ಸಾರಾಂಶ
ಪಾವಗಡ: ಪಟ್ಟಣಕ್ಕೆ ಶ್ರಾವಣ ಶನಿವಾರ ಹಿನ್ನೆಲೆ ಭಕ್ತರು ಆಗಮಿಸಿ ಶ್ರೀ ಶನೇಶ್ವರಸ್ವಾಮಿ ಹಾಗೂ ಜೇಷ್ಠ ಮಾತೆ ಹಾಗೂ ಶೀತಲಾಂಭದೇವಿ ದರ್ಶನ ಪಡೆದರು.
ಪಾವಗಡ: ಪಟ್ಟಣಕ್ಕೆ ಶ್ರಾವಣ ಶನಿವಾರ ಹಿನ್ನೆಲೆ ಭಕ್ತರು ಆಗಮಿಸಿ ಶ್ರೀ ಶನೇಶ್ವರಸ್ವಾಮಿ ಹಾಗೂ ಜೇಷ್ಠ ಮಾತೆ ಹಾಗೂ ಶೀತಲಾಂಭದೇವಿ ದರ್ಶನ ಪಡೆದರು.
ಶ್ರೀ ಶನೈಚ್ಚರಸ್ವಾಮಿ ದೇವಸ್ಥಾನಕ್ಕೆ ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಇತರೆ ರಾಜ್ಯದ ಗಮನ ಸೆಳೆದಿದ್ದು, ರಾಜ್ಯದ ಬಳ್ಳಾರಿ, ವಿಜಯನಗರ, ದಾವಣಗೆರೆ, ಹರಿಹರ, ಚಿತ್ರದುರ್ಗ, ಬೆಂಗಳೂರು, ತುಮಕೂರು, ಹಾಸನ, ಚಿಕ್ಕಮಗಳೂರು ಮತ್ತು ಆಂಧ್ರದ ಆನಂತಪುರ, ರಾಯದುರ್ಗ, ಕಲ್ಯಾಣದುರ್ಗ, ಪುಟಪರ್ತಿ ಮತ್ತು ಕಡೆಯಿಂದ ಭಕ್ತರು ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಚಿಕ್ಕನಾಯಕನಹಳ್ಳಿಯ ಸಿ.ಬಿ.ಸುರೇಶ್‌ಬಾಬು, ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ. ಜೆಡಿಎಸ್ ಘಟಕದ ಜಿಲ್ಲಾಧ್ಯಕ್ಷ ಆರ್.ಸಿ.ಅಂಜಿನಪ್ಪ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.ಬೆಳಿಗ್ಗೆ 5 ಗಂಟೆಗೆ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಗರದ ನಾಗರಕಟ್ಟೆಯಿಂದ ಹಾಗೂ ಚಳ್ಳಕೆರೆ ಮಾರ್ಗದ ರಸ್ತೆ ಪಕ್ಷದಲ್ಲಿ ನಿರ್ಮಿಸಿದ್ದ ಬ್ಯಾರಿಕೇಡ್‌ಗಳ ಮೂಲಕ ಸರದಿ ಸಾಲಿನಲ್ಲಿ ದೇವಸ್ಥಾನಕ್ಕೆ ತೆರಳಿ ಪೂಜಾ ಕಾರ್ಯಕ್ರಮ ನೆರೆವೇರಿಸಲಾಯಿತು. ರಾತ್ರಿ 8 ಗಂಟೆವರೆಗೂ ದೇವಸ್ಥಾನದಲ್ಲಿ ನಾನಾ ರೀತಿಯ ಪೂಜಾ ಕೆಂಕೈರ್ಯಗಳು ಜರಿಗಿದವು.
ಮುಖಂಡರಾದ ಬಲರಾಮರೆಡ್ಡಿ, ಅಕ್ಕಲಪ್ಪನಾಯ್ಡ್, ಪುರಸಭೆಯ ಮಾಜಿ ಸದಸ್ಯರಾದ ಮನುಮಹೇಶ್, ಜಿ.ಎ.ವೆಂಕಟೇಶ್ ಕಾರ್ಯಕರ್ತರಿದ್ದರು.