ಮಾ.1 ರಿಂದ 6 ವರೆಗೆ ಮಂತ್ರಾಲಯದಲ್ಲಿ ಶ್ರೀಗುರು ವೈಭವೋತ್ಸವ

| Published : Feb 26 2025, 01:04 AM IST

ಸಾರಾಂಶ

Sriguru Vaibhavotsava at Mantralaya from March 1 to 6

-ರಾಯರ 404ನೇ ಪಟ್ಟಾಭಿಷೇಕ ಮಹೋತ್ಸವ, 430 ನೇ ವರ್ಧಂತಿ ಉತ್ಸವ

-----

ಕನ್ನಡಪ್ರಭ ವಾರ್ತೆ ರಾಯಚೂರು

ರಾಯರ 404ನೇ ಪಟ್ಟಾಭಿಷೇಕ ಮಹೋತ್ಸವ ಹಾಗೂ 430ನೇ ವರ್ಧಂತಿ ಉತ್ಸವಗಳನ್ನೊಳಗೊಂಡ ಶ್ರೀರಾಘವೇಂದ್ರ ಗುರು ವೈಭವೋತ್ಸವ ಸಮಾರಂಭ ಬರುವ ಮಾ.1ರಿಂದ 6ವರೆಗೆ ಶ್ರೀಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಯೋಜನೆ ಮಾಡಲಾಗಿದೆ.

ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಸಾನಿಧ್ಯದಲ್ಲಿ ವೇದಿಕೆ ಸಮಾರಂಭದಲ್ಲಿ ಧಾರ್ಮಿಕ ಗ್ರಂಥಗಳ ಲೋಕಾರ್ಪಣೆ, ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರದಾನ, ಸನ್ಮಾನ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತಿದೆ.

ಮಾ.1 ರಂದು ರಾಯರ 404 ನೇ ಪಟ್ಟಾಭಿಷೇಕ ಮಹೋತ್ಸವ ಹಿನ್ನೆಲೆ ಬೆಳಗ್ಗೆ 9ಕ್ಕೆ ಶ್ರೀಮಠದ ಉಜ್ಜಲ್ ಸೇವಾ ಮಂಟಪದಲ್ಲಿ ರಾಯರ ಪಾದುಕಾ ಪಟ್ಟಾಭಿಷೇಕ, ಮಠದ ಪ್ರಾಕಾರದಲ್ಲಿ 10ಕ್ಕೆ ನಿಗದಿಪಡಿಸಿದ ಜ್ಞಾನಯಜ್ಞ ಕಾರ್ಯಕ್ರಮದಲ್ಲಿ ಬೆಂಗಳೂರಿನ ಡಾ.ಗುರುಮೂರ್ತಿ ಆಚಾರ್ಯ ರಿಂದ ಪ್ರವಚನ, ಸಂಜೆ 5:30 ಕ್ಕೆ ಶ್ರೀಮಠ ಮುಂಭಾಗದ ಶ್ರೀಯೋಗೀಂದ್ರ ಮಂಟಪದಲ್ಲಿ ಚೆನ್ನೈ ನ ವಿದ್ವಾನ್ ರಿತ್ವೀಕ್ ರಾವ್ ವಡ್ಡಿ ಅವರಿಂದ ಕರ್ನಾಟಕ ಸಂಗೀತದ ಗಾಯನ, ನಂತರ ಹೈದರಾಬಾದ್ ನ ಕಂದುಲ ಕೂಚಿಪುಡಿ ನೃತ್ಯಾಲಯದ ತಂಡದಿಂದ ಕೂಚಿಪುಡಿ ನೃತ್ಯ ಪ್ರದರ್ಶನ ನಡೆಯಲಿದೆ.

ಮಾ.2ರ ಜ್ಞಾನಯಜ್ಞದಲ್ಲಿ ಹುಬ್ಬಳ್ಳಿಯ ವಿದ್ವಾನ್ ನರಹರಿ ಜಿ.ವಾಲ್ವೇಕರ್ ರಿಂದ ಪ್ರವಚನ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿದ್ವಾನ್ ಅದಿತಿ ನಾರಾಯಣ್ ರಿಂದ ಕರ್ನಾಟಕ ಸಂಗೀತದ, ಬೆಂಗಳೂರಿನ ವಿದ್ವಾನ್ ಕಡಪ ಹನುಮೇಶಾಚಾರ್ಯ ರಿಂದ ವೇಣು ವಾದನ ಕಾರ್ಯಕ್ರಮಗಳು ಜರುಗಲಿವೆ.

ಮಾ.3 ರ ಜ್ಞಾನಯಜ್ಞದಲ್ಲಿ ಬೆಂಗಳೂರಿನ ಡಾ.ಮಾಳಗಿ ಆನಂದ ತೀರ್ಥ ಆಚಾರ್ಯ ರಿಂದ ಪ್ರವಚ, ಸಂಜೆ ಸಾಂಸ್ಕೃತಿಕ ಸಮಾರಂಭದಲ್ಲಿ ಬೆಂಗಳೂರಿನ ವಿದುಷಿ ಕು.ಅನ್ವಿತಾ ಪ್ರಿತಾ ವಿ.ಎಸ್ ಅವರಿಂದ ಭರತನಾಟ್ಯ ಪ್ರದರ್ಶನ ನಂತರ ಬೆಂಗಳೂರಿನ ಮಾಂತ್ರಿಕ ಪ್ರಹ್ಲಾದ ಆಚಾರ್ಯ ಅವರು ಮ್ಯಾಜಿಕ್ ಮತ್ತು ನೆರಳಿನಾಟ ಪ್ರದರ್ಶನವನ್ನು ನೀಡಲಿದ್ದಾರೆ.

ಮಾ.4 ರ ಜ್ಞಾನಯಜ್ಞದಲ್ಲಿ ಬೆಂಗಳೂರಿನ ವಿದ್ವಾನ್ ಬಿ.ಸುಧೀಂದ್ರ ಕುಮಾರ್ ಅವರಿಂದ ಪ್ರವಚ, ಸಂಜೆ ಸಾಂಸ್ಕೃತಿಕ ಸಮಾರಂಭದಲ್ಲಿ ಪುಣೆ ಪಂಡಿತ್ ರಘುನಂದನ್ ಪಾನಿಸ್ಕಾರ್ ಅವರಿಂದ ಹಿಂದೂಸ್ತಾನಿ ಗಾಯನ, ಬಳಿಕ ಬೆಂಗಳೂರಿನ ಬೃಂದಾವನ ಕಲಾ ನಿಕೇತನ ತಂಡದಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ.

ಮಾ.5 ರಂದು ಬೆಳಗ್ಗೆ 8 ಕ್ಕೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ)ಯಿಂದ ಬರಲಿರುವ ಶ್ರೀನಿವಾಸ ದೇವರ ಶೇಷ ವಸ್ತ್ರವನ್ನು ರಾಯರಿಗೆ ಸಮರ್ಪಿಸಿ ವಿಶೇಷ ಪೂಜಾಕೈಂಕಾರ್ಯಗಳನ್ನು ಮಾಡಲಿದ್ದು, ನಂತರದ ಜ್ಞಾನಯಜ್ಞದಲ್ಲಿ ಮಂತ್ರಾಲಯದ ವಿದ್ವಾನ್ ಕನಕಾಚಲ ಒಡೆಯರ್ ಅವರಿಂದ ಪ್ರವಚ, ಸಂಜೆ ಸಾಂಸ್ಕೃತಿಕ ಸಮಾರಂಭದಲ್ಲಿ ಮಕ್ತಲ್ ನ ಆದ್ಯ ನೃತ್ಯ ಕಲಾರ್ಪಣ ಅಕ್ಯಾಡೆಮಿಯ ಸದಸ್ಯರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ.

ವೈಭವೋತ್ಸವದ ಕೊನೆ ದಿನವಾದ ಮಾ.6 ರಂದು ರಾಯರ 430 ನೇ ವರ್ಧಂತಿ ಉತ್ಸವ ಹಿನ್ನೆಲೆಯಲ್ಲಿ ಬೆಳಗ್ಗೆ 8 ಕ್ಕೆ ಶ್ರೀ ಗುರು ಸಾರ್ವಭೌಮರ ಮೂಲ ಬೃಂದಾವನಕ್ಕೆ ವಿಶೇಷ ಫಲ ಪಂಚಾಮೃತಾಭಿಷೇಕ, 10 ಕ್ಕೆ ಜ್ಞಾನಯಜ್ಞದಲ್ಲಿ ಮಂತ್ರಾಲಯದ ವಿದ್ವಾನ್ ಕರ್ಣಂ ವೆಂಕಟೇಶಾಚಾರ್ಯ ಅವರಿಂದ ಪ್ರವಚ, ಚೆನ್ನೈ ನ ಶ್ರೀ ರಾಘವೇಂದ್ರ ಸ್ವಾಮಿ ನಾದಹಾರ ಸೇವಾ ಟ್ರಸ್ಟ್ ನೇತೃತ್ವ ಕಲಾವಿದರಿಂದ ಸಂಗೀತ ವಾದ್ಯಗಳ ವಾದನ,ಗಾಯನ, ಭಜನೆ ಮುಖಾಂತರ ನಾದಹಾರ ಸಮರ್ಪಣಾ ಸೇವೆ ನಡೆಯಲಿದೆ. ಬೆಂಗಳೂರಿನ ಡಾ. ವಿಶ್ವೇಶ್ ಭಟ್ ರಿಂದ ಹಿಂದುಸ್ತಾನಿ ಗಾಯನ, ಬೆಂಗಳೂರಿನ ನೃತ್ಯಾಂಜಲಿ ಕಲಾ ನಿಕೇತನ ತಂಡದವರಿಂದ ಭರತನಾಟ್ಯ ಪ್ರದರ್ಶನ, ಗಣ್ಯರಿಗೆ ಪ್ರಶಸ್ತಿ: ಮದ್ರಾಸ್ ಹೈಕೋರ್ಟಿನ ಮುಖ್ಯ ನ್ಯಾ. ಕೆ.ಆರ್.ಶ್ರೀರಾಮ್, ನ್ಯಾ.ಆರ್.ಸುಬ್ರಹ್ಮಣ್ಯ, ನ್ಯಾ.ಜಿ.ನರೇಂದ್ರ, ನ್ಯಾ.ಪಿ.ಶ್ರೀಸುಧಾ, ಬೆಂಗಳೂರಿನ ಸಿಬಿಐ ಕೋರ್ಟಿನ ಜಿಲ್ಲಾ ನ್ಯಾಯಾಧೀಶರಾದ ಎಚ್.ಎ.ಮೋಹನ್ ಅವರಿಗೆ ನೀಡಲಾಗುತಿದೆ. ಅಷ್ಟೇ ಅಲ್ಲದೇ ಕೇಂದ್ರ ಸಚಿವರಾದ ಎಚ್.ಡಿ.ಕುಮಾರ ಸ್ವಾಮಿ, ವಿ.ಸೋಮಣ್ಣ,ಶೋಭಾ ಕರಂದ್ಲಾಜೆ, ಆಂಧ್ರಪ್ರದೇಶದ ಸಚಿವರಾದ ನಾರಾ ಲೋಕೇಶ್, ಆನಂ ರಾಮನಾರಾಯಣ ರೆಡ್ಡಿ, ಟಿ.ಜಿ.ಭರತ್ , ಶಾಸಕ ಜ್ಯೋತುಲ ವೆಂಕಟ ಅಪ್ಪರಾವ್, ಶಾಸಕ ವಾಕಿಟಿ ಶ್ರೀಹರಿ, ಸಚಿವ ಎನ್ ಎಸ್ ಬೋಸರಾಜು, ರಾಜ್ಯಸಭಾ ಸದಸ್ಯ ಲೆಹರ ಸಿಂಗ್ ಸಿರೋಯಾ, ಬಳ್ಳಾರಿ ಸಂಸದ ಇ.ತುಕಾರಾಮ್ ಪ್ರಶಸ್ತಿ ಪಡೆದುಕೊಳ್ಳುತ್ತಿದ್ದಾರೆ.

ಆಂಧ್ರ ಸಿಎಂ ಕಾರ್ಯದರ್ಶಿ ಪಿ.ಎಸ್ ಪ್ರದ್ಯುಮ್ನ್, ಟಿಟಿಡಿಯ ಇಒ ಜೆ.ಶ್ಯಾಮಲಾ ರಾವ್, ಎಇಒ ವೆಂಕಯ್ಯ ಚೌದರಿ, ಧಾರ್ಮಿಕ ಮತ್ತು ದತ್ತಿ ಇಲಾಖೆ ಆಯುಕ್ತ ಡಾ.ಎಂ.ವಿ.ವೆಂಕಟೇಶ, ಆಂಧ್ರದ ಕರ್ನೂಲ್ ಜಿಲ್ಲೆ ಡಿಐಜಿ ಕೋಯ ಪ್ರವೀಣ, ಆಂಧ್ರ ಗುಪ್ತಚರ ಇಲಾಖೆ ಎಸ್ಪಿ ಫಕ್ಕೀರಪ್ಪ ಅವರು ಮತ್ತು ಕಡಪದ ವಿದ್ವಾನ್ ಇಂದ್ರಕಂಟಿ ಪ್ರಸಾದ ಶರ್ಮಾ ವೇಪಲ್ಲಿ, ಬಳ್ಳಾರಿಯ ಪಂಚಾಂಗ ಕರ್ತೃ ಪ್ರೊ. ಗುರುರಾಜ ಕುಲಕರ್ಣಿ, ಬೆಂಗಳೂರಿನ ಪೂರ್ಣ ಪ್ರಜ್ಞಾ ವಿದ್ಯಾಪೀಠದ ವಿದ್ವಾನ್ ಯು.ಕೇಶವಾಚಾರ್ಯ ಹಾಗೂ ಪುಣೆಯ ಪ್ರೊ.ಗುರುರಾಜ ಕುಲಕರ್ಣಿ ಅವರು ಅದೇ ರೀತಿ ಆಂಧ್ರದ ಬಿಜೆಪಿ ಮುಖಂಡ ಪತೂರಿ ನಾಗಭೂಷಣಂ, ಕರ್ನಾಟಕದ ವಿಶ್ವ ವಾಣಿ ದಿನಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್, ನ್ಯೂಸ್ ಫಸ್ಟ್ ಕನ್ನಡ ಎಂಡಿ ಹಾಗೂ ಸಿಇಒ ಎಸ್.ರವಿಕುಮಾರ್, ಏಷ್ಯನ್ ನೆಟ್ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನುಮಕ್ಕನವರ್ ಟಿಟಿಡಿ ಬೋರ್ಡ್ ಸದಸ್ಯ ನರೇಶ್ ಕುಮಾರ್, ಬೆಂಗಳೂರಿನ ಶ್ರೀಜಯದೇವ ಸಂಸ್ಥೆಯ ಡಾ.ನಟರಾಜ ಶೆಟ್ಟಿ ಅವರು ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದೆ.

-----------------

25ಕೆಪಿಆರ್‌ಸಿಆರ್‌ 03: ಶ್ರೀರಾಘವೇಂದ್ರ ಸ್ವಾಮಿಗಳ