ಶ್ರೀ ಕ್ಷೇತ್ರ ದೊಡ್ಡಣಗುಡ್ಡೆ: ನಾಗಬ್ರಹ್ಮಾದಿ ಪರಿವಾರ ದೇವರ ವರ್ಧಂತಿ ಮಹೋತ್ಸವ ಸಂಪನ್ನ

| Published : May 11 2025, 11:45 PM IST

ಶ್ರೀ ಕ್ಷೇತ್ರ ದೊಡ್ಡಣಗುಡ್ಡೆ: ನಾಗಬ್ರಹ್ಮಾದಿ ಪರಿವಾರ ದೇವರ ವರ್ಧಂತಿ ಮಹೋತ್ಸವ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಕ್ಷೇತ್ರದ ದುರ್ಗಾ ಆದಿಶಕ್ತಿ ದೇವಿಗೆ 19ನೇ ಪ್ರತಿಷ್ಠ ವರ್ಧಂತಿ ಮಹೋತ್ಸವದ ಸೋಮವಾರ ಬೆಳಗ್ಗೆ 8.40ಕ್ಕೆ ಒದಗುವ ವೃಷಭ ಲಗ್ನ ಸುಮೂರ್ತದಲ್ಲಿ ಪಂಚವಿಂಶತಿ ದ್ರವ್ಯ ಮಿಳಿತ ಅಷ್ಟೋತ್ತರ ಶತ ಬ್ರಹ್ಮ ಕುಂಭಾಭಿಷೇಕವು ವೇದಮೂರ್ತಿ ಸರ್ವೇಶ ತಂತ್ರಿಗಳಿಂದ ನೆರವೇರಲಿದೆ

ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ನಾಗಬ್ರಹ್ಮಾದಿ ಪರಿವಾರ ದೇವರುಗಳ ಪ್ರತಿಷ್ಠ ವರ್ಧಂತಿ ಮಹೋತ್ಸವವು ಕ್ಷೇತ್ರದ ಧರ್ಮದ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನೆರವೇರಿತು.ಆ ಪ್ರಯುಕ್ತ ಗಾಯತ್ರಿ ಧ್ಯಾನಪೀಠದ ಕಪಿಲ ಮಹರ್ಷಿಗಳ ಸಾನಿಧ್ಯದಲ್ಲಿ ಗುರುಪೂಜೆಯನ್ನು ಸಲ್ಲಿಸಲಾಯಿತು. ನಾಗ ಕ್ಷೇತ್ರದಲ್ಲಿ ಪಂಚವಿಂಷತಿ ಕಲಶಾರಾಧನೆ ಕಲಶಾಭಿಷೇಕ ಬ್ರಹ್ಮದೇವರುಗಳಿಗೆ ನವಕ ಕಲಶ ಪ್ರಧಾನ ಹೋಮ ಕಲಶಾಭಿಷೇಕ ಷಟ್ ಶಿರ ಸುಬ್ರಮಣ್ಯ ಸ್ವಾಮಿಯ ಸನ್ನಿಧಾನದಲ್ಲಿ ಪವಮಾನ ಸೂಕ್ತಯಾಗ ಸಹಿತ ಕಲಶಾ ಅಭಿಷೇಕ, ಅಷ್ಟ ವಟು ಆರಾಧನೆ ಸುಹಾಸಿನಿ ಆರಾಧನೆ ಬ್ರಾಹ್ಮಣರಾಧನೆ ಪರಿವಾರ ಪೂಜೆ ಪ್ರಸನ್ನ ಪೂಜೆ ಮಹಾ ಅನ್ನಸಂತರ್ಪಣೆ ನೆರವೇರಿತು.

ಸಂಜೆ ಶ್ರೀ ದುರ್ಗಾ ಆದಿಶಕ್ತಿಯ ಸನ್ನಿಧಾನದಲ್ಲಿ ಬ್ರಹ್ಮಕಲಶದ ಮಂಡಲ ರಚನೆ, ಭುವನೇಶ್ವರಿ ಪೂಜೆ ಬ್ರಹ್ಮಕಲಶಾದಿವಾಸ ಆದಿವಾಸ ಹೋಮಗಳು ನೆರವೇರಿದವು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ..ಇಂದು ಬ್ರಹ್ಮಕುಂಭಾಭಿಷೇಕಶ್ರೀ ಕ್ಷೇತ್ರದ ದುರ್ಗಾ ಆದಿಶಕ್ತಿ ದೇವಿಗೆ 19ನೇ ಪ್ರತಿಷ್ಠ ವರ್ಧಂತಿ ಮಹೋತ್ಸವದ ಸೋಮವಾರ ಬೆಳಗ್ಗೆ 8.40ಕ್ಕೆ ಒದಗುವ ವೃಷಭ ಲಗ್ನ ಸುಮೂರ್ತದಲ್ಲಿ ಪಂಚವಿಂಶತಿ ದ್ರವ್ಯ ಮಿಳಿತ ಅಷ್ಟೋತ್ತರ ಶತ ಬ್ರಹ್ಮ ಕುಂಭಾಭಿಷೇಕವು ವೇದಮೂರ್ತಿ ಸರ್ವೇಶ ತಂತ್ರಿಗಳಿಂದ ನೆರವೇರಲಿದೆ. ನಂತರ ತುಲಾಭಾರ ಸೇವೆ ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯ ಸೇವೆ ಹಾಗೂ ಮಹಾ ಅನ್ನ ಸಂತರ್ಪಣೆ ಸಂಪನ್ನಗೊಳ್ಳಲಿದೆ.