ಶ್ರೀ ಸೇವಾಲಾಲ್, ಮರಿಯಮ್ಮ ದೇಗುಲ ಉದ್ಘಾಟನೆ

| Published : Apr 28 2025, 11:49 PM IST

ಸಾರಾಂಶ

ಇಲ್ಲಿಗೆ ಸಮೀಪದ ಯಲವಟ್ಟಿ ಗ್ರಾಮದಲ್ಲಿ ೫೦ ವರ್ಷದ ಹಳೆಯ ಶ್ರೀ ಸೇವಾಲಾಲ್ ಮತ್ತು ಮರಿಯಮ್ಮ ದೇವಾಲಯವನ್ನು ಪುನರ್ ನಿರ್ಮಾಣ ಮಾಡಲಾಗಿದೆ. ಏ.೨೯ರಿಂದ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿ ದೇವಸ್ಥಾನ ಲೋಕಾರ್ಪಣೆ, ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ಕಾರ್ಯಕ್ರಮಗಳು ನಡೆಯಲಿವೆ ಎಂದು ಸೇವಾಲಾಲ್ ಮತ್ತು ಮರಿಯಮ್ಮ ದೇವಾಲಯ ಸಮಿತಿ ಗೌರವಾಧ್ಯಕ್ಷ ಅನಂತ್‌ ನಾಯ್ಕ್ ಹೇಳಿದ್ದಾರೆ.

- ಇಂದಿನಿಂದ 3 ದಿನಗಳ ಕಾರ್ಯಕ್ರಮ: ಗೌರವಾಧ್ಯಕ್ಷ ಅನಂತ್‌ ನಾಯ್ಕ್ ಮಾಹಿತಿ

- - -

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು ಇಲ್ಲಿಗೆ ಸಮೀಪದ ಯಲವಟ್ಟಿ ಗ್ರಾಮದಲ್ಲಿ ೫೦ ವರ್ಷದ ಹಳೆಯ ಶ್ರೀ ಸೇವಾಲಾಲ್ ಮತ್ತು ಮರಿಯಮ್ಮ ದೇವಾಲಯವನ್ನು ಪುನರ್ ನಿರ್ಮಾಣ ಮಾಡಲಾಗಿದೆ. ಏ.೨೯ರಿಂದ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿ ದೇವಸ್ಥಾನ ಲೋಕಾರ್ಪಣೆ, ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ಕಾರ್ಯಕ್ರಮಗಳು ನಡೆಯಲಿವೆ ಎಂದು ಸೇವಾಲಾಲ್ ಮತ್ತು ಮರಿಯಮ್ಮ ದೇವಾಲಯ ಸಮಿತಿ ಗೌರವಾಧ್ಯಕ್ಷ ಅನಂತ್‌ ನಾಯ್ಕ್ ಹೇಳಿದರು.

ಮಲೇಬೆನ್ನೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.೨೯ರಂದು ಬೆಳಗ್ಗೆ ಮೂರ್ತಿಗಳ ಭವ್ಯ ಮೆರವಣಿಗೆ, ನವಗ್ರಹ ಹೋಮ, ಮಹಿಳೆಯರಿಂದ ೧೦೧ ಕುಂಭಮೇಳ, ಗಣಪತಿ ಪೂಜೆ, ಮಹಾಸಂಕಲ್ಪ, ಸ್ಥಳ ಶುದ್ಧಿ, ಪಂಚಗವ್ಯ ಹೋಮ, ಮಂಗಳಾರತಿ, ಮೂರ್ತಿಗೆ ಅಧಿವಾಸ, ಧಾನ್ಯಾಧಿವಾಸ, ಮಂಡಲ ರಚನೆ, ವಾಸ್ತು ಹೋಮ ಜರುಗಲಿವೆ, ಏ.೩೦ರಂದು ಸೂರಗೊಂಡನಕೊಪ್ಪದ ಅರ್ಚಕರಾದ ಸೇವಾನಾಯ್ಕ ಮತ್ತು ಯೋಗಾನಂದ ಸ್ವಾಮೀಜಿ ಅವರಿಂದ ಪ್ರಾಣ ಪ್ರತಿಷ್ಟಾಪನೆ ಹಾಗೂ ಕಳಸಾರೋಹಣ ನಡೆಯಲಿದೆ ಎಂದರು.

ಮೇ ೧ರಂದು ಬಂಜಾರ ಸಂಸ್ಥಾನದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಸಿರಿಗೆರೆ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ, ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ, ನೊಳಂಬ ಪೀಠದ ಸಿದ್ದರಾಮೇಶ್ವರ ಸ್ವಾಮೀಜಿ, ಗವಿಸಿದ್ದೇಶ್ವರ ಪೀಠದ ಕುಮಾರ್ ಸ್ವಾಮೀಜಿ, ಸಾಲೂರು ಮಠದ ಶೈನಾಭಗತ್ ಸ್ವಾಮೀಜಿ ಸಾನಿಧ್ಯ ವಹಿಸಿ ಸಂದೇಶ ನೀಡುವರು ಎಂದರು.

ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್ ಕಾರ್ಯಕ್ರಮ ಉದ್ಘಾಟಿಸುವರು. ಸಮಿತಿ ಅಧ್ಯಕ್ಷ ಅಜ್ಜಾನಾಯ್ಕ್ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಬಂಜಾರ್ ನಿಗಮ ಅಧ್ಯಕ್ಷ ಜಯದೇವ್‌ ನಾಯ್ಕ ಭಾಗವಹಿಸುವರು ಎಂದರು.

ಸಮಿತಿ ಅಧ್ಯಕ್ಷ ಅಜ್ಜಾನಾಯ್ಕ್, ಉಪಾಧ್ಯಕ್ಷ ಕೃಷ್ಣಾನಾಯ್ಕ್, ಕಾರ್ಯದರ್ಶಿ ಶಿವರಾಜ್, ಖಜಾಂಚಿ ಬಿ.ಎಚ್. ಮಂಜಾನಾಯ್ಕ್, ಸದಸ್ಯ ಈರಾನಾಯ್ಕ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

- - -

-೨೮ಎಂಬಿಆರ್೧:

ಸುದ್ದಿಗೋಷ್ಠಿಯಲ್ಲಿ ಸೇವಾಲಾಲ್ ಮತ್ತು ಮರಿಯಮ್ಮ ದೇವಾಲಯ ಸಮಿತಿ ಗೌರವಾಧ್ಯಕ್ಷ ಅನಂತ್‌ ನಾಯ್ಕ್‌ ಮಾತನಾಡಿದರು.