ಶ್ರೀ ನವಿಲೆ ನಾಗೇಶ್ವರ ಸ್ವಾಮಿ ಬ್ರಹ್ಮರಥೋತ್ಸವ

| Published : Apr 11 2025, 12:33 AM IST

ಸಾರಾಂಶ

ಹೋಬಳಿಯ ನಾಗರನವಿಲೆ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ನಾಗೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಿತು. ಮೂಲದೇವರಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ, ಮಹಾಮಂಗಳಾರತಿ ನೆರವೇರಿಸಲಾಯಿತು. ಪಾರ್ವತಮ್ಮನವರಿಗೆ ವಿಶೇಷ ಹೂವಿನ ಅಲಂಕಾರ, ಮಹಾಮಂಗಳಾರತಿ ನೆರವೇರಿಸಲಾಯಿತು. ಮೆರೆ ದೇವರ ಉತ್ಸವ ಮೂಲ ದೇಗುಲದಿಂದ ಮಂಗಳವಾದ್ಯದೊಂದಿಗೆ ಮೆರವಣಿಗೆ ಊರಿನ ಮುಂಭಾಗ ಸಾಗಿ ಬಳಿಕ ದೇವರನ್ನು ರಥದಲ್ಲಿ ಪ್ರತಿಷ್ಠಾಪಿಸಿ ರಥಕ್ಕೆ ನೈವೇದ್ಯ ಮಹಾಮಂಗಳಾರತಿ ನಂತರ ಭಕ್ತರು ಜಯಘೋಷದೊಂದಿಗೆ ರಥವನ್ನು ಎಳೆದರು.

ಕನ್ನಡಪ್ರಭ ವಾರ್ತೆ ಬಾಗೂರು

ಹೋಬಳಿಯ ನಾಗರನವಿಲೆ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ನಾಗೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ಬುಧವಾರ ಜರುಗಿತು.

ಬೆಳಿಗ್ಗೆ ಗಿರಿಜಾ ಕಲ್ಯಾಣೋತ್ಸವ, ಆನೆ ಉತ್ಸವ ಮೂಲದೇವರಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ, ಮಹಾಮಂಗಳಾರತಿ ನೆರವೇರಿಸಲಾಯಿತು. ಪಾರ್ವತಮ್ಮನವರಿಗೆ ವಿಶೇಷ ಹೂವಿನ ಅಲಂಕಾರ, ಮಹಾಮಂಗಳಾರತಿ ನೆರವೇರಿಸಲಾಯಿತು. ಮೆರೆ ದೇವರ ಉತ್ಸವ ಮೂಲ ದೇಗುಲದಿಂದ ಮಂಗಳವಾದ್ಯದೊಂದಿಗೆ ಮೆರವಣಿಗೆ ಊರಿನ ಮುಂಭಾಗ ಸಾಗಿ ಬಳಿಕ ದೇವರನ್ನು ರಥದಲ್ಲಿ ಪ್ರತಿಷ್ಠಾಪಿಸಿ ರಥಕ್ಕೆ ನೈವೇದ್ಯ ಮಹಾಮಂಗಳಾರತಿ ನಂತರ ಭಕ್ತರು ಜಯಘೋಷದೊಂದಿಗೆ ರಥವನ್ನು ಎಳೆದರು. ಭಕ್ತರು ರಥಕ್ಕೆ ಹಣ್ಣು ದವನ ಎಸೆದು ಭಕ್ತಿ ಸಮರ್ಪಿಸಿದರು. ಭಕ್ತರಿಗೆ ಪಾನಕ ಫಲಹಾರ ಮಜ್ಜಿಗೆ ವಿತರಿಸಲಾಯಿತು. ಮೂಲ ದೇಗುಲದ ಮುಂಭಾಗ ಅನ್ನದಾಸೋಹ ನಡೆಯಿತು.

ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಶಾಸಕ ಸಿ.ಎನ್. ಬಾಲಕೃಷ್ಣ, ಸುಜಯ್, ಪ್ರಸಾದ್, ತಹಸೀಲ್ದಾರ್ ನವೀನ್ ಕುಮಾರ್, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ನವಿಲೇ ಎನ್. ಪರಮೇಶ್, ಮುಜರಾಯಿ ತಹಸೀಲ್ದಾರ್ ಲತಾ, ಬಿಜೆಪಿ ಮುಖಂಡ ನವಿಲೇ ಅಣ್ಣಪ್ಪ, ಎ.ಸಿ. ಆನಂದ್ ಕುಮಾರ್, ಅರ್ಚಕರ ಸಂಘದ ತಾಲೂಕು ಅಧ್ಯಕ್ಷ ಶ್ರೀಧರ್ ಸ್ವಾಮಿಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಬಸವರಾಜ್, ಆರ್‌ಐ ರಾಜು, ಮುಖಂಡರಾದ ಇಟ್ಟಿಗೆ ನಾಗರಾಜ್, ಎನ್. ಕೆ. ನಾಗಪ್ಪ, ದೇವರಾಜ್, ದಿನೇಶ್, ಎನ್.ಎಲ್. ನಾಗರಾಜ್, ರಾಜು, ನಾಗು, ಇತರರು ಹಾಜರಿದ್ದರು.