ಶ್ರೀರಾಮಚಂದ್ರ ಹಿಂದು ಸಂಸ್ಕೃತಿಯ ಪ್ರತೀಕ: ಶಾಸಕ ಸಿದ್ದು ಸವದಿ

| Published : Jan 21 2024, 01:31 AM IST

ಶ್ರೀರಾಮಚಂದ್ರ ಹಿಂದು ಸಂಸ್ಕೃತಿಯ ಪ್ರತೀಕ: ಶಾಸಕ ಸಿದ್ದು ಸವದಿ
Share this Article
  • FB
  • TW
  • Linkdin
  • Email

ಸಾರಾಂಶ

ರಬಕವಿ-ಬನಹಟ್ಟಿ: ರಬಕವಿ-ಬನಹಟ್ಟಿ ತಾಲೂಕಿನ ವಿವಿಧ ಹಿಂದು ಸಂಘಟನೆಗಳು ಮಕ್ಕಳಿಗೆ ಶನಿವಾರ ಆಯೋಜಿಸಿದ್ದ ರಾಮ, ಸೀತಾ, ಲಕ್ಷ್ಮಣ ಮತ್ತು ಹನುಮಾನ್ ವೇಷಧಾರಿಗಳ ಸಮಾವೇಶ ನಡೆಯಿತು. ವೇದಿಕೆಯಲ್ಲಿ ಒಟ್ಟು ೧೫ ಶಾಲೆಗಳ ೫೧೦ ಮಕ್ಕಳು ವೇಷಧಾರಿಗಳಾಗಿ ಸಭಿಕರ ಮನಸೆಳೆದರು. ಶ್ರೀರಾಮ, ಸೀತಾಮಾತೆ, ಲಕ್ಷ್ಮಣ ಮತ್ತು ಹನುಮಂತ ಸೇರಿ ೧೧೬ ತಂಡಗಳು, ೩೬ ವಿದ್ಯಾರ್ಥಿನಿಯರು ಸೀತಾಮಾತೆ ಮತ್ತು ೧೦ ವಿದ್ಯಾರ್ಥಿಗಳು ಶ್ರೀರಾಮ ವೇಷಧಾರಿಗಳಾಗಿ ಮಿಂಚಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಶ್ರೀರಾಮಚಂದ್ರ ಹಿಂದು ಸಂಸ್ಕೃತಿಯ ಪ್ರತೀಕವಾಗಿದ್ದು, ತನ್ನ ಆದರ್ಶಯುತ ಮತ್ತು ಮೌಲ್ಯಯುತ ಜೀವನಕ್ರಮದಿಂದ ಇಂದಿಗೂ ಜನಮಾನಸದಲ್ಲಿ ಅನುಕರಣೀಯರಾಗಿದ್ದು, ಪೂಜ್ಯನೀಯ ಸ್ಥಾನ ಪಡೆದಿದ್ದಾರೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.

ಶನಿವಾರ ರಬಕವಿ-ಬನಹಟ್ಟಿ ತಾಲೂಕಿನ ವಿವಿಧ ಹಿಂದು ಸಂಘಟನೆಗಳು ಮಕ್ಕಳಿಗೆ ಆಯೋಜಿಸಿದ್ದ ರಾಮ, ಸೀತಾ, ಲಕ್ಷ್ಮಣ ಮತ್ತು ಹನುಮಾನ್ ವೇಷಧಾರಿಗಳ ಸಮಾವೇಶದಲ್ಲಿ ಮಾತನಾಡಿದರು.

ಸ್ಫರ್ಧೆಯ ವಿಜೇತರನ್ನು ಆಯ್ಕೆ ಮಾಡಿ ಮಾತನಾಡಿದ ಹಿರಿಯ ಸಾಹಿತಿ-ವಿಮರ್ಶಕ ಸಿದ್ಧರಾಜ ಪೂಜಾರಿ, ಒಳ್ಳೆಯ ವಿಚಾರಗಳು ಜಗತ್ತಿನ ಯಾವುದೇ ಭಾಗಗಳಿಂದ, ಯಾವುದೇ ಧರ್ಮಗಳಿಂದ ಬಂದರೂ ಅದನ್ನು ಧನಾತ್ಮಕವಾಗಿ ಸ್ವೀಕರಿಸಿ ಅಲ್ಲಿನ ಒಳ್ಳೆತನವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂಬ ಮಾತಿಗೆ ಶ್ರೀರಾಮಚಂದ್ರ ಜ್ವಲಂತ ನಿದರ್ಶನವಾಗಿದ್ದಾನೆಂದರು.

ವೇದಿಕೆಯಲ್ಲಿ ಒಟ್ಟು ೧೫ ಶಾಲೆಗಳ ೫೧೦ ಮಕ್ಕಳು ವೇಷಧಾರಿಗಳಾಗಿ ಸಭಿಕರ ಮನಸೆಳೆದರು. ಶ್ರೀರಾಮ, ಸೀತಾಮಾತೆ, ಲಕ್ಷ್ಮಣ ಮತ್ತು ಹನುಮಂತ ಸೇರಿ ೧೧೬ ತಂಡಗಳು, ೩೬ ವಿದ್ಯಾರ್ಥಿನಿಯರು ಸೀತಾಮಾತೆ ಮತ್ತು ೧೦ ವಿದ್ಯಾರ್ಥಿಗಳು ಶ್ರೀರಾಮ ವೇಷಧಾರಿಗಳಾಗಿ ಮಿಂಚಿದರು.

೧೦ ಜನ ನಿರ್ಣಾಯಕರು ಭಾಗವಹಿಸಿದ್ದರು. ವೇದಿಕೆಯಲ್ಲಿ ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು, ರಬಕವಿ ಶ್ರೀಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ದೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಂಘ ಪರಿವಾರದ ಪ್ರಮುಖರಾದ ಶಿವಾನಂದ ಗಾಯಕವಾಡ, ವಿರುಪಾಕ್ಷಯ್ಯ ಮಠದ, ಬಸಯ್ಯ ಹಿರೇಮಠ, ಕಿರಣಕುಮಾರ ದೇಸಾಯಿ, ಅಶೋಕ ರಾವಳ, ಶಂಕರ ಅಂಗಡಿ, ರಚ್ಚು ಶಿರೋಳ, ಪ್ರವೀಣ ಧಬಾಡಿ, ಹರೀಶ ನಾಜರೆ, ಡಾ.ಶ್ರೀನಾಥ ಖಮಿತ್ಕರ, ಡಾ.ಇಂದುಮತಿ ಯಂಡೊಳ್ಳಿ, ಶ್ರೀಶೈಲ ದಬಾಡಿ, ಸಿದ್ದನಗೌಡ ಪಾಟೀಲ, ಶ್ರೀಶೈಲ ಬೀಳಗಿ, ಈರಯ್ಯಾ ಫರಾಳಮಠ, ಚಿದಾನಂದ ಹೊರಟ್ಟಿ, ಶ್ರೀಶೈಲ ಯಾದವಾಡ, ಪವಿತ್ರಾ ತುಕ್ಕಣ್ಣವರ, ಗೌರಿ ಮಿಳ್ಳಿ, ವಿದ್ಯಾ ದಬಾಡಿ, ವೈಷ್ಣವಿ ಬಾಗೇವಾಡಿ, ಈರಣ್ಣಾ ಬಾಣಕಾರ, ಶಾಲೆಗಳ ಮುಖ್ಯಸ್ಥರು, ಸಿಬ್ಬಂದಿ, ಪಾಲಕರು ಪಾಲ್ಗೊಂಡಿದ್ದರು.

ಸಂಘಟಕ ಶಿವಾನಂದ ಗಾಯಕವಾಡ ಸ್ಪರ್ಧೆಯಲ್ಲಿ ಬಹುಸಂಖ್ಯೆಯಲ್ಲಿ ವೇಷಧಾರಿಗಳು ಪಾಲ್ಗೊಂಡಿದ್ದು, ಬಹುಮಾನ ವಿಜೇತ ಮೂವರು ಸೇರಿದಂತೆ ಭಾಗಿಯಾದ ಎಲ್ಲ ೧೧೬ ತಂಡಗಳಿಗೂ ಪ್ರಶಸ್ತಿಪತ್ರ ನೀಡಲಾಗುವುದು ಮತ್ತು ೧೫ ಶಾಲೆಗಳ ಮಕ್ಕಳಿಗೆ ಸಮಾಧಾನಾಕರ ಬಹುಮಾನ ನೀಡಲಾಗುವುದೆಂದು ತಿಳಿಸಿದರು.