ಸ್ನೇಹ, ಪ್ರೇಮದ ಪ್ರತೀಕ ಶ್ರೀಕೃಷ್ಣ: ರೊ.ಬಿ ಪಿ ರವಿಕುಮಾರ್ ಅಭಿಮತ

| Published : Aug 20 2025, 01:30 AM IST

ಸಾರಾಂಶ

ತರೀಕೆರೆ, ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಹೋರಾಟ ಮಾಡಿ ಮಾದರಿಯಾದ ಶ್ರೀಕೃಷ್ಣ, ಸ್ನೇಹ, ಪ್ರೇಮದ ಪ್ರತೀಕ ಎಂದು ತರೀಕೆರೆ ರೋಟರಿ ಕ್ಲಬ್ ನ ಅಧ್ಯಕ್ಷ ರೊ.ಬಿ. ಪಿ. ರವಿಕುಮಾರ್ ಹೇಳಿದರು.

ಶ್ರೀ ಕೃಷ್ಣ ಜಯಂತಿ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಹೋರಾಟ ಮಾಡಿ ಮಾದರಿಯಾದ ಶ್ರೀಕೃಷ್ಣ, ಸ್ನೇಹ, ಪ್ರೇಮದ ಪ್ರತೀಕ ಎಂದು ತರೀಕೆರೆ ರೋಟರಿ ಕ್ಲಬ್ ನ ಅಧ್ಯಕ್ಷ ರೊ.ಬಿ. ಪಿ. ರವಿಕುಮಾರ್ ಹೇಳಿದರು.ಪಟ್ಟಣದ ರೋಟರಿ ಕ್ಲಬ್, ಇನ್ನರ್ ವ್ಹೀಲ್ ಕ್ಲಬ್ ಹಾಗೂ ರೋಟರಿ ವಿದ್ಯಾಸಂಸ್ಥೆ ಸಂಯುಕ್ತಾಶ್ರಯದಲ್ಲಿ 38ನೇ ವರ್ಷದ ಯಶೋಧ, ಕೃಷ್ಣ ವೇಷ ಸ್ಪರ್ಧೆ ಹಾಗೂ ಶ್ರೀ ಕೃಷ್ಣ ಜಯಂತಿ ಉದ್ಘಾಟಿಸಿ ಮಾತನಾಡಿ, ‘ಶ್ರೀಕೃಷ್ಣ ಮತ್ತು ಸುಧಾಮನ ಗೆಳೆತನ ವಿಶ್ವಕ್ಕೇ ಮಾದರಿ. ಅಂತಸ್ತಿನ ಅಂತರ ಮರೆತು ನಾವಿಬ್ಬರೂ ಒಂದೇ ಎಂದು ಬದುಕಿದ ಗೆಳೆತನವದು. ಅಂತಹ ಕೃಷ್ಣನ ಕಥೆಗಳನ್ನು ಹೇಳಿ ಅದರಂತೆ ನಡೆಯಲು ಪೋಷಕರು ಮಕ್ಕಳಿಗೆ ತಿಳಿ ಹೇಳಬೇಕು ಎಂದರು.

ರೋಟರಿ ವಿದ್ಯಾಸಂಸ್ಥೆ ಕಾರ್ಯದರ್ಶಿ ರೊ. ಜಿ.ಸಿ.ಶರತ್ ಮಾತನಾಡಿ, ಅರ್ಜುನನಿಗೆ ಭಗವದ್ಗೀತೆ ಬೋಧನೆ ಸಮಯದಲ್ಲಿ, ಕಾಲಕ್ಕೆ ತಕ್ಕಂತೆ ಒಳ್ಳೆ ಕೆಲಸ ಮಾಡುತ್ತಾ ನಡೆಯುವ ದೃಢ ನಿರ್ಧಾರದ ಬಗ್ಗೆ ಅರ್ಥಪೂರ್ಣವಾಗಿ ಹೇಳಲಾಗಿದೆ. ಅವುಗಳನ್ನು ನಾವು ಅನುಸರಿಸಿದ್ದೇ ಆದಲ್ಲಿ ನಮ್ಮ ಭಾರತ ವಿಶ್ವ ಗುರುವಾಗಲಿದೆ ಎಂದರು. ಶ್ರೀಕೃಷ್ಣನ ಬಗ್ಗೆ ಸಾವಿರಾರು ಆದರ್ಶ ವ್ಯಕ್ತಿತ್ವ ತಿಳಿಸುವ ಉಪ ಕತೆಗಳಿವೆ. ಅಂತಹ ಕತೆಗಳನ್ನು ಮಕ್ಕಳಿಗೆ ಅರ್ಥವಾಗುವ ರೀತಿ ಹೇಳಿದರೆ ಮಕ್ಕಳು ಬೆಳೆಯಲು ಸಹಕಾರಿ ಎಂದರು. ''''''''ಶ್ರೀಕೃಷ್ಣನನ್ನು ಇಡೀ ವಿಶ್ವವೇ ಮೆಚ್ಚಿ ಕೊಂಡಾಡುತ್ತಿದೆ. ವಿದೇಶ ಗಳಲ್ಲೂ ಸಹ ಕೃಷ್ಣನ ದೇವಾಲಯಗಳಿದ್ದು, ಪೂಜೆ ಪುನಸ್ಕಾರ, ಆರಾಧನೆ ಅದ್ದೂರಿಯಾಗಿ ನಡೆಯುತ್ತಿವೆ ಎಂದರು.

ಇನ್ನರ್ ವ್ಹೀಲ್ ಸದಸ್ಯೆ ಉಮಾ ದಯಾನಂದ್ ಮಾತನಾಡಿ, ಶ್ರೀಕೃಷ್ಣ ಜಯಂತಿಗೆ ಸೀಮಿತವಾಗಬಾರದು. ಭಗವಾನ್ ಶ್ರೀಕೃಷ್ಣನ ಜೀವನ ಚರಿತ್ರೆ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದರು.

38ನೇ ವರ್ಷದ ಯಶೋಧ, ಕೃಷ್ಣ ವೇಷ ಸ್ಪರ್ಧೆಯಲ್ಲಿ ನಗರದ ವಿವಿಧ ಶಾಲೆಗಳಿಂದ ಹಾಗೂ ವಿವಿಧ ಅಂಗನವಾಡಿಗಳಿಂದ ಒಟ್ಟು 81 ವೇಷದಾರಿಗಳು ಭಾಗವಹಿಸಿದ್ದರು. ಅದರಲ್ಲಿ ಕೃಷ್ಣ ವೇಷದಾರಿಗಳು 49 ಹಾಗೂ ಯಶೋಧ ವೇಷಧಾರಿಗಳು 32 ಪುಟಾಣಿಗಳು ಪಾಲ್ಗೊಂಡು, ಪ್ರಥಮ ಬಹುಮಾನವನ್ನು ಚರಿತ್ ಸಿ. ಪಿ. (ಆರಾಧನಾ ಶಾಲೆ) ದ್ವಿತೀಯ ಬಹುಮಾನ ಸಾಕ್ಷಿ (ರೋಟರಿ ಶಾಲೆ ) ತೃತೀಯ ಬಹುಮಾನವನ್ನು ನಿಧಿ (ಅರುಣೋದಯ ಶಾಲೆ ) ಪಡೆದರು. ಹಾಗೆಯೇ ಯಶೋದ ವೇಷಧಾರಿ ಗಳಲ್ಲಿ ಪ್ರಥಮ ಬಹುಮಾನ ಖುಷಿ (ಪ್ರಹರ್ಷಿತ ಶಾಲೆ) ದ್ವಿತೀಯ ಬಹುಮಾನ ಲಿಖಿತಾ (ಅರುಣೋದಯ ಶಾಲೆ) ತೃತೀಯ ಬಹುಮಾನ ತನ್ವಿ ಟಿ ಎಸ್ (ರೋಟರಿ ಶಾಲೆ ) ಈ ಮಕ್ಕಳು ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ ರೊ. ಪ್ರವೀಣ್ ಪಿ, ಇನ್ನರ್ ವ್ಹೀಲ್ ಕ್ಲಬ್ ನ ಸದಸ್ಯರಾದ ಚಂದನಾ ವಿವೇಕ್, ಚೈತ್ರಾ ಚಂದ್ರು, ರೋಟರಿ ಸದಸ್ಯರಾದ ರೊ. ದಿನೇಶ್ ಕುಮಾರ್ , ರೊ. ಎಸ್. ಎನ್. ಆಚಾರ್ಯ, ರೊ. ಗೋವರ್ಧನ್, ರೊ ವಿವೇಕ್, ಮತ್ತು ರೊ. ಪ್ರವೀಣ್ ತುಮಕೋಸ್, ಪ್ರತಿಭಾ ಶಂಕರ್ , ಸುನಿತಾ ಕಿರಣ್ ಮತ್ತು ಕಾವ್ಯಾ ಸಂತೋಷ್, ಶಾಲೆ ಮುಖ್ಯೋಪಾಧ್ಯಾಯ ಸಿ. ಟಿ. ಶ್ರೀನಿವಾಸ ಉಪಸ್ಥಿತರಿದ್ದರು.18 ತರೀಕೆರೆ 1

ತರೀಕೆರೆಯಲ್ಲಿ 38ನೇ ವರ್ಷದ ಯಶೋಧ_ಕೃಷ್ಣ ವೇಷ ಸ್ಪರ್ಧೆಯಲ್ಲಿ ರೋಟರಿ ಕ್ಲಬ್ ನ ಅಧ್ಯಕ್ಷ ರೊ.ಬಿ. ಪಿ. ರವಿಕುಮಾರ್, ರೊ. ಜಿ.ಸಿ.ಶರತ್,ಸಿ ಟಿ ಶ್ರೀನಿವಾಸ ಸೇರಿದಂತೆ ಮತ್ತಿತರರು ಇದ್ದರು.