ಸಾರಾಂಶ
ಶ್ರೀರಾಮನ ಆದರ್ಶಗಳೇನು, ರಾಮರಾಜ್ಯದ ನಿಜವಾದ ಪರಿಕಲ್ಪನೆಗಳೇನು ಎಂಬುದನ್ನು ತಿಳಿಯಬೇಕೆಂದರೆ ಮಹರ್ಷಿ ವಾಲ್ಮೀಕಿ ವಿರಚಿತ ಮೂಲ ರಾಮಾಯಣದ ಪಾದುಕಾಪ್ರದಾನದ ಸಂದರ್ಭದಲ್ಲಿ ಭರತನಿಗೆ ಹೇಳಿದ ಮಾತುಗಳಿಂದ ವೇದ್ಯವಾಗುತ್ತದೆ. ಶ್ರೀರಾಮನ ಆದರ್ಶಗಳನ್ನು ಪಾಲಿಸುವುದೇ ಶ್ರೀರಾಮರಿಗೆ ನಾವು ಸಲ್ಲಿಸಬಹುದಾದ ನಿಜವಾದ ಭಕ್ತಿ.
ದಾವಣಗೆರೆ: ನ್ಯಾಯನಿಷ್ಠೆ, ತ್ಯಾಗ, ದುಷ್ಟಶಿಕ್ಷಣೆ, ಶಿಷ್ಟರಕ್ಷಣೆ, ಮೌಲ್ಯ ಪ್ರತಿಪಾದನೆ ಭಾರತೀಯ ಸಂಸ್ಕೃತಿಯಾಗಿದ್ದು ಇದರ ಅಸ್ಮಿತೆಯ ಸಂಕೇತವೇ ಶ್ರೀರಾಮಚಂದ್ರ ಎಂದು ಹಿರಿಯ ವ್ಯಂಗ್ಯಚಿತ್ರಕಾರ ಎಚ್.ಬಿ.ಮಂಜುನಾಥ ಹೇಳಿದರು.
ನಗರದ ಜಯದೇವ ವೃತ್ತದ ಅಧ್ಯಾತ್ಮ ಮಂದಿರದಲ್ಲಿ ಶನಿವಾರ ಶ್ರೀರಾಮಚಂದ್ರ ಹಾಗೂ ಅಯೋಧ್ಯೆಯ ಕುರಿತಾಗಿ ಭಜನಾ ಮಂಡಳಿಗಳ ಸದಸ್ಯೆಯರ ಉದ್ದೇಶಿಸಿ ಉಪನ್ಯಾಸ ನೀಡಿದರು. ಶ್ರೀರಾಮನ ಆದರ್ಶಗಳೇನು, ರಾಮರಾಜ್ಯದ ನಿಜವಾದ ಪರಿಕಲ್ಪನೆಗಳೇನು ಎಂಬುದನ್ನು ತಿಳಿಯಬೇಕೆಂದರೆ ಮಹರ್ಷಿ ವಾಲ್ಮೀಕಿ ವಿರಚಿತ ಮೂಲ ರಾಮಾಯಣದ ಪಾದುಕಾಪ್ರದಾನದ ಸಂದರ್ಭದಲ್ಲಿ ಭರತನಿಗೆ ಹೇಳಿದ ಮಾತುಗಳಿಂದ ವೇದ್ಯವಾಗುತ್ತದೆ. ಶ್ರೀರಾಮನ ಆದರ್ಶಗಳನ್ನು ಪಾಲಿಸುವುದೇ ಶ್ರೀರಾಮರಿಗೆ ನಾವು ಸಲ್ಲಿಸಬಹುದಾದ ನಿಜವಾದ ಭಕ್ತಿ. ಶ್ರೀರಾಮನ ಕಾಲದ ಅಯೋಧ್ಯೆಯ ವಿಷೇಶತೆ, 1528ರಲ್ಲಿ ಅಯೋಧ್ಯೆಯ ಮೇಲಾದ ದಾಳಿ, ಪ್ರಸ್ತುತವಾಗಿ ಅಯೋಧ್ಯೆಯ ಪುನರ್ ವೈಭವ ಪ್ರತಿಷ್ಠಾಪನೆಯ ಪ್ರಮುಖ ಘಟ್ಟಗಳನ್ನು ಸಂಕ್ಷಿಪ್ತವಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಶಾಸ್ತ್ರೀಯ ಸಂಗೀತ ಶಿಕ್ಷಕಿ, ವಿದುಷಿ ಶೀಲಾ ನಟರಾಜ್ ಹಾಗೂ ಭಜನಾ ಮಂಡಳಿಗಳ ಸದಸ್ಯೆಯರು ಉಪಸ್ಥಿತರಿದ್ದರು. ವೇದಮೂರ್ತಿ ಶಿವರಾಮ ಶಾಸ್ತ್ರೀ ಪೂಜಾವಿಧಿ ನೆರವೇರಿಸಿದರು.
......