ರಾಮಮಂದಿರ ಅವಹೇಳನ, ಕಾಂಗ್ರೆಸ್‌ ಹೇಳಿಕೆ ಶ್ರೀರಾಮಸೇನೆ ಸಹಿಸಲ್ಲ: ರಾಜು ಖಾನಪ್ಪನವರ

| Published : Jan 22 2024, 02:17 AM IST

ರಾಮಮಂದಿರ ಅವಹೇಳನ, ಕಾಂಗ್ರೆಸ್‌ ಹೇಳಿಕೆ ಶ್ರೀರಾಮಸೇನೆ ಸಹಿಸಲ್ಲ: ರಾಜು ಖಾನಪ್ಪನವರ
Share this Article
  • FB
  • TW
  • Linkdin
  • Email

ಸಾರಾಂಶ

ಈಗ ಮಂದಿರ ನಿರ್ಮಾಣವಾಗುತ್ತಿರುವುದು ಸಂತಸದ ಸಂಗತಿ. ಆದರೆ, ಕಾಂಗ್ರೆಸ್‌ನವರು ರಾಮ ಮಂದಿರದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದು ಖಂಡನೀಯ. ಇದನ್ನು ಶ್ರೀರಾಮ ಸೇನೆ ಇದನ್ನು ಯಾವ ಕಾರಣಕ್ಕೂ ಸಹಿಸಲ್ಲ ಎಂದು ಶ್ರೀರಾಮ ಸೇನೆಯ ರಾಜ್ಯ ಕಾರ್ಯದರ್ಶಿ ರಾಜು ಖಾನಪ್ಪನವರ ಹೇಳಿದರು.

ಗದಗ: ಶ್ರೀರಾಮ ಮಂದಿರ ನಿರ್ಮಾಣ ಜಗತ್ತಿನ ಎಲ್ಲ ಹಿಂದೂಗಳಿಗೆ ಖುಷಿಯ ವಿಚಾರ. ಸಾವಿರಾರು ಹೋರಾಟಗಾರರು ರಾಮ ಮಂದಿರ ಹೋರಾಟದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಈಗ ಮಂದಿರ ನಿರ್ಮಾಣವಾಗುತ್ತಿರುವುದು ಸಂತಸದ ಸಂಗತಿ. ಆದರೆ, ಕಾಂಗ್ರೆಸ್‌ನವರು ರಾಮ ಮಂದಿರದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದು ಖಂಡನೀಯ. ಇದನ್ನು ಶ್ರೀರಾಮ ಸೇನೆ ಇದನ್ನು ಯಾವ ಕಾರಣಕ್ಕೂ ಸಹಿಸಲ್ಲ ಎಂದು ಶ್ರೀರಾಮ ಸೇನೆಯ ರಾಜ್ಯ ಕಾರ್ಯದರ್ಶಿ ರಾಜು ಖಾನಪ್ಪನವರ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಸಿಎಂ ಸಿದ್ದರಾಮಯ್ಯನವರ ಹೆಸರಿನಲ್ಲಿ ಪ್ರತಿನಿತ್ಯ ರಾಮನ ಹೆಸರು ಉಚ್ಚಾರವಾಗುತ್ತದೆ. ಹೀಗಾಗಿ ರಾಮನ ಬಗ್ಗೆ ಸಿಎಂಗೆ ಭಕ್ತಿ ಇರಲಿ. ಅಗೌರವ ಬೇಡ. ದೇಶದ ಹಲವು ರಾಜ್ಯಗಳಲ್ಲಿ ಸರ್ಕಾರಿ ರಜೆ ಘೋಷಿಸಲಾಗಿದೆ. ಆದರೆ, ರಾಜ್ಯ ಸರ್ಕಾರ ಇದುವರೆಗೂ ರಜೆಯ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಕೂಡಲೇ ರಾಜ್ಯ ಸರ್ಕಾರ ರಜೆಯ ಬಗ್ಗೆ ಆದೇಶಿಸಬೇಕು ಎಂದು ಮನವಿ ಮಾಡಿದರು.ಉದ್ಘಾಟನೆ ದಿನದಂದು ರಾಮನ 8 ಪುಟಿನ ಭವ್ಯ ಮೂರ್ತಿ ಮೆರವಣಿಗೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಪೊಲೀಸರ ಮುಖಾಂತರ ನಮ್ಮ ಮೆರವಣಿಗೆ ಮೇಲೆ ನಿಯಂತ್ರಣ ಹೇರಲಾಗುತ್ತಿದೆ. ನಮ್ಮ ಮೆರವಣಿಗೆಗೆ ಅವಕಾಶ ನೀಡದಿರುವುದು ಬೇಸರದ ಸಂಗತಿ. ಜೊತೆಗೆ, ಜಿಲ್ಲೆಯ ಎಲ್ಲ ಬಾರ್ ಅಸೋಸಿಯೇಶನ್ ಮತ್ತು ಮಾಂಸದಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಎಲ್ಲ ವ್ಯಾಪಾರಸ್ಥರು ತಮ್ಮ ದಿನನಿತ್ಯದ ಕೆಲಸ ಸ್ಥಗಿತಗೊಳಿಸಿ ಮೆರವಣಿಗೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.ಸಚಿವ ಪ್ರಿಯಾಂಕ್‌ ಖರ್ಗೆಗೆ ಪ್ರಭು ಶ್ರೀರಾಮ ಚಂದ್ರನ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. 500 ವರ್ಷಗಳ ಹೋರಾಟದ ನಂತರ ಕಾನೂನಾತ್ಮಕವಾಗಿ ಜಯ ಸಿಕ್ಕಿದೆ ಎಂದರು.

ಜ. 22ರಂದು ನಮ್ಮ ಮರವಣಿಗೆಗೆ ಪೋಲಿಸರ ಮುಖಾಂತರ ಸರ್ಕಾರ ನಿರ್ಬಂಧ ಹೇರುತ್ತಿದೆ. ಆದರೆ, ಇಡೀ ಸರ್ಕಾರ, ಇಡೀ ಪೊಲೀಸ್‌ ಇಲಾಖೆ ಯಾವುದೇ ನಿರ್ಬಂಧ ಹೇರಿದರೂ ನಮ್ಮ ಮೆರವಣಿಗೆ ತಡೆಯಲು ಸಾಧ್ಯವಿಲ್ಲ. ಜ. 22ರಂದು ಜೋಡು ಮಾರುತಿ ದೇವಸ್ಥಾನದಿಂದ ಮೆರವಣಿಗೆ ಆರಂಭ ಮಾಡಿಯೇ ತೀರುತ್ತೇವೆ ಎಂದರು.

ಈ ಸಂದರ್ಭದಲ್ಲಿ ಮಹೇಶ್ ರೋಖಡೆ, ಸೋಮು ಗುಡಿ, ಬಸವರಾಜ ಕುರ್ತಕೊಟಿ, ಶಿವಯೋಗಿ ಹಿರೇಮಠ, ಮಹಾಬಳೇಶ ಶೆಟ್ಚರ, ಮೌನೇಶ್ ಚನ್ನದಾಸರ್, ಸತೀಶ್ ಕುಂಬಾರ, ಮಂಜು ಪೂಜಾರ, ರಾಮು ಗೌಡರ್, ಸುನೀಲ್ ಮುಳ್ಳಾಳ, ಈರಣ್ಣ ಹೊಸಮನಿ, ಅನಿಲ ಮುಳ್ಳಾಳ, ಮುದಕಪ್ಪ ಬಂಡಿವಡ್ಡರ ಉಪಸ್ಥಿತರಿದ್ದರು.