ರಾಜ್ಯ ಸರ್ಕಾರ ವಜಾಕ್ಕೆ ಶ್ರೀರಾಮಸೇನೆ ಆಗ್ರಹ

| Published : Apr 24 2024, 02:20 AM IST

ರಾಜ್ಯ ಸರ್ಕಾರ ವಜಾಕ್ಕೆ ಶ್ರೀರಾಮಸೇನೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಕೇವಲ ಎರಡೇ ದಿನದಲ್ಲಿ ಸಾಲು ಸಾಲು ಹಿಂದೂಗಳ ಮೇಲೆ ಮತಾಂಧರಿಂದ ಬರ್ಬರ ಕೊಲೆ, ದಾಳಿಯಿಂದಾಗಿ ರಾಜ್ಯದಲ್ಲಿ ಕುಸಿದುಬಿದ್ದ ಕಾನೂನು ಸುವ್ಯವಸ್ಥೆ ಹಿನ್ನೆಲೆ ರಾಜ್ಯದಲ್ಲಿ ರಾಷ್ಟ್ರಪತಿ ಶಾಸನ ಜಾರಿಮಾಡಬೇಕು ಎಂದು ಶ್ರೀರಾಮಸೇನೆ ಆಗ್ರಹಿಸಿದೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ರಾಜ್ಯದಲ್ಲಿ ಕೇವಲ ಎರಡೇ ದಿನದಲ್ಲಿ ಸಾಲು ಸಾಲು ಹಿಂದೂಗಳ ಮೇಲೆ ಮತಾಂಧರಿಂದ ಬರ್ಬರ ಕೊಲೆ, ದಾಳಿಯಿಂದಾಗಿ ರಾಜ್ಯದಲ್ಲಿ ಕುಸಿದುಬಿದ್ದ ಕಾನೂನು ಸುವ್ಯವಸ್ಥೆ ಹಿನ್ನೆಲೆ ರಾಜ್ಯದಲ್ಲಿ ರಾಷ್ಟ್ರಪತಿ ಶಾಸನ ಜಾರಿಮಾಡಬೇಕು ಎಂದು ಶ್ರೀರಾಮಸೇನೆ ಆಗ್ರಹಿಸಿದೆ.

ರಾಜ್ಯಪಾಲರಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸಲ್ಲಿಸಿದ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಶಶಾಂಕ ನಾಯಕ ಮಾತನಾಡಿ, ಕಳೆದೆರಡು ದಿನದಲ್ಲಿ ಇಡೀ ರಾಜ್ಯದ ಹಿಂದೂ ಜನತೆ ಬೆಚ್ಚಿಬೀಳುವ ಹಾಗೆ ಕೆಲವು ಮತಾಂಧರು ಅಟ್ಟಹಾಸ ಮೆರೆದಿದ್ದು ನಿಜಕ್ಕೂ ಆಘಾತಕಾರಿ ಬೆಳವಣಿಗೆ. ಯಾವ ಕಾನೂನು, ಪೊಲೀಸ್, ಸಂವಿಧಾನಕ್ಕೆ ಮರ್ಯಾದೆ ಇಲ್ಲದೇ ಕಾನೂನನ್ನು ಕೈಗೆತ್ತಿಕೊಂಡು ತಾಲಿಬಾನ್ ಮಾದರಿ ರಾಜ್ಯದ ಜನ ನೋಡುವ ಸ್ಥಿತಿ ಬಂದಿರುವುದು ಅತ್ಯಂತ ದುರ್ದೈವ ಎಂದರು.

ಹುಬ್ಬಳ್ಳಿ ಕಾಲೇಜು ವಿದ್ಯಾರ್ಥಿನಿ ನೇಹಾಳನ್ನು ಹಾಡು ಹಗಲೇ ಫಯಾಜ್, ಕಾಲೇಜು ಕ್ಯಾಂಪಸ್‌ನಲ್ಲೇ ಬರ್ಬರ ಹತ್ಯೆ ನಡೆಸಿದ್ದಾನೆ. ದಾವಣಗೆರೆ ಜಿಲ್ಲೆ ನಲ್ಲೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಮುಸ್ಲಿಂರಿಂದ ಮೂವರು ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ. ಆಸ್ಪತ್ರೆಯಲ್ಲಿ ಜೀವನ್ಮರಣ ಮಧ್ಯೆ ಚಿಂತಾಜನಕ ಸ್ಥಿತಿ, ಚಿತ್ರದುರ್ಗದಲ್ಲಿ ಸಹ ಉದ್ಯೋಗಿ ಹಿಂದೂ ಯುವಕ ಮುಸ್ಲಿಂ ಯುವತಿಗೆ ಡ್ರಾಪ್ ಕೊಟ್ಟದ್ದಕ್ಕೆ ಗೂಂಡಾಗಳಿಂದ ಹಿಗ್ಗಾಮುಗ್ಗ ಥಳಿಸಿದ್ದರಿಂದ ಆಸ್ಪತ್ರೆ ದಾಖಲಾಗಿದ್ದಾರೆ. ಬೆಂಗಳೂರು ವಿದ್ಯಾರಣ್ಯಪುರದಲ್ಲಿ ಜೈ ಶ್ರೀರಾಮ ಘೋಷಣೆ ಕೂಗಿದ ಹಿಂದೂಗಳ ಮೇಲೆ ಆಕ್ರಮಣ. ಮೈಸೂರಿನಲ್ಲಿ ಪ್ರಧಾನಿ ಮೋದಿ ಹಾಗೂ ಶ್ರೀರಾಮನ ರೀಲ್ಸ್‌ ಮಾಡಿದ್ದಕ್ಕೆ ಹಿಂದೂ ವ್ಯಕ್ತಿಯೊಬ್ಬರ ಮೇಲೆ ರಾಕ್ಷಸೀಯವಾಗಿ ಹಲ್ಲೆ ನಡೆಸಲಾಗಿದೆ. ಬಾಗಲಕೋಟ ಜಿಲ್ಲೆ ಬಾದಾಮಿಯಲ್ಲಿ ಹಿಂದೂ ವ್ಯಾಪಾರಸ್ಥರಿಗೆ ಕ್ಷುಲ್ಲಕ ಕಾರಣಕ್ಕೆ ಮುಸ್ಲಿಂರಿಂದ ಬೇಕಾಬಿಟ್ಟಿ ದಾಳಿ ನಡೆದಿದೆ ಎಂದು ಆರೋಪಿಸಿದರು.

ಇಂತಹ ಘಟನೆಗಳು ಈಗ ಗಮನಕ್ಕೆ ಬಂದಿದ್ದು, ಬೆಳಕಿಗೆ ಬಾರದೇ ಇರುವ ಇನ್ನೂ ಅನೇಕ ಪ್ರಕರಣ ಮುಚ್ಚಿ ಹಾಕಿರುವ, ಧ್ವನಿ ಹತ್ತಿಕ್ಕಲಾಗಿದೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಕಳೆದ ವರ್ಷದಲ್ಲಿ ನಿರಂತರವಾಗಿ ಹಿಂದೂಗಳ ಮೇಲೆ ಕೊಲೆ, ಸುಲಿಗೆ, ಹಲ್ಲೆಗಳು ನಡೆಯುತ್ತಲೇ ಇರುವುದರಿಂದ ರಾಜ್ಯದಲ್ಲಿ ಆಡಳಿತ ನಡೆಸಲು ಅಯೋಗ್ಯವಾಗಿದ್ದು, ಎಲ್ಲರನ್ನು ಒಳಗೊಂಡು ಕೊರೆದೊಯ್ಯುವ ಸರ್ಕಾರ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಪಾಲಿಸುವಲ್ಲಿ, ಹಿಂದೂಗಳಿಗೆ ರಕ್ಷಣೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದ್ದು, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಿ, ಪೊಲೀಸ್, ಗೃಹ ಇಲಾಖೆಗೆ ಕಾನೂನು ಸುವ್ಯವಸ್ಥೆ ಬಗ್ಗೆ ತಾವೇ ಖುದ್ದಾಗಿ ಮುತುವರ್ಜಿ ವಹಿಸಿ ಕ್ರಮ ಕೈಗೊಳ್ಳಬೇಕೆಂದು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ಮಹೇಂದ್ರಕರ್, ಉಪಾಧ್ಯಕ್ಷ ಅಂಬ್ರೆಷ್ ತಡಿಬಿಡಿ, ಯುವ ಅಧ್ಯಕ್ಷ ರಘುರಾಮ್, ತಾಲೂಕು ಉಪಾಧ್ಯಕ್ಷ ಬಸ್ಸು ಮನಗನಾಳ, ಗೋರಕ್ಷಕ ಪ್ರಮುಖ ಮಲ್ಲು ಮುಂಡ್ರಗಿ, ಶಿವಾನಂದ ಮುಂಡರಗಿ, ರಾಕೇಶ ನಾಯಕ, ಆಕಾಶ ಚವ್ಹಾಣ, ಪವನ್, ರಾಘು ಮನಗನಾಳ, ಅಭಿಷೇಕ್ ಹಿರೇಮಠ ಸೇರಿದಂತೆ ಇತರರಿದ್ದರು.