ಸಾರಾಂಶ
ದೇವಳದ ವತಿಯಿಂದ ಪೂಜ್ಯ ಶ್ರೀಗಳನ್ನು ಮಂಗಳವಾದ್ಯ ಹಾಗೂ ಪೂರ್ಣಕುಂಭದೊಂದಿಗೆ ಸ್ವಾಗತಿಸಿ ಬರಮಾಡಿಕೊಂಡು ಪಾದಪೂಜೆ ಮಾಡಿ ಫಲಪುಷ್ಪ ನೀಡಿ ಗೌರವಿಸಲಾಯಿತು. ನಂತರ ಸ್ವಾಮೀಜಿಯವರು ಶ್ರೀ ದುರ್ಗಾಂಬಾ ದೇವಿಗೆ ಆರತಿ ಬೆಳಗಿಸಿದರು.
ಕನ್ನಡಪ್ರಭ ವಾರ್ತೆ ಮಣಿಪಾಲ
ಇಲ್ಲಿನ ಶ್ರೀ ದುರ್ಗಾಂಬಾ ಮಂದಿರದ 22 ನೇ ವರ್ಷದ ಪ್ರತಿಷ್ಠಾ ವರ್ಧಂತಿ ಪರ್ವಕಾಲದಲ್ಲಿ ಭಾನುವಾರ ಗೋವಾದ ಶ್ರೀಕೈವಲ್ಯ ಮಠ ಸಂಸ್ಥಾನದ ಮಠಾಧಿಪತಿ ಶ್ರೀಮದ್ ಶಿವಾನಂದ ಸರಸ್ವತಿ ಶ್ರೀಪಾದರು ದೇವಳಕ್ಕೆ ಭೇಟಿ ನೀಡಿದರು.ದೇವಳದ ವತಿಯಿಂದ ಪೂಜ್ಯ ಶ್ರೀಗಳನ್ನು ಮಂಗಳವಾದ್ಯ ಹಾಗೂ ಪೂರ್ಣಕುಂಭದೊಂದಿಗೆ ಸ್ವಾಗತಿಸಿ ಬರಮಾಡಿಕೊಂಡು ಪಾದಪೂಜೆ ಮಾಡಿ ಫಲಪುಷ್ಪ ನೀಡಿ ಗೌರವಿಸಲಾಯಿತು. ನಂತರ ಸ್ವಾಮೀಜಿಯವರು ಶ್ರೀ ದುರ್ಗಾಂಬಾ ದೇವಿಗೆ ಆರತಿ ಬೆಳಗಿಸಿದರು.
ವರ್ಧಂತಿ ಪ್ರಯುಕ್ತ ಶ್ರೀದೇವಿಯ ಸನ್ನಿಧಿಯಲ್ಲಿ ಪಂಚದುರ್ಗಾ ಹವನ, ಸಾಮೂಹಿಕ ಕುಂಕುಮಾರ್ಚನೆ, ಮಲ್ಲಿಗೆಯ ವಿಶೇಷ ಅಲಂಕಾರ, ಮಹಾಪೂಜೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ಶಿವಾನಂದ ಭಟ್ ಅವರು ಪಂಚದುರ್ಗಾ ಹವನ ನಡೆಸಿಕೊಟ್ಟರು. ಸೇವಾದಾರದ ಉಷಾ ಪೈ, ಶ್ರೀಧರ್ ಪೈ ಉಪಸ್ಥಿತರಿದ್ದರು.
ಈ ಸಂದರ್ಭ ವೇದಮೂರ್ತಿ ಜಗದೀಶ್ ಭಟ್ ಕುಂದಾಪುರ, ವಿಘ್ನೇಶ್ ಭಟ್, ವಾಸುದೇವ ಭಟ್, ವೆಂಕಟರಮಣ ಭಟ್, ರಾಜೇಶ್ ಭಟ್, ನಾಗೇಶ್ ಭಟ್, ಶೈಲೇಶ್ ಭಟ್ ಮಲ್ಪೆ, ಶ್ರೀದುರ್ಗಾಂಬಾ ಟ್ರಸ್ಟ್‌ನ ಸದಸ್ಯರಾದ ಸಿ. ಆರ್. ಪೈ, ಗಣಪತಿ ಕಾಮತ್, ದಿವಾಕರ್ ಕಿಣಿ, ಗಣೇಶ್ ಪೈ, ಆತ್ಮರಾಮ ನಾಯಕ್, ಜಗದೀಶ್ ಪೈ, ಗುರುರಾಜ್ ನಾಯಕ್, ಶ್ರೀಮತಿ ಲಕ್ಷ್ಮೀ ಭಟ್, ಸಂತೋಷ್ ವಾಗ್ಲೆ, ಸಂದೀಪ್ ಭಟ್, ಟ್ರಸ್ಟ್ ನ ಪಧಾದಿಕಾರಿಗಳು ಹಾಗೂ ಶ್ರೀದುರ್ಗಾಂಬಾ ಮಹಿಳಾ ಮಂಡಳಿಯ ಸದಸ್ಯರು, ನೂರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು