ಶ್ರೀರಾಮಚಂದ್ರ ಭಾರತೀಯ ಸಂಸ್ಕೃತಿಯ ಪ್ರತೀಕ: ದೊಡ್ಡನಗೌಡ ಪಾಟೀಲ

| Published : Jan 19 2024, 01:48 AM IST

ಶ್ರೀರಾಮಚಂದ್ರ ಭಾರತೀಯ ಸಂಸ್ಕೃತಿಯ ಪ್ರತೀಕ: ದೊಡ್ಡನಗೌಡ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ರಾಮಲಲ್ಲಾ ಪ್ರತಿಷ್ಠಾಪನೆ ಅಂಗವಾಗಿ ದೇವಸ್ಥಾನ ಸ್ವಚ್ಛಗೊಳಿಸಬೇಕು ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರು ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಮರ್ಯಾದೆ ಪುರುಷೋತ್ತಮ ಶ್ರೀರಾಮಚಂದ್ರ ಭಾರತೀಯ ಸಂಸ್ಕೃತಿಯ ಪ್ರತೀಕ. ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ನಗರದ ಪ್ರತಿಯೊಂದು ವಾರ್ಡಗಳ ಮನೆಗಳಲ್ಲಿ ದೀಪ ಬೆಳಗಿಸಬೇಕು ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಕರೆ ನೀಡಿದರು.

ನಗರದ ಶ್ರೀ ವೆಂಕಟೇಶ್ವರ ದೇವಸ್ಥಾನದಿಂದ ಮುಖ್ಯ ಬಜಾರ ರಸ್ತೆಯ ವ್ಯಾಪಾರಸ್ಥರಿಗೆ ಮಂತ್ರಾಕ್ಷತೆ ಪೂಜೆ ಹಾಗೂ ವಿತರಣಾ ಕಾರ್ಯಕ್ರಮವನ್ನು ಶ್ರೀ ವೆಂಕಟೇಶ್ವರಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ಅವರು ಪ್ರಾರಂಭಿಸಿದರು.

ನಂತರ ಮಾತನಾಡಿದ ಅವರು, ನಗರದ ಎಲ್ಲ ದೇವಸ್ಥಾನಗಳನ್ನು ನಮ್ಮ ಪಕ್ಷದ ವಾರ್ಡ್‌ ಸದಸ್ಯರು,ಕಾರ‍್ಯಕರ್ತರು, ಭೂತ್‌ ಮಟ್ಟದ ಅಧ್ಯಕ್ಷರು ಸ್ವಚ್ಛಗೊಳಿಸುವ ಮೂಲಕ ಈ ಕಾರ್ಯಕ್ರಮ ಪ್ರಾರಂಭಿಸಲು ಸೂಚಿಸಿದರು. ದೇವಸ್ಥಾನಗಳಲ್ಲಿ ರಾಮನಾಮ ಜಪ, ರಾಮನಾಮ ಘೋಷಣೆ, ಅದರಲ್ಲೂ ವಿಶೇಷವಾಗಿ ಆಂಜನೇಯ ದೇವಸ್ಥಾನಗಳಲ್ಲಿ ಹೋಮಹವನಗಳಂತ ಧಾರ್ಮಿಕ ಕಾರ‍್ಯಕ್ರಮಗಳನ್ನು ಜರುಗಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಮಂತ್ರಾಕ್ಷತೆ ವಿತರಣಾ ಕಾರ‍್ಯಕ್ರಮದಲ್ಲಿ ಬಿಜೆಪಿ ಮುಖಂಡ ಲಕ್ಷ್ಮಣ ಗುರಂ, ಮಹಾಂತಗೌಡ ಪಾಟೀಲ, ವೆಂಕಟೇಶ ಪೋತಾ, ಮಹಾಂತಪ್ಪ ಚನ್ನಿ, ಅರವಿಂದ ಮಂಗಳೂರ, ಶ್ಯಾಮ ಕರವಾ, ಮಂಜುನಾಥ ಶೆಟ್ಟರ, ಸವಿತಾ ಆರಿ, ವಿಜಯ ಗಿರಡ್ಡಿ, ಸುಗೂರೇಶ ನಾಗಲೋಟಿ, ಚಂದ್ರಶೇಖರ ಏಕಬೋಟೆ, ಹನಮಂತ ತುಂಬದ, ಮಹಾಂತೇಶ ಕಂಪ್ಲಿ, ರಾಜೇಂದ್ರ ಆರಿ, ಬ್ರಾಹ್ಮಣ ಸಮಾಜದ ರತ್ನಾಕರ ದೇಶಪಾಂಡೆ, ಬಂಡು ಕಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.