ವಿಹಿಂಪ ನೇತೃತ್ವದಲ್ಲಿ ಶ್ರೀರಾಮ ತಾರಕ ಹೋಮ

| Published : Jan 23 2024, 01:47 AM IST

ಸಾರಾಂಶ

ಬೀಳಗಿ: ಇಲ್ಲಿನ ಶ್ರೀ ರಾಮ ಜನ್ಮಭೂಮಿ ತೀಥಕ್ಷೇತ್ರ ಹಾಗೂ ವಿಶ್ವ ಹಿಂದು ಪರಿಷತ್‌ ನೇತೃತ್ವದಲ್ಲಿ ಅಯೋಧ್ಯೆ ಶ್ರೀ ರಾಮಮಂದಿರ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮದ ಪ್ರಯುಕ್ತ ಪಟ್ಟಣದ ಶಿವಾಜಿ ವೃತ್ತದಲ್ಲಿ ಇರುವ ಬಸವೇಶ್ವರ ದೇವಸ್ಥಾನದಲ್ಲಿ ಪ್ರಭು ಶ್ರೀರಾಮನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿ ಶ್ರೀ ರಾಮ ನಾಮತಾರಕ ಹೋಮ ಮತ್ತು ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮದ ನೇರ ಪ್ರಸಾರ ಮತ್ತು ಅನ್ನ ಸಂತರ್ಪಣೆ ಜರುಗಿತು. ಶ್ರೀರಾಮ ತಾರಕ ಹೋಮದಲ್ಲಿ ಪಟ್ಟಣದ ದಂಪತಿ ಭಾಗಿಯಾಗಿದ್ದರು. ಪಟ್ಟಣದ ಕಂಬಾರ ಅಗಸಿಯಲ್ಲಿರುವ ಮರಗಮ್ನ ದೇವಿ ದೇವಾಲಯದಲ್ಲಿ ಕಂಬಾರ ಓಣಿಯ ಹಿರಿಯರು-ಯುವಕರು ರಾಮ ಲಲ್ಲಾ ಪ್ರಾಣ ಪ್ರತಿಷ್ಠಾನದ ಸಂಭ್ರಮಾಚರಣೆ ಮಾಡಿ ಆಗಮಿಸಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಇಲ್ಲಿನ ಶ್ರೀ ರಾಮ ಜನ್ಮಭೂಮಿ ತೀಥಕ್ಷೇತ್ರ ಹಾಗೂ ವಿಶ್ವ ಹಿಂದು ಪರಿಷತ್‌ ನೇತೃತ್ವದಲ್ಲಿ ಅಯೋಧ್ಯೆ ಶ್ರೀ ರಾಮಮಂದಿರ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮದ ಪ್ರಯುಕ್ತ ಪಟ್ಟಣದ ಶಿವಾಜಿ ವೃತ್ತದಲ್ಲಿ ಇರುವ ಬಸವೇಶ್ವರ ದೇವಸ್ಥಾನದಲ್ಲಿ ಪ್ರಭು ಶ್ರೀರಾಮನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿ ಶ್ರೀ ರಾಮ ನಾಮತಾರಕ ಹೋಮ ಮತ್ತು ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮದ ನೇರ ಪ್ರಸಾರ ಮತ್ತು ಅನ್ನ ಸಂತರ್ಪಣೆ ಜರುಗಿತು. ಶ್ರೀರಾಮ ತಾರಕ ಹೋಮದಲ್ಲಿ ಪಟ್ಟಣದ ದಂಪತಿ ಭಾಗಿಯಾಗಿದ್ದರು.

ಪಟ್ಟಣದ ಕಂಬಾರ ಅಗಸಿಯಲ್ಲಿರುವ ಮರಗಮ್ನ ದೇವಿ ದೇವಾಲಯದಲ್ಲಿ ಕಂಬಾರ ಓಣಿಯ ಹಿರಿಯರು-ಯುವಕರು ರಾಮ ಲಲ್ಲಾ ಪ್ರಾಣ ಪ್ರತಿಷ್ಠಾನದ ಸಂಭ್ರಮಾಚರಣೆ ಮಾಡಿ ಆಗಮಿಸಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಿದರು. ಗೋವಿನದಿನ್ನಿ ಆಂಜನೇಯ ದೇವಸ್ಥಾನದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಸಿಬ್ಬಂದಿ ಅಯೋಧ್ಯೆಯ ರಾಮಮಂದಿರ ಸಂಭ್ರಮಾಚರಣೆ ಅಂಗವಾಗಿ ಅನ್ನ ಸಂತರ್ಪಣೆ ಮಾಡಿದರು. ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾನ ರಾಮೋತ್ಸವ ವಿಜೃಂಭಣೆಯಿಂದ ಜರುಗಿತು.

ವಿಶ್ವ ಹಿಂದು ಪರಿಷತ್‌ ರಾಜ್ಯ ಸಂಯೋಜಕ ಪುಂಡಲೀಕ ದಳವಾಯಿ, ಮಂತ್ರಾಕ್ಷತೆ ವಿತರಣೆ ತಾಲೂಕು ಸಂಚಾಲಕ ವಿಠ್ಠಲ ಯತ್ನಟ್ಟಿ, ಮುತ್ತು ಬೋರ್ಜಿ, ರಾಮಚಂದ್ರ ನಲವಡೆ, ಲಕ್ಷ್ಮಣ ತೋಟದ, ಸಾಬಣ್ಣ ಮೇರಾಕಾರ, ಶಶಿಕುಮಾರ ಕೊಡತಗೇರಿ, ಸಿದ್ದು ಮಾದರ, ದಾನೇಶ ಹಿರೇಮಠ, ಮೊನೇಶ ಮುರ್ಜಾವರಮಠ, ಆನಂದ ನಿಂಬಾಳಕರ, ಉಮೇಶ ವಾಲಿಕಾರ, ಸಿದ್ದು ಪಾತ್ರೋಟ, ಗಂಗಾಧರ ಕಲಬುರಗಿ ಮತ್ತಿತರರು ಇದ್ದರು.