ಶ್ರೀರಾಮ ನವಮಿ: ಬ್ಯಾನರ್‌ನಲ್ಲಿ ಎಡವಟ್ಟು

| Published : Apr 07 2025, 12:36 AM IST

ಸಾರಾಂಶ

ವಿನಯ ಕುಲಕರ್ಣಿ ಪತ್ನಿ, ಧಾರವಾಡ ಹಾಲು ಒಕ್ಕೂಟದ ನಿರ್ದೇಶಕರಾದ ಶಿವಲೀಲಾ ಕುಲಕರ್ಣಿ ಅವರ ಭಾವಚಿತ್ರ ಇರುವ ಬ್ಯಾನರ್‌ನಲ್ಲಿ ಶ್ರೀರಾಮ ನವಮಿ ಹಿನ್ನೆಲೆಯಲ್ಲಿ ಶುಭಾಶಯ ಕೋರಲಾಗಿದೆ

ಧಾರವಾಡ: ಶ್ರೀರಾಮನವಮಿ ಶುಭಾಶಯ ಹೇಳುವ ಬ್ಯಾನರ್‌ನಲ್ಲಿ ವಿನಯ ಕುಲಕರ್ಣಿ ಬ್ರಿಗೇಡ್‌ ಕಾರ್ಯಕರ್ತರು ಎಡವಟ್ಟು ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ.

ತಾಯಿ (ಶಿವಲೀಲಾ ಕುಲಕರ್ಣಿ)ಯ ಫೋಟೋಗೆ ಮಗಳ (ವೈಶಾಲಿ ಕುಲಕರ್ಣಿ) ಹೆಸರು ಬರೆದು ಶುಭಾಷಯ ಕೋರಲಾಗಿದೆ. ವಿನಯ ಕುಲಕರ್ಣಿ ಪತ್ನಿ, ಧಾರವಾಡ ಹಾಲು ಒಕ್ಕೂಟದ ನಿರ್ದೇಶಕರಾದ ಶಿವಲೀಲಾ ಕುಲಕರ್ಣಿ ಅವರ ಭಾವಚಿತ್ರ ಇರುವ ಬ್ಯಾನರ್‌ನಲ್ಲಿ ಶ್ರೀರಾಮ ನವಮಿ ಹಿನ್ನೆಲೆಯಲ್ಲಿ ಶುಭಾಶಯ ಕೋರಲಾಗಿದೆ. ಆದರೆ, ಕರ್ನಾಟಕ ವನ್ಯ ಜೀವಿ ಮಂಡಳಿಯ ಸದಸ್ಯರು, ವಿನಯ ಕುಲಕರ್ಣಿ ಮಗಳು ವೈಶಾಲಿ‌ ಹೆಸರು ಬರೆಯಲಾಗಿದೆ. ಇಲ್ಲಿಯ ಜುಬ್ಲಿ‌ ಸರ್ಕಲ್ ನಲ್ಲಿ ಹಾಕಲಾಗಿರುವ ಬ್ಯಾನರ್‌ನಲ್ಲಿ ಈ ಎಡವಟ್ಟು ನಡೆದಿದೆ. ಈ ಕುರಿತು ಸಾರ್ವಜನಿಕರು ಗಮನ ಸೆಳೆದಾಗ, ಕಾರ್ಯಕರ್ತರು ಬ್ಯಾನರ್‌ನ್ನು ಕೂಡಲೇ ತೆರವುಗೊಳಿಸಿದರು.