ಶ್ರೀ ರೇಣುಕಾಚಾರ್ಯರ ಆಧ್ಯಾತ್ಮಿಕ ಚಿಂತನೆ ಇಂದಿಗೂ ಪ್ರಸ್ತುತ

| Published : Mar 24 2024, 01:30 AM IST

ಶ್ರೀ ರೇಣುಕಾಚಾರ್ಯರ ಆಧ್ಯಾತ್ಮಿಕ ಚಿಂತನೆ ಇಂದಿಗೂ ಪ್ರಸ್ತುತ
Share this Article
  • FB
  • TW
  • Linkdin
  • Email

ಸಾರಾಂಶ

ಜಗದ್ಗುರು ರೇಣುಕಾಚಾರ್ಯರು ಆದರ್ಶವಾದಿ. ಸಮಾಜಕ್ಕೆ ಅಹಿಂಸೆ, ಆಧ್ಯಾತ್ಮಿಕ ಚಿಂತನೆ ಹಾಗೂ ಭಕ್ತಿ, ಭಾವನೆಗಳನ್ನು ನೀಡುವ ಮೂಲಕ ಮಾದರಿ ಸಮಾಜ ನಿರ್ಮಾಣದ ಬುನಾದಿ ಹಾಕಿದವರು ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ದಾವಣಗೆರೆಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ

ಜಗದ್ಗುರು ರೇಣುಕಾಚಾರ್ಯರು ಆದರ್ಶವಾದಿ. ಸಮಾಜಕ್ಕೆ ಅಹಿಂಸೆ, ಆಧ್ಯಾತ್ಮಿಕ ಚಿಂತನೆ ಹಾಗೂ ಭಕ್ತಿ, ಭಾವನೆಗಳನ್ನು ನೀಡುವ ಮೂಲಕ ಮಾದರಿ ಸಮಾಜ ನಿರ್ಮಾಣದ ಬುನಾದಿ ಹಾಕಿದವರು ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೇಳಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾ ಜಂಗಮ ಸಮಾಜ ಸಹಯೋಗದಲ್ಲಿ ಹಮ್ಮಿಕೊಂಡ ಜಗದ್ಗುರು ರೇಣುಕಾಚಾರ್ಯ ಜಯಂತಿಯಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಜಗದ್ಗುರು ರೇಣುಕಾಚಾರ್ಯರು ವಿಶ್ವದಲ್ಲಿ ಶಾಂತಿಯನ್ನು ನೆಲೆಸಲು ಹಾಗೂ ವೀರಶೈವ ಧರ್ಮ ಒಂದು ಉತ್ತಮ ಹಾದಿಯಲ್ಲಿ ನಡೆಸುವುದರಲ್ಲಿ ಕಾರಣಿರಾಗಿದ್ದಾರೆ. ಎಲ್ಲರಿಗೂ ಸಮಾನ ಚಿಂತನೆಗಳನ್ನು ನೀಡಿ, ಉತ್ತಮ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಅವರ ಕಾಣಿಕೆ ಬಹಳ ಅತ್ಯುತ್ತಮವಾದುದು. ಇಂತಹ ಮಹಾನ್ ಪುರುಷರ ಜಯಂತಿಗಳನ್ನು ನಾವು ಸರಳವಾಗಿ ಮಾಡಿದ್ದೇವೆ ಹಾಗೂ ಅವರ ಮಾರ್ಗ ಅನುಸರಿಸಿದಾಗ ಸಮಾಜ ಸಮೃದ್ಧಿಯಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ ಭಾನು ಎಸ್. ಬಳ್ಳಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ನಿರ್ದೇಶಕ ಇಂದುಧರ್ ನಿಶಾನಿಮಠ, ರೈತ ಮುಖಂಡ ಬಲ್ಲೂರು ರವಿಕುಮಾರ, ಜಂಗಮ ಸಮಾಜದ ಮುಖಂಡರು ಸಿದ್ದಲಿಂಗ ಸ್ವಾಮಿ, ಡಿ.ಎಂ. ಜಯದೇವಪ್ಪ, ದಾಕ್ಷಾಯಣಮ್ಮ, ನಿಟ್ಟುವಳ್ಳಿ ಸುವರ್ಣಮ್ಮ, ಚಂದ್ರಮ್ಮ, ವಿನುತಾ ರವಿ, ಎಂ.ಆರ್. ರೇವಣಸಿದ್ದೇಶ, ರುದ್ರಮುನಿ ಸ್ವಾಮಿ, ಶ್ರೀಶೈಲ ಮಠದ ವೈದಿಕ ಪಾಠಶಾಲಾ ಮಕ್ಕಳು, ಇನ್ನಿತರರು ಉಪಸಿತರಿದ್ದರು.

- - - -23ಕೆಡಿವಿಜಿ33ಃ

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.