ಸಾರಾಂಶ
ಗದಗ: ನಗರದ ಅಡವೀಂದ್ರ ಸ್ವಾಮಿ ಮಠದಲ್ಲಿ ದಸರಾ ಮಹೋತ್ಸವ, ಶ್ರೀದೇವಿ ಪುರಾಣ ಪ್ರವಚನ ಹಾಗೂ ಅನ್ನಪೂರ್ಣೆಶ್ವರಿ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಅ. 15ರಿಂದ 25ರ ವರೆಗೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ ಎಂದು ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ ಬಂಡಿ ಹೇಳಿದರು.ನಗರದ ಶ್ರೀಮಠದಲ್ಲಿ ಭಾನುವಾರ ನಡೆದ ಜಾತ್ರಾ ಮಹೋತ್ಸವ ಹಾಗೂ ಸದ್ಭಕ್ತರ ಸಭೆಯಲ್ಲಿ ಅವರು ಮಾತನಾಡಿ, ಈ ವರ್ಷವೂ ಸಹ 43ನೇ ವರ್ಷದ ಶ್ರೀದೇವಿ ಪುರಾಣ ಪ್ರವಚನ, 9ನೇ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗ ಹಾಗೂ ಸದ್ಭಕ್ತರ ಸಹಕಾರದೊಂದಿಗೆ ನಡೆಯಲಿದೆ ಎಂದರು.
ಅ.15ರಂದು ಬೆಳಗ್ಗೆ 9ಕ್ಕೆ ಧರ್ಮ ಧ್ವಜಾರೋಹಣ, ಸಂಜೆ 6.30ಕ್ಕೆ ಘಟಸ್ಥಾಪನೆ ಹಾಗೂ ಶ್ರೀದೇವಿ ಪುರಾಣ ಪ್ರಾರಂಭೋತ್ಸವ ನಡೆಯಲಿದೆ. ಅ. 17ರಂದು ಸಂಜೆ 6.30ಕ್ಕೆ ಶ್ರೀದೇವಿಗೆ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ.ಅ. 20ರಂದು ಸಂಜೆ 6.30ಕ್ಕೆ ಶ್ರೀದೇವಿಗೆ ಹಾಗೂ ಮುತ್ತೈದೆಯರಿಗೆ ಅರಿಷಿಣ ಕುಂಕುಮ ಬಳೆ ಸೇವೆ, ಅ.22ರಂದು ಬೆಳಗ್ಗೆ 10.30 ಗಂಟೆಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ, ಸಂಜೆ 6.30 ಗಂಟೆಗೆ ದುರ್ಗಾಷ್ಟಮಿ, ಅ.23ರಂದು ಸಂಜೆ 6.30ಕ್ಕೆ ಆಯುಧ ಪೂಜೆ, ಕುಮಾರಿ ಪೂಜೆ ಹಾಗೂ ಶ್ರೀದೇವಿ ಪುರಾಣ ಮಂಗಲಗೊಳ್ಳುವದು.
ಅ.24 ರಂದು ಮಂಗಳವಾರ ಬೆಳಿಗ್ಗೆ 9.30 ಕ್ಕೆ ತೇರಿನ ಕಳಸ ಆಗಮನ, ಕಳಸಾರೋಹಣ, ಬೆಳಿಗ್ಗೆ 11.ಕ್ಕೆ ಬನ್ನಿ ಮುಡಿಯುವ ಕಾರ್ಯಕ್ರಮ. ಅ. 25 ರಂದು ಬುಧವಾರ ಬೆಳಿಗ್ಗೆ 7 ಕ್ಕೆ ಕುಂಭೋತ್ಸವ, 10.30 ಕ್ಕೆ ಅನ್ನಪೂರ್ಣೆಶ್ವರಿ ದೇವಿಗೆ ಕುಂಭಾಭಿಷೇಕ, ಸಂಜೆ 5 ಕ್ಕೆ ಮಹಾರಥೋತ್ಸವ ಜರಗುವುದು. ಅ.26 ರಂದು ಗುರುವಾರ ಸಂಜೆ 6 ಕ್ಕೆ ಕಡುಬಿನ ಕಾಳಗ ನಡೆಯಲಿದೆ ಎಂದು ತಿಳಿಸಿದರು.ಈ ವೇಳೆ ಜಾತ್ರಾ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಬಸವರಾಜ ಪಲ್ಲೇದ, ಪ್ರಧಾನ ಕಾರ್ಯದರ್ಶಿ ಶಿವಪುತ್ರಪ್ಪ ಸಜ್ಜನ, ಸಹ ಕಾರ್ಯದರ್ಶಿ ಸಿದ್ಧಣ್ಣ ಜವಳಿ, ಕೋಶಾಧ್ಯಕ್ಷ ಯು.ಆರ್.ಭೂಸನೂರಮಠ, ಮಹಿಳಾ ಸಮಿತಿಯ ಅಧ್ಯಕ್ಷೆ ಪ್ರಮೀಳಾದೇವಿ ಬಳಿಗಾರ, ಪ್ರಧಾನ ಕಾರ್ಯದರ್ಶಿ ಕಮಲಾಕ್ಷಿ ಬೆಳ್ಳಿಕೊಪ್ಪ, ಸಹ ಕಾರ್ಯದರ್ಶಿ ವಿಜಯಲಕ್ಷ್ಮೀ ಹೊಸಳ್ಳಿಮಠ, ಕೋಶಾಧ್ಯಕ್ಷೆ ಸುವರ್ಣಾ ಮದರಿಮಠ ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))