ಮಹಾವೀರ ಪಾಂಡಿಗೆ ಶ್ರೀಧರ ಪಾಂಡಿ ಸಂಸ್ಮರಣಾ ಪ್ರಶಸ್ತಿ

| Published : Nov 26 2024, 12:45 AM IST

ಸಾರಾಂಶ

ಮೂಡಬಿದಿರೆಯ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ, ಶ್ರೀಧರ ಪಾಂಡಿಯವರ ಕಲಾಜೀವನದ ಆದರ್ಶಗಳನ್ನು ನೆನಪಿಸಿ ಆಶೀರ್ವಚನ ನೀಡಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ತನ್ನ ಶೈಕ್ಷಣಿಕ ಹಂತದಿಂದ ಯಕ್ಷಗಾನ ಕಲೆಯ ಅಪಾರ ಆಸಕ್ತಿ ಹೊಂದಿ ಅಗ್ರಮಾನ್ಯ ಕಲಾವಿದರಿಂದ ನಾಟ್ಯಭ್ಯಾಸಗೈದು ವೇಷಧಾರಿಯಾಗಿ ಮೆರೆದು ಜೊತೆಗೆ ಉತ್ತಮ ಪ್ರಸಂಗಕರ್ತರಾದ ಜೈನ ಕವಿ ಸಾಣೂರು ಶ್ರೀಧರ ಪಾಂಡಿಯವರ ಹದಿಮೂರನೇ ‘ಸಾವಿರದ ನೆನಪು’ ಸಮಾರಂಭದಲ್ಲಿ ಯಕ್ಷಗಾನದ ಹಿರಿಯ ಕಲಾವಿದ ನಾಟ್ಯ ಗುರು ಕಾಂತಾವರ ಮಹಾವೀರ ಪಾಂಡಿಯವರಿಗೆ ಶ್ರೀಧರ ಪಾಂಡಿ ಸಂಸ್ಮರಣಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಮೂಡಬಿದಿರೆಯ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ, ಶ್ರೀಧರ ಪಾಂಡಿಯವರ ಕಲಾಜೀವನದ ಆದರ್ಶಗಳನ್ನು ನೆನಪಿಸಿ ಆಶೀರ್ವಚನ ನೀಡಿದರು.ಯಕ್ಷಗಾನ ವಿದ್ವಾಂಸ ರಾಘವ ನಂಬಿಯಾರ್ ಅದ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಚಾರ್ಯರಾದ ಕೆ.ಗುಣಪಾಲ ಕಡಂಬ, ಇರ್ವತ್ತೂರು ಉದಯ ಕುಮಾರ್ ಜೈನ್, ಮದ್ರಬೆಟ್ಟು ವಸಂತ ಅಧಿಕಾರಿ, ಜಗದೀಶ ಅಧಿಕಾರಿ, ಪತ್ನಿ ವಿಜಯ ಶ್ರೀಧರ ಪಾಂಡಿ, ಪುತ್ರಿ ಶ್ರೀಶಾ, ಪುತ್ರ ಶ್ರೀಕಾಂತ್ ಕುಮಾರ್ ಉಪಸ್ಥಿತರಿದ್ದರು.ವಾಗ್ಮಿ ಮುನಿರಾಜ ರೆಂಜಾಳ ಕಾರ್ಯಕ್ರಮ ನಿರ್ವಹಿಸಿದರು. ಮೂಡಬಿದಿರೆಯ ಪ್ರಾಂಶುಪಾಲ ಪ್ರಭಾತ್ ಬಲ್ನಾಡ್ ವಂದಿಸಿದರು.ನಂತರ ಪ್ರಸಿದ್ಧ ಕಲಾವಿದರಿಂದ ಗಾನ ವೈಭವ, ಬೀಷ್ಮ ವಿಜಯ ತಾಳಮದ್ದಳೆ ಜರುಗಿತು.