ಕಡೂರು: ರಾಜ್ಯದ ಕಡೆಯ ಜಾತ್ರೆ ಎಂದು ಕರೆಯುವ ಪಟ್ಟಣದ ಶ್ರೀ ವೀರಭದ್ರೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಸೋಮವಾರ ಅದ್ಧೂರಿಯಾಗಿ ನೆರವೇರಿತು.
ಕಡೂರು: ರಾಜ್ಯದ ಕಡೆಯ ಜಾತ್ರೆ ಎಂದು ಕರೆಯುವ ಪಟ್ಟಣದ ಶ್ರೀ ವೀರಭದ್ರೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಸೋಮವಾರ ಅದ್ಧೂರಿಯಾಗಿ ನೆರವೇರಿತು.
ಕಳೆದ ಮಂಗಳವಾರ ಆರಂಭಗೊಂಡಿದ್ದ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ವರಪೂಜೆ, ಕೆಂಡಾರ್ಚನೆ, ಧಾರೆ ಮೂಹೂರ್ತದ ಕಾರ್ಯ ಜರುಗಿದವು . ಸೋಮವಾರ ಬೆಳಿಗ್ಗೆ ಶ್ರೀವೀರಭದ್ರ ಸ್ವಾಮಿ ಜೊತೆಗೆ ಶ್ರೀ ಕೆಂಚಾಂಬ, ಶ್ರೀಬನಶಂಕರಿ, ಶ್ರೀ ಸ್ವರ್ಣಾಂಬ,ಚೌಡ್ಲಾಪುರದ ಕರಿಯಮ್ಮ ದೇವರ ಮೆರವಣಿಗೆ ರಾಝಬೀದಿಗಳಲ್ಲಿ ನಡೆಯಿತು. ಮಧ್ಯಾಹ್ನ 1.30ಕ್ಕೆ ಶ್ರೀಸ್ವಾಮಿಯ ಬಾವುಟದ ಹರಾಜು ನಡೆದು ಕಡೂರು ಪಟ್ಟಣದ ಬೀರಪ್ಪನವರ ಕುಟುಂಬದ ಶಂಕರ್ (ಚಿಕ್ಕನಾಯಕನಹಳ್ಳಿ) ಅವರು ₹3.10 ಲಕ್ಷ ಕ್ಕೆ ತಮ್ಮದಾಗಿಸಿಕೊಂಡರು.ಆನಂತರ ವಿಶೇಷ ಆಹ್ವಾನಿತರಿಗೆ ಸನ್ಮಾನ ನಡೆಯಿತು. ರಥಕ್ಕೆ ಬಲಿಪೂಜೆ ನಡೆದು ಅಂಬು ಹೊಡೆದು 2.15 ರಿಂದ 3 ಗಂಟೆವರೆಗಿನ ತುಲಾ ಲಗ್ನದಲ್ಲಿ ಬ್ರಹ್ಮ ರಥವನ್ನು ಸಾವಿರಾರು ಭಕ್ತರು ಜಯಘೋಷದೊಂದಿಗೆ ಎಳೆದು ಪುನೀತರಾದರು.
ಜಾತ್ರೆಯಲ್ಲಿ ಪ್ರಧಾನ ಗುರುಗಳಾದ ಎಚ್.ಎಂ.ಲೋಕೇಶ್, ಶಾಸಕ ಕೆ.ಎಸ್. ಆನಂದ್, ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಹನ್ನೆರಡು ಹರಿವಾಣದ ಗುಡಿಗೌಡರಾದ ಭರತ್ ಕೆಂಪರಾಜು, ಶರತ್ ಕೃಷ್ಣ ಮೂರ್ತಿ, ಈರಳ್ಳಿ ರಮೇಶ್, ತೋಟದ ಮನೆ ಮೋಹನ್, ನಲ್ಲೂರಿ ಸುರೇಶ್, ಕೆ.ಎಂ.ಸೋಮಶೇಖರ್, ಅರ್ಚಕರಾದ ವಿಶ್ವನಾಥ್,ವೀರೇಶ್ ಸೇರಿದಂತೆ ಮತ್ತಿತರರು ಇದ್ದರು.22ಕೆಕೆಡಿಯು1
.ಸೋಮವಾರ ಕಡೂರು ಪಟ್ಟಣದ ಶ್ರೀವೀರಭದ್ರೇಶ್ವರ ಸ್ವಾಮಿಯವರ ರಥೋತ್ಸವವು ಅದ್ದೂರಿಯಾಗಿ ಜರುಗಿತು.