ಶ್ರೀ ಕೃಷ್ಣದೇವರಾಯರ ವ್ಯಕ್ತಿತ್ವ ಮತ್ತು ಅವರ ಆಡಳಿತ ವೈಖರಿಯು ಇಂದಿಗೂ ಆದರ್ಶಪ್ರಾಯವಾಗಿದೆ. ಅವರು ಕೇವಲ ವಿಜಯಶಾಲಿ ಯೋಧನಷ್ಟೇ ಅಲ್ಲ, ಪ್ರಜಾಹಿತವನ್ನು ಕೇಂದ್ರವಾಗಿಟ್ಟುಕೊಂಡ ಶ್ರೇಷ್ಠ ಆಡಳಿತಗಾರರಾಗಿದ್ದರು ಎಂದು ಡಾ. ರಾಜೇಶ್ ಗೌಡ ತಿಳಿಸಿದರು.
ಕನ್ನಡಪ್ರಭ ವಾರ್ತೆ ಶಿರಾ
ಶ್ರೀ ಕೃಷ್ಣದೇವರಾಯರ ವ್ಯಕ್ತಿತ್ವ ಮತ್ತು ಅವರ ಆಡಳಿತ ವೈಖರಿಯು ಇಂದಿಗೂ ಆದರ್ಶಪ್ರಾಯವಾಗಿದೆ. ಅವರು ಕೇವಲ ವಿಜಯಶಾಲಿ ಯೋಧನಷ್ಟೇ ಅಲ್ಲ, ಪ್ರಜಾಹಿತವನ್ನು ಕೇಂದ್ರವಾಗಿಟ್ಟುಕೊಂಡ ಶ್ರೇಷ್ಠ ಆಡಳಿತಗಾರರಾಗಿದ್ದರು ಎಂದು ಡಾ. ರಾಜೇಶ್ ಗೌಡ ತಿಳಿಸಿದರು.ಶಿರಾ ತಾಲೂಕಿನ ಅಗ್ರಹಾರ ಗ್ರಾಮದಲ್ಲಿ ಶ್ರೀ ಕೃಷ್ಣದೇವರಾಯ ಬಲಿಜ ಸಮಾಜ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ. ಶ್ರೀಕೃಷ್ಣದೇವರಾಯ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶ್ರೀ ಕೃಷ್ಣದೇವರಾಯರು ತಮ್ಮ ಆಡಳಿತಾವಧಿಯಲ್ಲಿ ಕೃಷಿ ಅಭಿವೃದ್ಧಿ, ನೀರಾವರಿ ವ್ಯವಸ್ಥೆ, ವ್ಯಾಪಾರ ವೃದ್ಧಿ ಮತ್ತು ಬಲಿಷ್ಠ ರಕ್ಷಣಾ ವ್ಯವಸ್ಥೆಗೆ ಹೆಚ್ಚಿನ ಮಹತ್ವ ನೀಡಿದ್ದರು. ಇದರಿಂದ ವಿಜಯನಗರ ಸಾಮ್ರಾಜ್ಯವು ಆರ್ಥಿಕವಾಗಿ ಸಮೃದ್ಧವಾಗಿದ್ದು, ಜನಸಾಮಾನ್ಯರ ಬದುಕು ಸುಧಾರಿಸಿತು. ಪ್ರಜೆಗಳ ಕಷ್ಟಸಂಕಟಗಳನ್ನು ಅರಿತು ಪರಿಹಾರ ನೀಡುವ ಆಡಳಿತ ಪದ್ಧತಿ ಅವರ ಆಡಳಿತದ ಪ್ರಮುಖ ವೈಶಿಷ್ಟ್ಯವಾಗಿತ್ತು. ಸಾಹಿತ್ಯ ಮತ್ತು ಸಂಸ್ಕೃತಿಯ ಕ್ಷೇತ್ರದಲ್ಲಿ ಶ್ರೀ ಕೃಷ್ಣದೇವರಾಯರ ಕೊಡುಗೆ ಅಪಾರವಾಗಿದೆ. ಇದರಿಂದ ವಿಜಯನಗರ ಕಾಲವನ್ನು ಸಾಹಿತ್ಯ ಮತ್ತು ಕಲೆಯ ಚಿನ್ನದ ಯುಗವೆಂದು ಪರಿಗಣಿಸಲಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಶ್ರೀ ಕೃಷ್ಣದೇವರಾಯ ಸಮಿತಿ ಅಧ್ಯಕ್ಷರು ರಾಜಣ್ಣ, ಉಪಾಧ್ಯಕ್ಷರು ದಿನೇಶ್ ಗೌಡ, ಪದಾಧಿಕಾರಿಗಳು ರಮೇಶ್, ಮೂರ್ತಿ, ಧರಣಿಶ್ ಗೌಡ, ಗ್ರಾಮ ಪಂಚಾಯತ್ ಸದಸ್ಯ ಸುರೇಶ್ ಬಾಬು, ಮಣಿ, ಯುವರಾಜ್, ಕೆಂಚಣ್ಣ, ಬಸವರಾಜ್, ರತ್ನಮ್ಮ, ಶಿವಕುಮಾರ್, ಸೇರಿದಂತೆ ಹಲವರು ಹಾಜರಿದ್ದರು.