ಸಾರಾಂಶ
ಶ್ರೀರಾಮನ ಹಾಗೂ ಆಂಜನೇಯನ ಭಕ್ತಿಗೀತೆ, ಸಾಮೂಹಿಕ ಹನುಮಾನ್ ಚಾಲೀಸ್, ಶತನಾಮಾವಳಿ, ಆರತಿ ಸೇರಿದಂತೆ ನಾನಾ ಮಂತ್ರದ್ಘೋಷಗಳು ಶ್ರದ್ಧಾ-ಭಕ್ತಿಯಿಂದ ಜರುಗಿದವು. ಇನ್ನೂ ಮೆರವಣಿಗೆಯುದ್ದಕ್ಕೂ ಭಕ್ತರು ಪೂಜೆ ಸಲ್ಲಿಸಿ ಭಕ್ತಿ, ಭಾವ ಮೆರದರು.
ಕನಕಗಿರಿ:
ಶ್ರೀರಾಮನವಮಿ ಅಂಗವಾಗಿ ಪಟ್ಟಣದಲ್ಲಿ ಹನುಮ ಮಾಲಾಧಾರಿಗಳಿಂದ ಪ್ರಭು ಶ್ರೀರಾಮಚಂದ್ರನ ಭಾವಚಿತ್ರ ಮೆರವಣಿಗೆ ಭಾನುವಾರ ವೈಭವದಿಂದ ನಡೆಯಿತು.ಮಾಲಾಧಾರಿಗಳು ಬೆಳಗ್ಗೆ ಶ್ರೀರಾಮನ ಭಾವಚಿತ್ರಕ್ಕೆ ಪೂಜೆಸಲ್ಲಿಸಿದ್ದು, ಸಂಜೆ ಅಗಸೆ ಹನುಮಪ್ಪ ದೇವಸ್ಥಾನದಿಂದ ಶ್ರೀರಾಮನ ಬೃಹತ್ ಭಾವಚಿತ್ರವನ್ನು ನೂರಾರು ಹನುಮ ಮಾಲಾಧಾರಿಗಳು ರಾಜಬೀದಿಯಲ್ಲಿ ಮೆರವಣಿಗೆ ಮಾಡಿದರು. ಮೆರವಣಿಗೆಯುದ್ಧಕ್ಕೂ ಜೈ ಶ್ರೀರಾಮ್, ಜೈ ಹನುಮಾನ್ ಘೋಷಣೆಗಳು ಕೇಳಿ ಬಂದವು. ಶ್ರೀರಾಮನ ಹಾಗೂ ಆಂಜನೇಯನ ಭಕ್ತಿಗೀತೆ, ಸಾಮೂಹಿಕ ಹನುಮಾನ್ ಚಾಲೀಸ್, ಶತನಾಮಾವಳಿ, ಆರತಿ ಸೇರಿದಂತೆ ನಾನಾ ಮಂತ್ರದ್ಘೋಷಗಳು ಶ್ರದ್ಧಾ-ಭಕ್ತಿಯಿಂದ ಜರುಗಿದವು. ಇನ್ನೂ ಮೆರವಣಿಗೆಯುದ್ದಕ್ಕೂ ಭಕ್ತರು ಪೂಜೆ ಸಲ್ಲಿಸಿ ಭಕ್ತಿ, ಭಾವ ಮೆರದರು. ರಾಜಬೀದಿಯ ಮೂಲಕ ಸಾಗಿದ ಮೆರವಣಿಗೆ ಶ್ರೀಕನಕಾಚಲಪತಿ ದೇವಸ್ಥಾನ, ಹಳೇ ಪೊಲೀಸ್ ಠಾಣೆಯ ಮಾರ್ಗವಾಗಿ ಸರ್ಕಾರಿ ಆಸ್ಪತ್ರೆ ಬಳಿ ಇರುವ ಗಿಡ್ಡ ಆಂಜನೇಯಸ್ವಾಮಿ ದೇವಸ್ಥಾನದ ವರೆಗೆ ನಡೆಯಿತು. ಮಾಲಾಧಾರಿಗಳಾದ ವೆಂಕಟೇಶ, ವೆಂಕೋಬ ಪೂಜಾರ, ಹನುಮೇಶ ಡಿಶ್, ಅಯ್ಯನಗೌಡ, ಕಿರಣ, ಅಜಯ್, ನಾಗರಾಜ, ಮುರುಗಿ, ಚೇತನ ಬ್ಯಾಳಿ, ಮಂಜು ಗ್ಯಾಸ್, ಗಂಗಾಧರ ಯಲಬುರ್ಗಿ, ಮಂಜುನಾಥ ಬೊಕ್ಕಸದ, ವೆಂಕಟೇಶ ಬಂಡ್ಲಿ, ಮಾರುತಿ, ಸಂಪತ್, ಶ್ರೀನಿವಾಸ, ಉಮೇಶ, ವಿಜಯ, ಸಗರಪ್ಪ ಸೇರಿದಂದು ನೂರಾರು ಹನುಮ ಮಾಲಾಧಾರಿಗಳು ಇದ್ದರು.