸಮಾಜ, ಶ್ರೀ ಗುರು ರೇವಣಸಿದ್ದೇಶ್ವರ ಭಜನಾ ಮಂಡಳಿಯಿಂದ ನಡೆದ ಕಾರ್ಯಕ್ರಮದಲ್ಲಿ ನೂತನ ರಥ ಹಸ್ತಾಂತರ ಪ್ರಯುಕ್ತ ಹೋಮ, ವಿಶ್ವಕರ್ಮ ಹೋಮ, ನವಗ್ರಹ ಪೂಜೆ, ಶ್ರೀ ದುರ್ಗಾ ಹೋಮ, ರಥ ಪೂಜೆ ಇತ್ಯಾದಿ ಹಮ್ಮಿಕೊಳ್ಳಲಾಗಿತ್ತು.

ಶ್ರೀ ಗುರು ರೇವಣಸಿದ್ದೇಶ್ವರ ಕುರುಬರ ಸಮಾಜ ಅಧ್ಯಕ್ಷ ಟಿ.ಎಸ್.ರಮೇಶ್, ಪುರಸಭೆ ಸದಸ್ಯೆ ವಸಂತ ರಮೇಶ್, ಮತ್ತು ಟಿ.ಆರ್.ಪ್ರಸನ್ನ, ರೂಪ ವಿವಿಧ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಶ್ರೀ ಗುರು ರೇವಣಸಿದ್ದೇಶ್ವರ ಕುರುಬರ ಸಮಾಜ ಅಧ್ಯಕ್ಷ ಟಿ.ಎಸ್.ರಮೇಶ್ ಮಾತನಾಡಿ ಶ್ರೀ ಗುರು ರೇವಣ ಸಿದ್ದೇಶ್ವರಸ್ವಾಮಿ ನೂತನ ರಥ ನಿರ್ಮಾಣ ಸಮಾಜದ ಬಹು ದಿನದ ಕನಸು ದಾನಿಗಳು ಮತ್ತು ಸರ್ವರ ಸಹಕಾರದಿಂದ ಇಂದು ಈಡೇರಿದೆ. ಶಿಲ್ಪ ಕಲಾವಿದರು ಶಾಸ್ತ್ರೋಕ್ತವಾಗಿ ನಿಯಮ ಪಾಲಿಸಿ ಬಹುಸುಂದರವಾಗಿ ರಥ ನಿರ್ಮಾಣ ಮಾಡಿರುವುದು ಎಲ್ಲರಿಗೂ ಸಂತೋಷ ತಂದಿದೆ. ಧಾರ್ಮಿಕ ಪರಂಪರೆಯನ್ನು ಮುಂದಿನ ತಲೆಮಾರಿಗೆ ಉಳಿಸಲು ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಮುಂದುವರಿಯಬೇಕು.ಸಮಾಜವನ್ನು ಒಗ್ಗೂಡಿಸಿ ಇಂತಹ ಧಾರ್ಮಿಕ ಕಾರ್ಯಕ್ರಮ ಆಯೋಜಿಸುವುದು ಎಲ್ಲರಿಗೂ ಸಂತೋಷ ತಂದಿದೆ ಎಂದು ಹೇಳಿದರು.ಇದೇ ಪ್ರಥಮ ಬಾರಿಗೆ 2026 ಜ.14 ರಂದು ಶ್ರೀ ಗುರುರೇವಣಸಿದ್ದೇಶ್ವರ ಸ್ವಾಮಿ ರಥೋತ್ಸವ ವೈಭವದಿಂದ ನಡೆಯಲಿದ್ದು ಸರ್ವ ಭಕ್ತರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಸುಂದರವಾಗಿ ನೂತನ ರಥ ನಿರ್ಮಾಣ ಮಾಡಿರುವ ಶಿಲ್ಪಕಲಾವಿದರಿಗೆ ಕೃತಜ್ಞತೆ ಸಲ್ಲಿಸಿದರು.ಹಿರಿಯರಾದ ವಗ್ಗಪ್ಪರ ಮಂಜುನಾಥ್, ಎಂ.ರಂಗಪ್ಪ, ಪುರಸಭೆ ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ಖಚಾಂಚಿ ಸೋಮಶೇಖರ್, ಉಪಾಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಟಿ.ಜಿ.ಹರೀಶ್, ಖಚಾಂಚಿ ಸೋಮಶೇಖರ್ ಟಿ.ಎಸ್. ಶ್ರೀಧರ್, ಪುರಸಭೆ ಸದಸ್ಯರಾದ ಟಿ.ಜಿ.ಶಶಾಂಕ, ಟಿ.ಎಸ್.ಚೇತನ್, ನಿರ್ದೇಶಕ ಮಧು, ಶ್ರೀಧರ್, ಪ್ರಸನ್ನಕುಮಾರ್, ಟಿ.ಆರ್.ಇಂದ್ರಯ್ಯ, ರೇವಣ್ಣ, ಮಲ್ಲಿಕಾರ್ಜುನ, ಗೋವಿಂದಪ್ಪ, ಟಿ.ಎನ್.ಲೋಕೇಶ್,ಟಿ.ಎನ್.ಆನಂದ್, ಟಿ.ಸಿ.ದರ್ಶನ್ ಮತ್ತಿತರರು ಭಾಗವಹಿಸಿದ್ದರು.

1ಕೆಟಿಆರ್.ಕೆ.15ಃ

ತರೀಕೆರೆಯಲ್ಲಿ ನಡೆದ ಶ್ರೀ ಗುರು ರೇವಣಸಿದ್ದೇಶ್ವರಸ್ವಾಮಿ ನೂತನ ರಥ ಹಸ್ತಾಂತರ ಕಾರ್ಯಕ್ರಮದಲ್ಲಿ ಶ್ರೀ ಗುರು ರೇವಣ ಸಿದ್ದೇಶ್ವರ ಕುರುಬರ ಸಮಾಜ ಅಧ್ಯಕ್ಷ ಟಿ.ಎಸ್.ರಮೇಶ್, ಪುರಸಭೆ ಸದಸ್ಯರಾದ ಟಿ.ಜಿ.ಶಶಾಂಕ, ಟಿ.ಎಸ್.ಚೇತನ್ ಮತ್ತಿತರರು ಇದ್ದರು.