ಸಾರಾಂಶ
ಶ್ರೀ ಕ್ಷೇತ್ರದ ವೈದಿಕರಾದ ವೇದಮೂರ್ತಿ ಸಂದೇಶ್ ಭಟ್, ನೇತೃತ್ವದಲ್ಲಿ ಸಹವೈದಿಕರಾದ ನರೇಶ್ ಭಟ್, ಮಂಜುನಾಥ್ ಭಟ್ ಸಹಭಾಗಿತ್ವದಲ್ಲಿ ಧಾರ್ಮಿಕ ವಿಧಿ ಅನುಷ್ಠಾನಗಳು ಜರುಗಿತು. ಕ್ಷೇತ್ರದ ಆಡಳಿತ ಮೊಕ್ತೇಸರ ಗಂಪದಬೈಲು ಜಯರಾಮ ಪ್ರಭು ದಂಪತಿ ಪೂಜಾನುಷ್ಠಾನದಲ್ಲಿ ಉಪಸ್ಥಿತರಿದ್ದರು.
ಕನ್ನಡಪ್ರಭ ವಾರ್ತೆ ಕಾಪು
ಪಾಕಿಸ್ತಾನದ ಭಯೋತ್ಪಾದಕರ ವಿರುದ್ಧ ಹೋರಾಟ ನಡೆಸಲು ಸನ್ನದ್ಧರಾಗಿರುವ ಭಾರತದ ವೀರ ಸೈನಿಕರಿಗೆ ಸ್ಥೈರ್ಯ ತುಂಬುವ ಮತ್ತು ದೇಶದ ವಿಜಯಕ್ಕಾಗಿ ಪ್ರಾರ್ಥನೆ ಸಲ್ಲಿಸುವ ಸಲುವಾಗಿ ಇಲ್ಲಿನ ಶ್ರೀಕ್ಷೇತ್ರ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಿ ಸನ್ನಿಧಿಯಲ್ಲಿ ಶ್ರೀ ದುರ್ಗಾಪೂಜೆ ಹಾಗೂ ಸುಹಾಸಿನಿ ಮಹಿಳೆಯರಿಂದ ಲಕ್ಷ ಕುಂಕುಮಾರ್ಚನೆ ಧಾರ್ಮಿಕ ಅನುಷ್ಠಾನಗಳು ಜರುಗಿದವು.ಶ್ರೀ ಕ್ಷೇತ್ರದ ವೈದಿಕರಾದ ವೇದಮೂರ್ತಿ ಸಂದೇಶ್ ಭಟ್, ನೇತೃತ್ವದಲ್ಲಿ ಸಹವೈದಿಕರಾದ ನರೇಶ್ ಭಟ್, ಮಂಜುನಾಥ್ ಭಟ್ ಸಹಭಾಗಿತ್ವದಲ್ಲಿ ಧಾರ್ಮಿಕ ವಿಧಿ ಅನುಷ್ಠಾನಗಳು ಜರುಗಿತು. ಕ್ಷೇತ್ರದ ಆಡಳಿತ ಮೊಕ್ತೇಸರ ಗಂಪದಬೈಲು ಜಯರಾಮ ಪ್ರಭು ದಂಪತಿ ಪೂಜಾನುಷ್ಠಾನದಲ್ಲಿ ಉಪಸ್ಥಿತರಿದ್ದರು.ಆಡಳಿತ ಮಂಡಳಿ ಉಪಾಧ್ಯಕ್ಷ ಎಳ್ಳಾರೆ ಪಾಂಡುರಂಗ ಕಾಮತ್, ನಿಕಟಪೂರ್ವ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಸಮಿತಿ ಸದಸ್ಯರಾದ ಸತ್ಯನಾರಾಯಣ ನಾಯಕ್, ಸುರೇಂದ್ರ ನಾಯಕ್, ಸಭಾಭವನ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಗೋಪಿನಾಥ್ ನಾಯಕ್ ಪಳ್ಳಿ, ಸಮಾಜ ಬಾಂಧವರು, ಕ್ಷೇತ್ರದ ಭಕ್ತರು ಉಪಸ್ಥಿತರಿದ್ದರು. ಭಾರತಮಾತೆಯ ವಿಶೇಷ ಮಂಡಲ ಗಮನ ಸೆಳೆಯಿತು.