ಸಾರಾಂಶ
ಮಹಾಲಿಂಗಪುರ ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಶ್ರೀಕೃಷ್ಣ ಪರಮಾತ್ಮನ ಜನನ, ಬಾಲ್ಯ, ವಿವಾಹ, ಪವಾಡ, ತುಂಟಾಟ, ಭಗವದ್ಗೀತೆ ಬೋಧನೆ, ಗೀತಾ ಸಾರ ಹೀಗೆ ವಿವಿಧ ಸನ್ನಿವೇಶದ ವೇಷ ಧರಿಸಿದ ಮಕ್ಕಳು ದ್ವಾಪರಯುಗವನ್ನೇ ಸೃಷ್ಟಿಸಿದರು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಸ್ಥಳೀಯ ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಶ್ರೀಕೃಷ್ಣ ಪರಮಾತ್ಮನ ಜನನ, ಬಾಲ್ಯ, ವಿವಾಹ, ಪವಾಡ, ತುಂಟಾಟ, ಭಗವದ್ಗೀತೆ ಬೋಧನೆ, ಗೀತಾ ಸಾರ ಹೀಗೆ ವಿವಿಧ ಸನ್ನಿವೇಶದ ವೇಷ ಧರಿಸಿದ ಮಕ್ಕಳು ದ್ವಾಪರಯುಗವನ್ನೇ ಸೃಷ್ಟಿಸಿದರು.ಕಂಸನ ಕಾರಾಗೃಹದಲ್ಲಿ ವಾಸುದೇವ ಮತ್ತು ದೇವಕಿಯ ಮಡಿಲಲ್ಲಿ ಕೃಷ್ಣ, ವಾಸುದೇವ ಯಮುನೆ ದಾಟಿ ಗೋಕುಲಕ್ಕೆ ಕೃಷ್ಣನನ್ನು ಕರೆದೊಯ್ಯುವ ದೃಶ್ಯ, ಕಾಳಿಂಗ ಮರ್ಧನ, ತುಂಟಾಟದಿಂದ ಬೇಸತ್ತ ತಾಯಿ ಯಶೋಧೆ ಕೃಷ್ಣನನ್ನು ಕಂಬಕ್ಕೆ ಕಟ್ಟಿದ ದೃಶ್ಯ, ಮಣ್ಣು ತಿನ್ನುವ ಕೃಷ್ಣನ ಬಾಯಲ್ಲಿ ಬ್ರಹ್ಮಾಂಡ ದರ್ಶನ, ದ್ರೌಪದಿ ವಸ್ತ್ರಾಪಹರಣ ಸಂದರ್ಭದಲ್ಲಿ ಅಕ್ಷಯ ವಸ್ತ್ರವಿತ್ತ ಸಂದರ್ಭ, ಬೆಣ್ಣೆ ಕಳ್ಳತನ, ಗೋವರ್ಧನ ಪರ್ವತವನ್ನು ಕಿರುಬೆರಳ ತುದಿಯಲ್ಲಿ ಹಿಡಿದು ಗೋಕುಲ ರಕ್ಷಿಸಿದ ದೃಶ್ಯ ಸೇರಿದಂತೆ ಇಡೀ ವಾತಾವರಣ ಕೃಷ್ಣ ಮಾಯವಾಗಿತ್ತು.
ಶಿಕ್ಷಕಿಯರಾದ ಬನಶಂಕರಿ ಕೆ ಎಂ, ಪ್ರೀತಿ ಕಲ್ಯಾಣಿ, ತೃಪ್ತಿ ಕುಳ್ಳೊಳ್ಳ ಲಕ್ಷ್ಮಿ ಕುಳ್ಳೊಳ್ಳಿ, ಗಾಯತ್ರಿ ಹುಂಬಿ, ತೇಜು ವಜ್ರಮಟ್ಟಿ, ದೀಪಾ ಬಡಿಗೇರ, ವೀಣಾ ಹಡಪದ, ಶಬಾನ ಮುಂಡಗನೂರ, ಪಾರ್ವತಿ ಚನಪನ್ನವರ ಮಾರ್ಗದರ್ಶನ ಮಾಡಿದ್ದರು.ಸಂಸ್ಥೆಯ ಅಧ್ಯಕ್ಷ ಶಾಂತಿಲಾಲ ಪಟೇಲ, ಉಪಾಧ್ಯಕ್ಷ ಶಿವಾನಂದ ತಿಪ್ಪಾ, ನಿರ್ದೇಶಕರಾದ ರಮೇಶ ಮುಳವಾಡ, ರಾಜು ಘಟ್ಟೆಪ್ಪನವರ ಮತ್ತು ಪತ್ರಕರ್ತರು, ಪಾಲಕರು ಮಕ್ಕಳ ಕಲೆಕಂಡು ಖುಷಿಪಟ್ಟರು.