ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ ಶ್ರೀರಾಮ ತನ್ನ ಜೀವನದುದ್ದಕ್ಕೂ ಪ್ರತಿಪಾದಿಸುತ್ತಾ ಅನುಸರಿಸುತ್ತಿದ್ದ ಆದರ್ಶ ಮತ್ತು ಪ್ರೀತಿಯ ಅಂಶಗಳೇ ಅವನನ್ನು ಭಾರತ ಮಾತ್ರವಲ್ಲ, ವಿಶ್ವದಾದ್ಯಂತ ಅನೇಕ ದೇಶಗಳು ಆರಾಧಿಸಲು ಕಾರಣವಾಗಿದೆ. ಶ್ರೀರಾಮನನ್ನು ಮನಸ್ಸಿಗೆ ಹಚ್ಚಿಕೊಂಡಲ್ಲಿ ಆತನಲ್ಲಿದ್ದ ಮಾನವ ಗುಣದ ಅನೇಕ ಋಣಾತ್ಮಕತೆಗಳ ಬಗ್ಗೆ ಪ್ರಶ್ನೆ ಮೂಡಬಹುದು. ಆದರೆ ಶ್ರೀರಾಮನನ್ನು ಹೃದಯದಲ್ಲಿ ಇರಿಸಿಕೊಂಡಾಗ ಮಾತ್ರ ಆತನ ಉತ್ತಮ ಗುಣಗಳನ್ನು ಜೀವನದಲ್ಲಿ ಅನುಸರಿಸಲು ಸಾಧ್ಯವಾಗುತ್ತದೆ ಎಂದು ಖ್ಯಾತ ಸಾಹಿತಿ ಡಾ.ಗಜಾನನ ಶರ್ಮ ಪ್ರತಿಪಾದಿಸಿದ್ದಾರೆ.
ಇಲ್ಲಿನ ನಗರದ ರೆಡ್ ಬ್ರಿಕ್ಸ್ ಇನ್ ನ ಸತ್ಕಾರ್ ಸಭಾಂಗಣದಲ್ಲಿ ಆಯೋಜಿತವಾಗಿದ್ದ ಪತ್ರಕತ೯ ಅನಿಲ್ ಎಚ್ .ಟಿ. ಬರೆದ ‘ಅಯೋಧ್ಯೆ ಶ್ರೀರಾಮನ ಮಂದಿರ, ಇದು ಪ್ರೀತಿಯ ಮಂದಿರ, ರಾಷ್ಟ್ರಮಂದಿರ’ ಪುಸ್ತಕವನ್ನು ಬಿಡುಗಡೆ ಮಾಡಿ ಗಜಾನನ ಶರ್ಮ ಮಾತನಾಡಿದರು.ಎಂತಹ ಕಷ್ಟವನ್ನಾದರೂ ನಗುಮೊಗದಿಂದಲೇ ಸ್ವೀಕರಿಸಬೇಕು ಎಂಬ ಗುಣವನ್ನು ಕಲಿಸಿಕೊಟ್ಟವನು ರಘುರಾಮ. ಜಗದೇಕ ಸುಂದರಿಯಾಗಿ ಬಂದ ಶೂರ್ಪನಖಿ ಹಾಗೂ ಲಂಕೆಯ ಸಿಂಹಾಸನದ ಸೆಳೆತಗಳಿಗೆ ಕೂಡ ಶ್ರೀರಾಮ ಒಳಗಾಗಲಿಲ್ಲ. ಅಶ್ವಮೇಧ ಯಾಗ ಮಾಡುವಾಗ ಎಲ್ಲರೂ ಮತ್ತೊಂದು ಮದುವೆಯಾಗು ಎಂದಾಗಲೂ ಅದನ್ನೊಪ್ಪದೇ ತಾನು ನಂಬಿದ್ದ ಸೀತೆಯ ಪ್ರತಿಮೆಯನ್ನೇ ಪಕ್ಕದಲ್ಲಿರಿಸಿಕೊಂಡವ ರಾಮ. ಆತನ ಕಣ್ಣಿಗೆ ಅಳಿಲಿನ ಸೇವೆ, ಕಡು ಬಡವಿ ಶಬರಿಯ ಭಕ್ತಿಯೂ ಕಂಡಿತ್ತು. ಸೇವಕನಿಗೂ ತನ್ನ ಕುಟುಂಬದಲ್ಲಿ ಸ್ಥಾನ ಕಲ್ಪಿಸಿದ. ರಾಮನ ಬದುಕೇ ಪ್ರೀತಿಯ ಬದುಕಾಗಿತ್ತು. ಇಂತಹ ವ್ಯಕ್ತಿತ್ವವನ್ನು ನಾವು ಗೌರವಿಸಬಾರದೇ ಎಂದು ಗಜಾನನ ಶರ್ಮ ಪ್ರಶ್ನಿಸಿದರು.ಪತ್ರಕರ್ತ ಜಿ. ಚಿದ್ವಿಲಾಸ್ ಮಾತನಾಡಿ, ವೀರಪ್ಪನ್ ಇದ್ದಂತ ಸಂದರ್ಭದಲ್ಲಿ ಕೋವಿಡ್ ಕಾಲದಲ್ಲಿ ಅತ್ಯುತ್ತಮ ವರದಿಗಳನ್ನು ಅನಿಲ್ ಎಚ್.ಟಿ. ಬರೆದರು. ಈಗ ಅಯೋಧ್ಯೆ ಪುಸ್ತಕವನ್ನು ಅಷ್ಟೇ ಅತ್ಯುತ್ತಮವಾಗಿ ರಚಿಸಿದ್ದಾರೆ ಎಂದು ಶ್ಲಾಘಿಸಿದರು. ಅನಿಲ್ ಬರಹದಲ್ಲಿ ವಿನೂತನ ಶೈಲಿಯಿದೆ. ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸುವ ಸ್ವಭಾವವೇ ಅನಿಲ್ ಬರಹಕ್ಕೆ ಸ್ಪೂತಿ೯ಯಾಗಿರುವುದು ವಿಶೇಷ ಎಂದು ಚಿದ್ವಿಲಾಸ್ ಹೇಳಿದರು.ಅಯೋಧ್ಯೆ ಕೃತಿಕಾರ ಅನಿಲ್ ಎಚ್.ಟಿ. ಮಾತನಾಡಿ, ಲಾಕ್ ಡೌನ್ ಡೈರಿ ನಂತರದ ತನ್ನ ಕೃತಿ ಅಯೋಧ್ಯೆ ಅನೇಕ ಓದುಗರ ಬೇಡಿಕೆಯನುಸಾರ ಪ್ರಕಟಿತವಾಗಿದೆ. ಅಯೋಧ್ಯೆಗೆ ಅನೇಕ ಬಾರಿ ತೆರಳಿದ್ದರೂ ಈಗ ದೇವನಗರಿಯಲ್ಲಿ ಆಗಿರುವ ಬದಲಾವಣೆ ಊಹೆಗೂ ನಿಲುಕದಂತಿದೆ. ಕೊಡಗಿನ ಜನತೆ ಕೂಡ 2200 ಕಿ.ಮೀ. ದೂರದ ಅಯೋಧ್ಯೆಯಲ್ಲಿನ ವಿದ್ಯಮಾನಗಳ ಬಗ್ಗೆ ಆಸಕ್ತಿ ವಹಿಸಿದ್ದು ಕೂಡ ಅಯೋಧ್ಯೆ ಪುಸ್ತಕ ಪ್ರಕಟಣೆಗೆ ಕಾರಣವಾಯಿತು ಎಂದು ಮಾಹಿತಿ ನೀಡಿದರು. ಅಯೋಧ್ಯೆಯಲ್ಲಿ ಎಲ್ಲ ಭಾಷೆಯ ಹಾಡುಗಳು ಕೇಳಿ ಬರುತ್ತಿದ್ದವು. ಅದರಲ್ಲಿ 4 ನೇ ಹಾಡಾಗಿ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಹಾಡು ಕೇಳಿ ಬಂದು ರೋಮಾಂಚನಕ್ಕೆ ಕಾರಣವಾಯಿತು. ಅಯೋಧ್ಯೆ ಕೃತಿ ಓದಿದ ಬಳಿಕ ದೇವನಗರಿಗೆ ತೆರಳಬೇಕು ಎಂಬ ಭಾವನೆ ಮೂಡಿದರೆ ತನ್ನ ಪ್ರಯತ್ನ ಸಾಥ೯ಕವಾದಂತೆ. ಹಾಗೇ ಅಯೋಧ್ಯೆ ಕೃತಿ ಓದಿ ಇಲ್ಲಿ ಸಂಪೂಣ೯ ಅಯೋಧ್ಯೆಯ ಚಿತ್ರಣವಿದೆ. ಅಯೋಧ್ಯೆಗೆ ತೆರಳುವುದು ಯಾತಕ್ಕೆ ಎನ್ನಿಸಿದರೂ ತನ್ನ ಶ್ರಮ ಸಾಥ೯ಕವಾದಂತೆ ಎಂದು ಹೇಳಿದರು. ಪ್ರತೀಯೋವ೯ರು ದೈವನಗರದಂತೆ ಕಂಗೊಳಿಸುತ್ತಿರುವ ಅಯೋಧ್ಯೆಗೆ ಒಮ್ಮೆಯಾದರೂ ಭೇಟಿ ನೀಡಲೇಬೇಕು ಎಂದೂ ಅನಿಲ್ ಮನವಿ ಮಾಡಿದರು.ಇದೇ ಸಂದಭ೯ ಸರಿಗಮಪ ರಿಯಾಲಿಟಿ ಶೋನ ಸ್ಪಧಿ೯, ಕೊಡಗಿನ ಯುವ ಗಾಯಕ ಅನ್ವಿತ್ ಕುಮಾರ್ ಇನ್ನಷ್ಟು ಬೇಕೆನ್ನ ಹೖದಯಕ್ಕೆ ರಾಮ ಹಾಡನ್ನು ಸುಶ್ರಾವ್ಯವಾಗಿ ಹಾಡು ಬರೆದ ಸಾಹಿತಿ ಮುಂದೆಯೇ ಹಾಡುವ ಮೂಲಕ ಅಪಾರ ಮೆಚ್ಚುಗೆಗೆ ಕಾರಣರಾದರು. ಲೇಖಕಿ ಕೆ. ಜಯಲಕ್ಷ್ಮಿ ನಿರೂಪಿಸಿದ ಕಾಯ೯ಕ್ರಮದಲ್ಲಿ ಅತಿಥಿಗಳ ಪರಿಚಯನ್ನು ಪತ್ರಕತ೯ ಕುಡೆಕಲ್ ಸಂತೋಷ್, ಉಪನ್ಯಾಸಕಿ ಪ್ರತಿಮಾ ಹರೀಶ್ ರೈ ಮಾಡಿದರು. ರೀನಾ ಅನಿಲ್ , ಎಸ್.ಎಸ್. ಸಂಪತ್ ಕುಮಾರ್ ಕಾಯ೯ಕ್ರಮ ನಿವ೯ಹಿಸಿದರು. ಚಿತ್ರಾ ನಂಜಪ್ಪ, ಸಂಧ್ಯಾ ಚಿದ್ವಿಲಾಸ್, ವಂದನಾ ಪೊನ್ನಪ್ಪ ರಾಮಸ್ತುತಿ ಹಾಡಿದರು.ಸಾಹಿತಿ ಡಾ. ಗಜಾನನ ಶಮಾ೯ , ನಾಗರತ್ನ ಶಮಾ೯ ದಂಪತಿಯನ್ನು ಕೊಡಗಿನ ಜನತೆಯ ಪರವಾಗಿ ಹಿರಿಯ ಪತ್ರಕತ೯ ಜಿ.ರಾಜೇಂದ್ರ, ಕಾಫಿ ಬೆಳೆಗಾರ ವಿನೋದ್ ಶಿವಪ್ಪ, ನಗರಸಭೆಯ ಅಧ್ಯಕ್ಷೆ ಅನಿತಾಪೂವಯ್ಯ, ಡಾ.ಎಂ.ಜಿ.ಪಾಟ್ಕರ್, ಎಚ್. ಎಸ್. ತಿಮ್ಮಪ್ಪಯ್ಯ ಸನ್ಮಾನಿಸಿ ಗೌರವಿಸಿದರು. ಲೇಖಕ ಅನಿಲ್ ಹೆಚ್.ಟಿ. ಅವರನ್ನು ಸಮಥ೯ ಕನ್ನಡಿಗ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.ಕಿಕ್ಕಿರಿದು ಸೇರಿದ್ದ ಸಾಹಿತ್ಯ ಪ್ರೇಮಿಗಳು: ಸಾಹಿತ್ಯ ಸಂಬಂಧಿತ ಕಾಯ೯ಕ್ರಮಗಳಿಗೆ ಹೆಚ್ಚಿನ ಸಭಿಕರು ಸೇರುವುದಿಲ್ಲ ಎಂಬ ಮಾತಿಗೆ ಅಪವಾದ ಎಂಬಂತೆ ಸತ್ಕಾರ್ ಸಭಾಂಗಣದಲ್ಲಿ ಅಯೋಧ್ಯೆ ಕೃತಿ ಲೋಕಾಪ೯ಣೆ ಸಂದಭ೯ ನೂರಾರು ಸಾಹಿತ್ಯ ಪ್ರೇಮಿಗಳು ಕಿಕ್ಕಿರಿದು ಸೇರಿದ್ದು ಗಮನಾಹ೯ವಾಗಿತ್ತು. ಸಾಮಾನ್ಯವಾಗಿ ಕವಿತೆಗಳ ಪುಸ್ತಕಕ್ಕೆ ಕವಿತೆಯಲ್ಲಿ ಆಸಕ್ತಿ ಉಳ್ಳವರು, ಸಾಹಿತ್ಯ ಪುಸ್ತಕಕ್ಕೆ ಸಾಹಿತ್ಯದಲ್ಲಿ ಆಸಕ್ತರು ಮಾತ್ರ ಹಾಜರಿರುತ್ತಾರೆ. ಆದರೆ ಅಯೋಧ್ಯೆ ಕೃತಿ ಲೋಕಾಪ೯ಣೆ ಸಂದಭ೯ ಸಮಾಜದ ಎಲ್ಲ ವಗ೯ದ ಸಾಹಿತ್ಯ, ಕಲಾಪ್ರೇಮಿಗಳೂ ಕಿಕ್ಕಿರಿದು ಸೇರಿದ್ದರು. ಮಡಿಕೇರಿಯಲ್ಲಿ ಸಭಿಕರ ಕೊರತೆ ಇಲ್ಲ ಎಂಬುದಕ್ಕೆ ಈ ಕಾಯ೯ಕ್ರಮ ಉದಾಹರಣೆಯಾಗಿದೆ ಎಂದು ಅತಿಥಿಯಾಗಿದ್ದ ಪತ್ರಕತ೯ ಜಿ.ಚಿದ್ವಿಲಾಸ್ ಅಭಿಪ್ರಾಯಪಟ್ಟರು.