ಸಾರಾಂಶ
ವಿಜಯಪುರ: ನಗರದ ಆರಾಧ್ಯದೈವ ಶ್ರೀ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ 1200 ದೀಪಗಳಲ್ಲಿ ಅರಳಿದ ಶ್ರೀರಾಮಚಂದ್ರ ರೂಪಕ ನೆರೆದ ಸಾವಿರಾರು ಶ್ರೀರಾಮ ಭಕ್ತರ ಕಣ್ಮನ ಸೆಳೆಯಿತು. ಬೆಳಗ್ಗೆ ಸಿದ್ದೇಶ್ವರ ದೇವಸ್ಥಾನದಲ್ಲಿ ಹೋಮ, ಹವನ ಮತ್ತು ವಿಶೇಷ ಪೂಜೆ ನೇರವೇರಿಸಿ ನಾಡಿಗೆ ಸುಖ, ಶಾಂತಿ, ಸಮೃದ್ಧಿ ಕರುಣಿಸಲೆಂದು ಪ್ರಾರ್ಥಿಸಲಾಯಿತು. ನಂತರ ಸಿಹಿ ವಿತರಿಸಿ, ಸಂಭ್ರಮಿಸಲಾಯಿತು. ಸಂಜೆ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕರಾದ ರಾಮನಗೌಡ ಪಾಟೀಲ ಯತ್ನಾಳ ಮತ್ತು ಸಿದ್ಧಸಿರಿ ಸೌಹಾರ್ದದ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವ್ ಅಣ್ಣಿಗೇರಿ ನೇತೃತ್ವದಲ್ಲಿ ನಡೆದ ವಿಶೇಷ ದೀಪೋತ್ಸವದಲ್ಲಿ, 1,200 ದೀಪಗಳಲ್ಲಿ ಅರಳಿದ ಶ್ರೀರಾಮಚಂದ್ರ ರೂಪಕ ನೆರೆದ ಸಾವಿರಾರು ಶ್ರೀರಾಮ ಭಕ್ತರ ಕಣ್ಮನಸೆಳೆಯಿತು. ನಂತರ ನಡೆದ ಆಕರ್ಷಕ ಮದ್ದು ಸುಡುವ ಕಾರ್ಯಕ್ರಮ ಉತ್ಸವದ ಮೆರಗು ಹೆಚ್ಚಿಸಿತು. ಮಹಾನಗರ ಪಾಲಿಕೆ ಹಾಲಿ, ಮಾಜಿ ಸದಸ್ಯರು, ಮುಖಂಡರುಗಳು, ಹಿತೈಷಿಗಳು ಅಭಿಮಾನಿಗಳು, ತಾಯಂದಿರು, ಸಿದ್ದೇಶ್ವರ ಸಂಸ್ಥೆ, ಸಿದ್ಧಸಿರಿ ಸೌಹಾರ್ದ ಸಹಕಾರಿಯ ಪದಾಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.