ಶ್ರೀಮಠದ ಸ್ಥಳೀಯ ಬಡಾವಣೆಗಳಾದ ಕಾವೇರಿನಗರ, ದ್ವಾರಕನಗರ, ಶ್ರೀರಾಮನಗರ, ಹೊಸಹಳ್ಳಿ, ರಾಮನಹಳ್ಳಿ, ಗಾಂಧಿನಗರ, ಹೌಸಿಂಗ್‌ಬೋರ್ಡ್, ಕುವೆಂಪುನಗರ, ಕಲ್ಲಹಳ್ಳಿ ಸೇರಿದಂತೆ ಹಲವು ಬಡಾವಣೆಗಳ ಭಕ್ತರ ಸಹಕಾರದಿಂದ ಶ್ರೀರಾಯರ ಆರಾಧನೆ ಮತ್ತು ಶ್ರೀನಿವಾಸ ಕಲ್ಯಾಣವು ನಡೆದು ೩ದಿನಗಲ್ಲೂ ಭಕ್ತರಿಗೆ ಅನ್ನಸಂತರ್ಪಣೆ ನಡೆಯುತ್ತಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಇಲ್ಲಿನ ಸಮೀಪವಿರುವ ಕಾವೇರಿ ನಗರದಲ್ಲಿರುವ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಆವರಣದಲ್ಲಿ ಶ್ರೀಮಠದ ಭಕ್ತರ ಸಹಯೋಗದಲ್ಲಿ ೩೫೫ನೇ ಆರಾಧನಾ ಮಹೋತ್ಸವ ಮತ್ತು ಶ್ರೀನಿವಾಸ ಕಲ್ಯಾಣ ಮಹೋತ್ಸವವು ನಡೆಯಿತು.ಬಳಿಕ ಮಾತನಾಡಿದ ಶ್ರೀಮಠದ ವ್ಯವಸ್ಥಾಪಕ ಬ್ರಾಹ್ಮಣ್ಯತೀರ್ಥ ಸ್ವಾಮೀಜಿ, ಕಲಿಯುಗದ ಕಲ್ಪವೃಕ್ಷ, ಕಾಮಧೇನು ಎನಿಸಿಕೊಂಡಿರುವ ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನೆಯಿಂದ ಸರ್ವ ಜನರ ಕಷ್ಟಕಾರ್ಪಣ್ಯಗಳು ನಿವಾಣೆಯಾಗುತ್ತಿವೆ. ಉದ್ಧಾರಕ್ಕಾಗಿ ಧರೆಗಿಳಿದ ಶ್ರೀವೆಂಕಟೇಶ್ವರ ಸ್ವಾಮಿಯ ವೈಭವದ ಶ್ರೀನಿವಾಸ ಕಲ್ಯಾಣವು ಭೂವೈಕುಂಠವನ್ನು ಸೃಷ್ಟಿಸಿದೆ ಎಂದರು.
ಈ ಎರಡೂ ಪ್ರಸಂಗಗಳು ನಮಗೆ ಭಕ್ತಿ, ಶರಣಾಗತಿ ಮತ್ತು ಧರ್ಮದ ಮಾರ್ಗವನ್ನು ಬೋಧಿಸುತ್ತವೆ. ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನೆಯಿಂದ ನೆಮ್ಮದಿ ಸಿಗುತ್ತದೆ, ಶ್ರೀ ರಾಘವೇಂದ್ರ ತೀರ್ಥರು ಕೇವಲ ಒಬ್ಬ ಸನ್ಯಾಸಿಯಲ್ಲ, ಅವರು ಕೋಟ್ಯಂತರ ಭಕ್ತರ ಕಣ್ಣೀರೊರೆಸುವ ಜಾಗೃತ ದೈವ ಎಂಬ ನಂಬಿಕೆಯಿದೆ ಎಂದು ನುಡಿದರು.ಶ್ರೀಮಠದ ಸ್ಥಳೀಯ ಬಡಾವಣೆಗಳಾದ ಕಾವೇರಿನಗರ, ದ್ವಾರಕನಗರ, ಶ್ರೀರಾಮನಗರ, ಹೊಸಹಳ್ಳಿ, ರಾಮನಹಳ್ಳಿ, ಗಾಂಧಿನಗರ, ಹೌಸಿಂಗ್‌ಬೋರ್ಡ್, ಕುವೆಂಪುನಗರ, ಕಲ್ಲಹಳ್ಳಿ ಸೇರಿದಂತೆ ಹಲವು ಬಡಾವಣೆಗಳ ಭಕ್ತರ ಸಹಕಾರದಿಂದ ಶ್ರೀರಾಯರ ಆರಾಧನೆ ಮತ್ತು ಶ್ರೀನಿವಾಸ ಕಲ್ಯಾಣವು ನಡೆದು ೩ದಿನಗಲ್ಲೂ ಭಕ್ತರಿಗೆ ಅನ್ನಸಂತರ್ಪಣೆ ನಡೆಯುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಭಕ್ತಸುಧೆ, ಗೀತಾಪಠಣ, ನೃತ್ಯವೈಭವ ಸೇರಿದಂತೆ ಭಕ್ತಪ್ರಧಾನ ಕಾರ್ಯಕ್ರಮಗಳು ನಡೆದವು, ಶ್ರೀಕೃಷ್ಣಮೂಲದೇವರು ಮತ್ತು ಶ್ರೀರಾಘವೇಂದ್ರ ಸ್ವಾಮಿಗಳ ಮೂರ್ತಿ ಹಾಗೂ ಉತ್ಸವ ಮೂರ್ತಿಗೆ ವಿವಿಧ ಹಣ್ಣು-ಹಂಪಲು, ಸುಗಂಧ ಹೂಗಳಿಂದ ಅಲಂಕಾರ ಮಾಡಲಾಗಿತ್ತು.ಕಾರ್ಯಕ್ರಮದಲ್ಲಿ ಶ್ರೀಮಠದ ಅರ್ಚಕರಾದ ಶ್ರೀನಾಥ್, ಭಕ್ತರಾದ ವಿನಯ್, ಡ್ರಾಮಾಸೀನರಿ ಉಮೇಶ್, ಬಸುಆರಾಧ್ಯ, ಉಪನ್ಯಾಸಕ ಜಯರಾಂ, ಸಂದೇಶ್, ಹೊಸಹಳ್ಳಿ ಶಿವು, ಅಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು, ಶ್ರೀಮಠದ ಭಕ್ತರು ಹಾಜರಿದ್ದರು.
ಕಾಲೇಜು ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ಭಾಗ್ಯಕನ್ನಡಪ್ರಭ ವಾರ್ತೆ ಮಂಡ್ಯತಾಲೂಕಿನ ಬಸರಾಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಆಧುನಿಕ ತಂತ್ರಜ್ಞಾನ ಆಧಾರಿತ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು ವಿಭಾಗಕ್ಕೆ ಯುವ ಬೆಂಗಳೂರು ಟ್ರಸ್ಟ್ ವತಿಯಿಂದ ನೂತನ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಯನ್ನು ಯುಪಿಎಸ್ ಸೌಲಭ್ಯದೊಂದಿಗೆ ನೀಡಲಾಯಿತು.
ನೂತನ ಸ್ಮಾರ್ಟ್ ಬೋರ್ಡ್ ಸೌಲಭ್ಯವನ್ನು ಉದ್ಘಾಟಿಸಿದ ಟ್ರಸ್ಟ್ ಶೈಕ್ಷಣಿಕ ನಿರ್ದೇಶಕ ರಾಹುಲ್, ಗ್ರಾಮೀಣ ವಿದ್ಯಾರ್ಥಿಗಳು ನಗರದ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಲು ಡಿಜಿಟಲ್ ಶಿಕ್ಷಣ ಅತ್ಯವಶ್ಯಕ ಎಂದರು.ಪ್ರಾಂಶುಪಾಲ ಎನ್.ಎಸ್.ಲಿಂಗರಾಜು ಮಾತನಾಡಿ, ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಯು ವಿದ್ಯಾರ್ಥಿಗಳಲ್ಲಿ ಕಲಿಕಾಸಕ್ತಿಯನ್ನು ಹೆಚ್ಚಿಸುವುದಲ್ಲದೆ, ಸಂಕೀರ್ಣ ವಿಷಯಗಳನ್ನು ದೃಶ್ಯ-ಶ್ರವಣ ಮಾಧ್ಯಮದ ಮೂಲಕ ಸುಲಭವಾಗಿ ಅರ್ಥಮಾಡಿಕೊಳ್ಳಲು ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು.ಯೂಟ್ಯೂಬ್, ಇಂಟರ್ನೆಟ್‌ಗೆ ಸಂಪರ್ಕಿಸಬಹುದಾದ ಹಾಗೂ ಈಗಾಗಲೇ ತಯಾರಿಸಲಾದ ಹಲವು ಶೈಕ್ಷಣಿಕ ಪ್ರೋಗ್ರಾಮ್‌ಗಳು ಅಳವಡಿಕೆಯಾಗಿರುವ ಈ ಸ್ಮಾರ್ಟ್ ಬೋರ್ಡ್‌ನಿಂದ ವಿದ್ಯಾರ್ಥಿಗಳ ಕಲಿಕಾ ಮಟ್ಟ ಖಂಡಿತವಾಗಿಯೂ ಸುಧಾರಿಸಲಿದೆ ಎಂದರು.ಉಪನ್ಯಾಸಕ ಲೋಕೇಶ ಬೆಕ್ಕಳಲೆ ಮಾತನಾಡಿ, ಡಿಜಿಟಲ್ ತರಗತಿಗಳ ಆರಂಭದಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆದು ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ಟ್ರಸ್ಟ್ ಕೊಡುಗೆ ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ನಿರ್ದೇಶಕ ಶ್ರೀವಂಶಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಅನಿಲ್‌ಗೌಡ, ಉಪನ್ಯಾಸಕರಾದ ಚೇತನ, ವಿಶ್ವನಾಥ್, ಮಂಜುನಾಥ್, ಪ್ರಫುಲ್ಲ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.