ಸಾರಾಂಶ
ಪಟ್ಟಣದ ಶ್ರೀ ಕೆಂಚಮ್ಮ ದೇವಾಲಯದಲ್ಲಿ ನಡೆದ ಸುದ್ದಿಗೋಷ್ಠಿ
ಕನ್ನಡಪ್ರಭ ವಾರ್ತೆ, ಕಡೂರುಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ವಿಗ್ರಹ ಪ್ರತಿಷ್ಟಾಪನೆ ದಿನ ಜನವರಿ 22 ರಂದು ಕಡೂರು ಪಟ್ಟಣದ ಗ್ರಾಮ ದೇವತೆ ಶ್ರೀಕೆಂಚಮ್ಮನವರ ದೇವಾಲಯ ಆವರಣದಲ್ಲಿ ರಾಮತಾರಕ ಹೋಮ ನಡೆಯಲಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರು ಮತ್ತು ಪುರೋಹಿತ ಪರಿಷತ್ತಿನ ಕಡೂರು ತಾಲೂಕು ಅಧ್ಯಕ್ಷ ಆನಂದ್ ಭಾರಧ್ವಜ್ ಹೇಳಿದರು. ಪಟ್ಟಣದ ಶ್ರೀ ಕೆಂಚಮ್ಮ ದೇವಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ.22 ರ ಸೋಮವಾರ ಬೆಳಗ್ಗೆ ದೇವಾಲಯದಲ್ಲಿ ಗಣಪತಿಹೋಮ, ರಾಮತಾರಕ ಹೋಮಗಳು ನಡೆಯಲಿದ್ದು ಶ್ರೀರಾಮನ ಭಕ್ತರು ತಪ್ಪದೇ ಭಾಗವಹಿಸಿ ಹಬ್ಬದ ರೀತಿಯಲ್ಲಿ ಎಲ್ಲರೂ ಸೇರುವ ಮೂಲಕ ಸಂಭ್ರಮ ಆಚರಿಸೋಣ ಎಂದರು.
ಇಂತಹ ಪುಣ್ಯ ದಿನವನ್ನು ನಮ್ಮ ಜನ್ಮದಲ್ಲಿ ಕಣ್ಣಾರೇ ಕಾಣುತ್ತಿರುವ ನಾವುಗಳೇ ಭಾಗ್ಯವಂತರು. ಪ್ರತಿಯೊಬ್ಬರ ಮನೆಗಳಲ್ಲಿ ಹಬ್ಬದ ಸಂಭ್ರಮದಂತೆ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆಯಂದು ಆಚರಿಸುವುದು ನಮ್ಮ ಸೌಭಾಗ್ಯ. ಎಲ್ಲರೂ ಈ ಕಾರ್ಯದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ಅಖಿಲ ಕರ್ಣಾಟಕ ಬ್ರಾಹ್ಮಣ ಅರ್ಚಕರು ಮತ್ತು ಪುರೋಹಿತ ಪರಿಷತ್ತಿನ ಸದಸ್ಯ, ಶ್ರೀ ನ್ಯಾಯ ಗಣಪತಿ ದೇವಾಲಯ ಅರ್ಚಕ ರಾಮಚಂದ್ರಭಟ್, ಕೆಂಚಮ್ಮ ದೇವಾಲಯದ ಅರ್ಚಕ ವಿನಾಯಕ ಭಟ್, ಸಂತೋಷ್ ಭಾರ ಧ್ವಜ್ ಮತ್ತು ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಶ್ರೀನಿವಾಸ್ ಮತ್ತಿತರರು ಇದ್ದರು.
11ಕೆಕೆಡಿಯು1.ಕಡೂರು ಪಟ್ಟಣದ ಶ್ರೀ ಕೆಂಚಮ್ಮ ದೇವಾಲಯದಲ್ಲಿ ಅರ್ಚಕರು ಸುದ್ದಿಗೋಷ್ಠಿ ನಡೆಸಿದರು. ಆನಂದ್ ಭಾರಧ್ವಜ್, ವಿನಾಯಕ ಭಟ್, ಸಂತೋಷ್, ಶ್ರೀನಿವಾಸ್ ಇದ್ದರು.