ಸಾರಾಂಶ
ಕೊಳ್ಳೇಗಾಲ: ಪಟ್ಟಣದಾದ್ಯಂತ ದೇವಾಂಗ ಕುಲಬಾಂಧವರು ಶ್ರದ್ಧಾ-ಭಕ್ತಿಯಿಂದ ಗುರುವಾರ ಮದ್ದೇವಲ ಮಹರ್ಷಿ ಜಯಂತಿಯನ್ನು ಆಚರಿಸಿದರು.
ಶ್ರೀ ಮದ್ದೇವಲ ಜಯಂತಿ ಹಿನ್ನೆಲೆ ದೇವಾಂಗ ಕುಲಸ್ಥರು ವ್ಯಾಪಾರ, ವಹಿವಾಟು ನಡೆಸುವ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಿದ್ದರು. ಈ ವೇಳೆ ಮೂರು ಸಿನಿಮಾ ಮಂದಿರಗಳು ದೇವಾಂಗ ಕುಲಸ್ಥರ ಒಡೆತನದಲ್ಲಿರುವ ಕಾರಣ ಮೂರು ಚಿತ್ರಮಂದಿರಗಳಿಗೂ ರಜೆ ಘೋಷಿಸಲಾಗಿತ್ತು.ಪಟ್ಟಣದಲ್ಲಿ ಶ್ರೀ ಮದ್ದೇವಲ ಮಹರ್ಷಿ ಜಯಂತ್ಯುತ್ಸವವನ್ನು ದೇವಾಂಗಪೇಟೆಯ ಕುಲಸ್ಥರು ಗುರುವಾರ ದೇವಲ ಮಹರ್ಷಿ ಹೆಬ್ಬಾಗಿಲ ಬಳಿಯಿರುವ ದೇವರ ದಾಸಿಮಯ್ಯ ಪ್ರತಿಮೆಗೆ ಯಜಮಾನರು ಹಾಗೂ ಮುಖಂಡರು ಮಾಲಾರ್ಪಣೆ ಮಾಡಿದರು. ಬೆಳೆಗ್ಗೆಯಿಂದ ಚೌಡೇಶ್ವರಿ ದೇವಸ್ಥಾನದಲ್ಲಿ ರುದ್ರಾಭಿಷೇಕ, ಅಲಂಕಾರ, ಮಹಾಮಂಗಳಾರತಿ ನಡೆಸಿ ದೇವಸ್ಥಾನದ ಆವರಣದಲ್ಲಿ ಶಕ್ತಿದೆವತೆಗಳ ಮೆರವಣಿಗೆ ನಡೆಸಲಾಯಿತು.
ಚೌಡೇಶ್ವರಿ ಹಾಗೂ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಎಲ್ಲಾ ಸಾರ್ವಜನಿಕರಿಗೆ ಪ್ರತಿ ವರ್ಷದಂತೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ದೇವಾಂಗ ಪೇಟೆಯಲ್ಲಿ ಚೌಡೇಶ್ವರಿ ಉತ್ಸವ ಮೂರ್ತಿಯ ಪಲ್ಲಕ್ಕಿ ಉತ್ಸವ ಜರುಗಿತು.ಈ ಸಂದರ್ಭದಲ್ಲಿ ದೇವಾಂಗಪೇಟೆಯ ಯಜಮಾನ ಚಿಂತು ಪರಮೇಶ್, ಸುರೇಶ್.ಕೆ.ಎನ್, ಶಿವಕುಮಾರ್.ಪಿ.ಎನ್, ಲಕ್ಷ್ಮಣ್, ನಾಗರಾಜು, ನಾರಾಯಣಸ್ವಾಮಿ, ಮಹದೇವ, ಡಿ.ಜಿ.ಸುರೇಶ್, ಶಾಂತಮೂರ್ತಿ, ಚೌಡೇಶ್ಬರಿ ಕಲ್ಯಾಣ ಮಂಪಪದ ಶ್ರೀನಿವಾಸ್ , ರಾಜರಾಜೇಶ್ವರಿ ಕಲ್ಯಾಣ ಮಂಟಪದ ಅಧ್ಯಕ್ಷ ಮಂಜುನಾಥ್, ನಿರಂಜನ ರವಿ, ಯುವ ಮುಖಂಡ ಎನ್.ಗಿರೀಶ್ ಬಾಬು , ಕಿರಣ್, ರೋಹಿತ್, ಓಕೆ ನಾಗೇಂದ್ರ, ಜಿ ಎಸ್ ನಾಗೇಂದ್ರ, ಷಣ್ಮುಗ ಸಜ್ಜಾ, ಭಾಸ್ಕರ್, ಕಾರ್ತಿಕ್ ಇನ್ನಿತರಿದ್ದರು.