ಅರಣ್ಯ ಇಲಾಖೆಯ 2 ಕೋಟಿ ರು. ಅನುದಾನದಲ್ಲಿ ನೀಲಾವರ ಗ್ರಾಮದಲ್ಲಿ ಉದ್ಘಾಟನೆಗೊಂಡಿರುವ ಪದ್ಮವಿಭೂಷಣ ಶ್ರೀ ವಿಶ್ವೇಶ ತೀರ್ಥ ಸ್ಮೃತಿವನವು ಗುರುವಾರ ಅಧಿಕೃತವಾಗಿ ಇಲಾಖೆಯಿಂದ ಶ್ರೀ ಪೇಜಾವರ ಮಠಕ್ಕೆ ಹಸ್ತಾಂತರಗೊಂಡಿತು.
ಉಡುಪಿ: ಅರಣ್ಯ ಇಲಾಖೆಯ 2 ಕೋಟಿ ರು. ಅನುದಾನದಲ್ಲಿ ನೀಲಾವರ ಗ್ರಾಮದಲ್ಲಿ ಉದ್ಘಾಟನೆಗೊಂಡಿರುವ ಪದ್ಮವಿಭೂಷಣ ಶ್ರೀ ವಿಶ್ವೇಶ ತೀರ್ಥ ಸ್ಮೃತಿವನವು ಗುರುವಾರ ಅಧಿಕೃತವಾಗಿ ಇಲಾಖೆಯಿಂದ ಶ್ರೀ ಪೇಜಾವರ ಮಠಕ್ಕೆ ಹಸ್ತಾಂತರಗೊಂಡಿತು.
ಬಿ. ಎಸ್. ಯಡ್ಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬಜೆಟ್‌ನಲ್ಲಿ ಈ ಸ್ಮೃತಿವನ ನಿರ್ಮಾಣವನ್ನು ಘೋಷಿಸಿ 2 ಕೋಟಿ ರು. ಅನುದಾನ ನೀಡಿದ್ದರು. ಉಡುಪಿ ನಿರ್ಮಿತಿ ಕೇಂದ್ರ ನಿರ್ಮಾಣ ಕಾಮಗಾರಿ ನಡೆಸಿತ್ತು. ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬಗೊಂಡಿದ್ದ ಕಾಮಗಾರಿಯು ಮುಗಿದು, ಕಳೆದ ಮೇ ತಿಂಗಳಲ್ಲಿ ಅರಣ್ಯ ಸಚಿವರಾಗಿದ್ದ ಈಶ್ವರ ಖಂಡ್ರೆ ಅವರು ಈ ಸ್ಮೃತಿವನವನ್ನು ಉದ್ಘಾಟಿಸಿದ್ದರು.ಇದೀಗ ಅರಣ್ಯ ಇಲಾಖೆಯು ಗುರುವಾರದಂದು ಸ್ಮೃತಿವನವನ್ನು, ದಾಖಲಾತಿ ಸಹಿ ಪ್ರಕ್ರಿಯೆ ಪೂರ್ಣಗೊಳಿಸಿ ಶ್ರೀ ಪೇಜಾವರ ಮಠಕ್ಕೆ ಹಸ್ತಾಂತರಿಸಿದೆ. ಉಡುಪಿ ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ ಮತ್ತು ಮಠದ ಸಿಇಒ ಸುಬ್ರಹ್ಮಣ್ಯ ಭಟ್ ಕಡತಗಳಿಗೆ ಸಹಿ ಹಾಕಿದರು. ಮಠದ ಪಿಆರ್‌ಒ ವಾಸುದೇವ ಭಟ್ ಪೆರಂಪಳ್ಳಿ ಮತ್ತು ನಿರ್ಮಿತಿ ಕೇಂದ್ರದಿಂದ ಸ್ಮೃತಿವನ ನಿರ್ಮಾಣ ಉಸ್ತುವಾರಿ ಪವನ್ ಪೆರುಮುಂಡ ಉಪಸ್ಥಿತರಿದ್ದರು.