ತಾಲೂಕಿನ ಅದಲಗೆರೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಶ್ರೀಕಂಠಪ್ಪ ಎರಡು ಮತಗಳ ಅಂತರದಲ್ಲಿ ಸೋಮವಾರ ಭರ್ಜರಿ ಜಯಗಳಿಸಿದರು.
ಕನ್ನಡಪ್ರಭವಾರ್ತೆ ಗುಬ್ಬಿ
ತಾಲೂಕಿನ ಅದಲಗೆರೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಶ್ರೀಕಂಠಪ್ಪ ಎರಡು ಮತಗಳ ಅಂತರದಲ್ಲಿ ಸೋಮವಾರ ಭರ್ಜರಿ ಜಯಗಳಿಸಿದರು. ಚುನಾವಣೆಯಲ್ಲಿ ಶ್ರೀಕಂಠಪ್ಪ 7 ಮತಗಳನ್ನು ಪಡೆದರೆ ಶ್ರೀನಿವಾಸ್ ಅವರು 5 ಮತಗಳನ್ನು ಪಡೆದು ಪರಾಜಿತಗೊಂಡರು. ನೂತನ ಅಧ್ಯಕ್ಷ ಶ್ರೀಕಂಠಪ್ಪ ಮಾತನಾಡಿ ನಮ್ಮಎಲ್ಲ ನಿರ್ದೇಶಕರ ಸಹಕಾರ ಪಡೆದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಜೊತೆಗೆ ಮಾಜಿ ಸಹಕಾರ ಸಚಿವರಾದ ಕೆ ಎನ್ ರಾಜಣ್ಣ ಅವರ ಸಹಕಾರ ಪಡೆದು ಶೀಘ್ರದಲ್ಲೇ ರೈತರಿಗೆ ಸಾಲ ಸೌಲಭ್ಯಗಳನ್ನು ಕೊಡಿಸುವುದರ ಮುಖಾಂತರ ಸಹಕಾರ ಸಂಘದ ಅಭಿವೃದ್ಧಿಗೆ ಕೈಜೋಡಿಸುತ್ತೇನೆ. ರೈತರಿಗೆ ಅಡಿಕೆ ದಾಸ್ತಾನು ಬೆಳೆ ಸಾಲ ಹಾಗೂ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುತ್ತೇನೆ ಎಂದು ತಿಳಿಸಿದರು. ನಿರ್ದೇಶಕ ಸಾಗರನಹಳ್ಳಿ ನಂಜೇಗೌಡ ಮಾತನಾಡಿ ರೈತರು ಸಾಲವನ್ನು ಪಡೆದುಕೊಂಡು ಸಕಾಲಕ್ಕೆ ಮರುಪಾವತಿಯನ್ನು ಮಾಡಬೇಕು ಜೊತೆಗೆ ಸರ್ಕಾರದಿಂದ ಬರುವಾಗ ಸೌಲಭ್ಯಗಳನ್ನು ಕೂಡ ರೈತರಿಗೆ ತಲುಪಿಸುತ್ತೇವೆ ರೈತರಿಗೆ ಅಗತ್ಯವಾಗಿ ಬೇಕಾದ ಎಲ್ಲಾ ಸೌಲಭ್ಯಗಳನ್ನು ಕೂಡ ಸಹಕಾರ ಸಂಘದ ಮುಖಾಂತರ ರೈತರಿಗೆ ಕೊಡಿಸಲು ಸಹಕಾರ ಮಾಡುತ್ತೇವೆ ಎಂದು ತಿಳಿಸಿದರು.ಈ ವೇಳೆ ಉಪಾಧ್ಯಕ್ಷ ಹನುಮಂತಯ್ಯ ನಿರ್ದೇಶಕರಾದ ನಂಜೇಗೌಡ್ರು ,ಶಿವಣ್ಣ ,ಭಾಸ್ಕರ್ , ರಾಜಪ್ಪ , ಧರ್ಮಯ್ಯ , ಎ.ಎಸ್. ಸತೀಶ್ , ಎ.ಆರ್. ಶ್ರೀನಿವಾಸ್ , ರಾಜೇಶ್ , ಮೀನಾಕ್ಷಿ , ಸುರೇಶ , ನಕುಲಯ್ಯ ,ನಟೇಶ್ , ರಂಗಸ್ವಾಮಯ್ಯ ಭಾಗವಹಿಸಿದ್ದರು.