ಸಾರಾಂಶ
ಬೆಳಗ್ಗೆ ಶ್ರೀರಾಮ ತಾರಕ ಯಜ್ಞ ಆರಂಭಗೊಂಡಿತು. ಬಳಿಕ ಧರ್ಮನಡೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ದೇವಾಲಯದ ಹೊರಾಂಗಣದಲ್ಲಿ ರಚಿಸಲಾಗಿದ್ದ ಯಜ್ಞಕುಂಡದಲ್ಲಿ ರಾಮತಾರಕ ಯಜ್ಞ ನಡೆಯಿತು. ಈ ಸಂದರ್ಭ ಸಾವಿರಾರು ಭಕ್ತರು ರಾಮ ತಾರಕ ಮಂತ್ರವನ್ನು ನಿರಂತರವಾಗಿ ಪಠಿಸಿದರು.
ಕನ್ನಡಪ್ರಭ ವಾರ್ತೆ ಪುತ್ತೂರುಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠೆಯ ಸಂದರ್ಭ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಮಾರ್ಗದರ್ಶನದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ವಿ.ಎಸ್. ಭಟ್ ನೇತೃತ್ವದಲ್ಲಿ ಶ್ರೀರಾಮ ತಾರಕ ಯಜ್ಞ ನಡೆಯಿತು.
ಬೆಳಗ್ಗೆ ಶ್ರೀರಾಮ ತಾರಕ ಯಜ್ಞ ಆರಂಭಗೊಂಡಿತು. ಬಳಿಕ ಧರ್ಮನಡೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ದೇವಾಲಯದ ಹೊರಾಂಗಣದಲ್ಲಿ ರಚಿಸಲಾಗಿದ್ದ ಯಜ್ಞಕುಂಡದಲ್ಲಿ ರಾಮತಾರಕ ಯಜ್ಞ ನಡೆಯಿತು. ಈ ಸಂದರ್ಭ ಸಾವಿರಾರು ಭಕ್ತರು ರಾಮ ತಾರಕ ಮಂತ್ರವನ್ನು ನಿರಂತರವಾಗಿ ಪಠಿಸಿದರು.ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ದೀಪಪ್ರಜ್ವಲನೆ ಮಾಡಿ ಮಾತನಾಡಿದರು.
ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ.ಐತ್ತಪ್ಪ ನಾಯ್ಕ್, ಶೇಖರ ನಾರಾವಿ, ರಾಮಚಂದ್ರ ಕಾಮತ್, ರಾಮದಾಸ್ ಗೌಡ, ಡಾ. ಸುಧಾ ಎಸ್. ರಾವ್, ರವೀಂದ್ರನಾಥ ರೈ, ವೀಣಾ ಬಿ.ಕೆ. ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರು.ಶ್ರೀ ವೆಂಕಟರಮಣ ದೇವಾಲಯದಲ್ಲಿ ಶ್ರೀರಾಮ ಪಟ್ಟಾಭಿಷೇಕಪುತ್ತೂರು ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ಶ್ರೀರಾಮ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಿತು. ಶ್ರೀರಾಮ ವಿಗ್ರಹಕ್ಕೆ ಪೂಜೆ ಮಾಡಿ, ಶ್ರೀರಾಮನ ಪಟ್ಟಾಭಿಷೇಕದ ಸಾಂಪ್ರದಾಯಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಇದೇ ಸಂದರ್ಭದಲ್ಲಿ ಮಹಿಳೆಯರು ಶ್ರೀರಾಮ ಸಂಕೀರ್ತನೆಗಳನ್ನು ಹಾಡಿದರು.ಅಯೋಧ್ಯೆಗೆ ತೆರಳಲು ಸಾಧ್ಯವಾಗದವರಿಗೆ ಶ್ರೀರಾಮನ ಬದುಕಿನ ಭಾಗವಾದ ಪಟ್ಟಾಭಿಷೇಕದ ಧಾರ್ಮಿಕ ವಿಧಾನಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ ಎಂದು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದ ಲಕ್ಷ್ಮೀನಾರಾಯಣ ಭಟ್ ಉಪ್ಪಿನಂಗಡಿ ಹೇಳಿದರು.ಎಲ್‌ಇಡಿ ಮೂಲಕ ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠೆ ಕಾರ್ಯಕ್ರಮ ವೀಕ್ಷಣೆಗೆ ದೇವಾಲಯದ ಒಳ ಭಾಗದಲ್ಲಿ ಅವಕಾಶ ಕಲ್ಪಿಸಲಾಗಿತ್ತು.