ಸಾರಾಂಶ
ಆದಿಶಕ್ತಿ ಮೂರ್ತಿ ಅಲಂಕರರವನ್ನು ಚಿತ್ರಗಾರ ಸುಮಿತ್ರಮ್ಮ ಪರಶುರಾಮಪ್ಪ ಕುಟುಂಬದವರಿಂದ ನೆರವೇರಿಸಲಾಗಿದೆ.
ಕಂಪ್ಲಿ: ಪಟ್ಟಣದ ಸಂಗಾತ್ರಯ ಸಂಸ್ಕೃತ ಪಾಠ ಶಾಲೆಯಲ್ಲಿ ಶ್ರೀದೇವಿ ಪುರಾಣ ಮಹೋತ್ಸವ ಸಮಿತಿಯಿಂದ 15ನೇ ವರ್ಷದ ಶ್ರೀದೇವಿ ಲೀಲಾಮೃತ ಮಹಾತ್ಮ ಪ್ರವಚನ ಆರಂಭಗೊಂಡಿದೆ.
ಬುಕ್ಕಸಾಗರದ ಕರಿಸಿದ್ದೇಶ್ವರ ವಿಶ್ವಾರಾಧ್ಯ ಶ್ರೀಗಳು ಪುರಾಣ ಪ್ರವಚನಕ್ಕೆ ಚಾಲನೆ ನೀಡಿದರು.ಪ್ರವಚನವನ್ನು ಬಳೂಟಗಿಯ ಶಿವಕುಮಾರಸ್ವಾಮಿ, ವಾಚನವನ್ನು ಸೋಮನಳಾದ ಶರಣಬಸವಕುಮಾರಸ್ವಾಮಿ, ತಬಲಾವಾದನವನ್ನು ಗದುಗಿನ ಪಂಚಾಕ್ಷರಿ ಹೂಗಾರ್ ನಡೆಸಿದರು. ಆದಿಶಕ್ತಿ ಮೂರ್ತಿ ಅಲಂಕರರವನ್ನು ಚಿತ್ರಗಾರ ಸುಮಿತ್ರಮ್ಮ ಪರಶುರಾಮಪ್ಪ ಕುಟುಂಬದವರಿಂದ ನೆರವೇರಿಸಲಾಗಿದೆ.
ಈ ಸಂದರ್ಭದಲ್ಲಿ ಶ್ರೀದೇವಿ ಪುರಾಣ ಮಹೋತ್ಸವದ ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಎಸ್.ಎಂ. ಚನ್ನಯ್ಯಸ್ವಾಮಿ, ಗೌರವಾಧ್ಯಕ್ಷ ಎಸ್.ಎಂ.ಶಶಿಧರ್ ಶಾಸ್ತ್ರಿ, ಉಪಾಧ್ಯಕ್ಷ ವಾಲಿ ಕೊಟ್ರಪ್ಪ, ಸಂಗಾತ್ರಯ ಸಂಸ್ಕೃತ ಪಾಠ ಶಾಲೆಯ ಪ್ರಚಾರ್ಯರಾದ ಘನಮಠದಯ್ಯ ಹಿರೇಮಠ, ಮಂಡಳಿಯ ಪ್ರಮುಖರಾದ ಕೆ.ಸಣ್ಣ ಗವಿಸಿದ್ದಪ್ಪ, ಕೆ.ಎಂ.ಸುಧಾಕರ ಸ್ವಾಮಿ, ಬಾಳೆಕಾಯಿ ಚೆನ್ನಬಸಪ್ಪ, ಎಸ್.ಡಿ.ಬಸವರಾಜ್, ಅಮರೇಶ್, ದಾನ ಶೆಟ್ಟಿ ಶಿವನಾಗಪ್ಪ, ಎಸ್.ವೀರಭದ್ರಯ್ಯಸ್ವಾಮಿ, ಉಳ್ಳಾಗಡ್ಡಿ ಮಲ್ಲಯ್ಯ, ಎಚ್.ನಾಗರಾಜ್, ಡಾ. ವೆಂಕಟೇಶ್ ಸಿ.ಭರಮಕ್ಕನವರ್, ಚೌಕಿನ ಶಂಕರ್, ಪುಟ್ಟಿ ಬಸವರಾಜ್, ಗೌಳೆಶೇಖರಪ್ಪ, ಎಚ್.ಎಂ. ಕುಮಾರಸ್ವಾಮಿ, ಶೇಖಪ್ಪ ಸಾಮಿಲ್ ಸೇರಿ ಸರ್ವ ಸಮುದಾಯಗಳ ಸಭಕ್ತರು ಪಾಲ್ಗೊಂಡಿದ್ದರು.