ಸಾರಾಂಶ
ಆರ್ಯ ವೈಶ್ಯ ಮಂಡಳಿಯಿಂದ ಕಾರ್ಯಕ್ರಮ । ಗಣ್ಯರಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ, ತರೀಕೆರೆಆರ್ಯ ವೈಶ್ಯ ಮಂಡಳಿ ತರೀಕೆರೆ ವತಿಯಿಂದ ಶ್ರೀ ಕನ್ನಕಾ ಪರಮೇಶ್ವರಿ ಅಮ್ಮನ ಅಮೃತಮಹೋತ್ಸವದಲ್ಲಿ ಸಾಂಸ್ಕೃತಿಕ ಮತ್ತು ಸನ್ಮಾನ, ಕುಂಭಾಭಿಷೇಕ ಇತ್ಯಾದಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.ಕುಂಭಾಭಿಷೇಕ ಸಂಕಲ್ಪದೊಂದಿಗೆ ಕಾರ್ಯಕ್ರಮ ಶುಭಾರಂಭಗೊಂಡಿತು, ಕುಂಭಗಳ ಪೂಜೆ, ಮೆರವಣಿಗೆ, ದೇವಾಲಯದ ಗೋಪುರಕ್ಕೆ ತೀರ್ಥ ಅಭಿಷೇಕ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು, ಸಂಜೆ ವಾಸವಿ ಚರಿತ್ರೆ, ನೃತ್ಯ ರೂಪಕ ವಿಶೇಷ ಗಮನ ಸೆಳೆಯಿತು.ನಂತರ ಹೊಸನಗರ ಸುರೇಶ್ ಬಿ.ಎಸ್. ಹೊಸದುರ್ಗ ಸದ್ಗುರು ಆಯುರ್ವೇದ ಸೋಪು ತಯಾರಕ ಪ್ರದೀಪ್ ಡಿ.ಎಸ್. ಅರಕಲಗೂಡು ಸಾಹಿತಿ ಪಾಂಡುರಂಗ ಅವರನ್ನು ಸನ್ಮಾನಿಸಲಾಯಿತು.ಸುಪ್ರಬಾತ ಸೇವೆ, ನಗರ ಸಂಕೀರ್ತನೆ, ಗಂಗಾಪೂಜೆ, ಗಂಗೆ ಕಲಶವನ್ನು ಸುಮಂಗಲಿಯರು ಹಾಗೂ ಗಿರಿವನಸಿರಿಯ ಕಲ್ಲತ್ತಿಗಿರಿಯ ಪವಿತ್ರ ಗಂಗೆಯಿಂದ, ಜಲಾಭಿಷೇಕ, ಕ್ಷೀರಾಭಿಷೇಕ ನೆರವೇರಿತು. ಎಲ್ಲ ದೇವರಿಗೆ ಫಲ ಪಂಚಾಮೃತ ಅಭಿಷೇಕ, ತುಲಾಭಾರ ಸೇವೆ, ಬಾಲನಾಗರ ಪೂಜೆ, ಕನ್ನಿಕೆಯರ ಪೂಜೆ. ಅಮ್ಮನವರಿಗೆ ಮಡ್ಲಕ್ಕಿ, ಹರಕೆ ಕಾಣಿಕೆ, ಚದುವಿಂಪುಲು, ಪಟ್ಟು ಪೀತಾಂಬರ, ಲಕ್ಷ್ಮಿ ಕಾಸು ಅರ್ಪಣೆ, ದರ್ಪಣ ಸೇವೆ, ದಿವ್ಯ ಭೂಷಣ ಸ್ವರ್ಣ ಕಿರೀಟ ಅಲಂಕಾರ, ಅಷ್ಠಾವದನ ಸೇವೆ, ಭಜನೆ, ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ನೆರವೇರಿತು.ಸಂಜೆ ನಾದಸ್ವರ, ಚಂಡೆ ಮೇಳ ಮತ್ತು ಹೂವಿನ ಅಲಂಕಾರದೊಂದಿಗೆ ಶ್ರೀ ವಾಸವಾಂಭ ಉತ್ಸವ ಜರುಗಿತು. ವಾಸವಿ ಯುವಜನ ಸಂಘದವರಿಂದ ಸಮೀಪದ ಸೋಂಪುರದಲ್ಲಿ ಸಂಭ್ರಮದ ಹೋಳಿಯೊಂದಿಗೆ ಶ್ರೀ ಕನ್ಯಕಾ ಪರಮೇಶ್ವರಿ ಅಮ್ಮನವರ ಪ್ರತಿಷ್ಠಾಪನಾ ಅಮೃತ ಮಹೋತ್ಸವ ಸಂಪನ್ನಗೊಂಡಿತು.
25ಕೆಟಿಆರ್.ಕೆ.4ಃತರೀಕೆರೆಯಲ್ಲಿ ಆರ್ಯ ವೈಶ್ಯ ಮಂಡಳಿ ವತಿಯಿಂದ ಶ್ರೀ ವಾಸವಾಂಭ ಉತ್ಸವ ಜರುಗಿತು.