ಶ್ರೀ ಶಿವಯೋಗಿ ಸಿದ್ದರಾಮೇಶ್ವರರು ದೇವರ ಸ್ವರೂಪಿ: ಶಿವಾನಂದಸ್ವಾಮಿ

| Published : Jan 20 2025, 01:30 AM IST

ಶ್ರೀ ಶಿವಯೋಗಿ ಸಿದ್ದರಾಮೇಶ್ವರರು ದೇವರ ಸ್ವರೂಪಿ: ಶಿವಾನಂದಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ನಂಬಿಕೆ, ಶ್ರದ್ಧೆ, ಕಾಯಕ ಶ್ರೀ ಸಿದ್ದರಾಮೇಶ್ವರರ ಸತ್ಯವಾದ ವಿಷಯಗಳು. ಅವರ ಬರವಣಿಗೆ ಮತ್ತು ಮಾಡಿದ ಕೆಲಸದಿಂದ ಪ್ರಸಿದ್ಧರಾಗಿದ್ದಾರೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಿದ್ದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ನಂಬಿಕೆ, ಶ್ರದ್ಧೆ, ಕಾಯಕ ಶ್ರೀ ಸಿದ್ದರಾಮೇಶ್ವರರ ಸತ್ಯವಾದ ವಿಷಯಗಳು. ಅವರ ಬರವಣಿಗೆ ಮತ್ತು ಮಾಡಿದ ಕೆಲಸದಿಂದ ಪ್ರಸಿದ್ಧರಾಗಿದ್ದಾರೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ ಹೇಳಿದರು.ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತದಿಂದ ಭಾನುವಾರ ಆಯೋಜಿಸಿದ್ದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಿದ್ದರಾಮೇಶ್ವರರು ಶರಣರಾಗಿ, ಕಾಯಕ ಯೋಗಿಯಾಗಿ, ಕರ್ಮಯೋಗಿಯಾಗಿ ಮಾಡಿದ ಸೇವೆಯಿಂದ ದೇವರ ಸ್ವರೂಪ ಪಡೆದಿದ್ದಾರೆ ಇದು ಸಂತೋಷದ ವಿಷಯ ಎಂದು ಹೇಳಿದರು.

ಎಂದೂ ಅಳಿಸಲಾಗದಂತಹ ದಾಖಲೆಯನ್ನು ಇತಿಹಾಸದಲ್ಲಿ ಸಿದ್ದರಾಮೇಶ್ವರರು ನೀಡಿದ್ದಾರೆ. ಹೊರಗೆ ನೋಡಿದರೆ ಸಿದ್ದರಾಮೇಶ್ವರರು ಈಶ್ವರನ ಸ್ವರೂಪವಾಗಿ ಕಾಣುತ್ತಾರೆ. ನಾವು ಇಂದು ಡಾ. ಸೋಮಶೇಖರ ಸ್ವಾಮೀಜಿ ಯತಂಹ ಹಲವಾರು ಸ್ವಾಮೀಜಿಗಳಲ್ಲಿ ಕಾಯಕವನ್ನು ಕಾಣುತ್ತೇವೆ. ನಾವು ಪ್ರತಿನಿತ್ಯ ನಮ್ಮ ಸ್ವಾರ್ಥಕ್ಕಾಗಾಗಿ ನಮ್ಮ ಕಾಯಕ ಮಾಡುತ್ತೇವೆ. ಆದರೆ, ಸಿದ್ದರಾಮೇಶ್ವರರು 800 ವರ್ಷಗಳ ಹಿಂದೆಯೇ ತಮ್ಮ ಇಡೀ ಜೀವನವನ್ನು ಸಾರ್ವಜನಿಕರ ಜೀವನಕ್ಕೆ ಮುಡಿಪಾಗಿಟ್ಟವರು ಎಂದು ತಿಳಿಸಿದರು.

ಗ್ರೇಡ್- 2 ತಹಸೀಲ್ದಾರ್ ರಾಮರಾವ್ ದೇಸಾಯಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರೀ ಶಿವಯೋಗಿ ಸಿದ್ದರಾಮೇಶ್ವರ ರು 12ನೇ ಶತಮಾನದ ಪ್ರಸಿದ್ಧ ವಚನಕಾರರು. ಅವರು ಶ್ರಮದಾನಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದರು. ಅವರ ಗುಣಗಳನ್ನು ನಾವು ನಮ್ಮ ಜೀವನದಲ್ಲಿ ಆಳವಡಿಸಿಕೊಂಡು ಒಳ್ಳೆಯ ಕೆಲಸ ಮಾಡಬೇಕು ಎಂದು ಹೇಳಿದರು.ಚಿಂತಕ ಶಾಂತ್‌ರಾಜ್ ಪಾಟೀಲ್ ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ಕುರಿತು ಉಪನ್ಯಾಸ ನೀಡಿದರು. ಹಳೇಬೀಡಿನ ಪುಷ್ಪಗಿರಿ ಮಹಾಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಆರ್ಶೀವಚನ ನೀಡಿದರು. ಕಾರ್ಯಕ್ರಮದಲ್ಲಿ ಯು.ಪಿ. ಚಂದ್ರೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಸಿ. ರಮೇಶ್, ಯು.ಬಿ. ಶಾಂತಕುಮಾರ್, ಬೋವಿ ಸಮಾಜದ ಮುಖಂಡ ಕೊಲ್ಲ ಬೋವಿ, ದಾಸಬೋವಿ ಉಪಸ್ಥಿತರಿದ್ದರು. 19 ಕೆಸಿಕೆಎಂ 5ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ರಾಮರಾವ್‌ ದೇಸಾಯಿ ಅವರು ಉದ್ಘಾಟಿಸಿದರು. ಶಿವಾನಂದಸ್ವಾಮಿ, ಡಾ. ಸಿ. ರಮೇಶ್‌ ಇದ್ದರು.