ಸಾರಾಂಶ
ಜ. 11ರಂದು ನಡೆಯುವ ಚುನಾವಣೆಗೆ ಸುಮಾರು 33 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಅಪರಾಹ್ನ 4ಗಂಟೆಯ ನಂತರ ಮತ ಎಣಿಕೆ ಆರಂಭವಾಗಲಿದೆ.
ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ
ಇದೇ ಪ್ರಥಮ ಬಾರಿಗೆ ಶ್ರೀಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಜ. 11 ರಂದು ನಡೆಯುವ ಚುನಾವಣೆಗೆ ಸುಮಾರು 33 ಮಂದಿ ನಾಮಪತ್ರ ಸಲ್ಲಿಸಿದ್ದು ಒಟ್ಟು 13 ಸ್ಥಾನ ಬಲದಲ್ಲಿ 10 ಮಂದಿ ಅವಿರೋಧ ಆಯ್ಕೆಗೊಂಡಿದ್ದು ಅಧ್ಯಕ್ಷ ಸ್ಥಾನಕ್ಕೆ ಬಣ ರಾಜಕೀಯ ಜೋರಾಗಿದೆ.ಜ.11 ರಂದು ಚುನಾವಣೆ ನಡೆಯಲಿದ್ದು ಅಪರಾಹ್ನ 4 ಗಂಟೆಯ ನಂತರ ಮತ ಎಣಿಕೆ ಆರಂಭವಾಗಲಿದೆ ಎನ್ನಲಾಗಿದೆ.
ಚುನಾವಣಾಧಿಕಾರಿಯಾಗಿ ಮಡಿಕೇರಿ ಸಹಕಾರ ಸಂಘಗಳ ಸಹಾಯಕ ರಿಜಿಸ್ಟ್ರಾರ್ ಕಚೇರಿಯ ಕೆ.ಯು.ಕರುಣ್ ಕಾರ್ಯಪ್ಪ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಈವರೆಗೆ 5 ರಂದು ವಾಪಸಾತಿಯ ಪ್ರಕ್ರಿಯೆ ನಂತರ 10 ಮಂದಿ ಅವಿರೋಧ ಆಯ್ಕೆಗೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.ಅವಿರೋಧವಾಗಿ ಆಯ್ಕೆಯಾದವರು: ಕಾರ್ಯಪ್ಪ ಮಚ್ಚಾಮಾಡ ಟಿ( ಶ್ರೀಮಂಗಲ), ಸಂದೀಪ್ ಕೆ.ಎನ್.( ಶ್ರೀಮಂಗಲ), ಹಾಲಿ ಅಧ್ಯಕ್ಷ ಚಂಗಪ್ಪ ಅಜ್ಜಮಾಡ ಟಿ.( ಚಂದ್ರ- ಕುರ್ಚಿ), ಉದಯಕುಮಾರ್ ಮಚ್ಚಮಾಡ ಕೆ (ಕುರ್ಚಿ), ಮುತ್ತಪ್ಪ ಎಂ.ಮತ್ರಂಡ ( ಕುಮಟೂರು), ಪ.ಜಾತಿ ಕ್ಷೇತ್ರ ಕೇತು ಹರಿಜನರ ಎಸ್.( ಶ್ರೀಮಂಗಲ), ಪ.ಪಂ ಕ್ಷೇತ್ರ. ಕಾಳ ಎರವರ ಎಂ.( ಕುರ್ಚಿ), ಹಿ.ವರ್ಗ. ಪುರುಷೋತ್ತಮ್ ಬಿ.ಆರ್.( ಬೀರುಗ), ಹಿಂ.ವರ್ಗ. ಪೂಣಚ್ಚ ಪೊಯಿಲೇಂಗಡ ಎಂ.( ಕುಮಟೂರು) ಹಾಗೂ ಉಷಾ ಕೊಟ್ರಂಗಡ ಎಚ್.( ಕುಮಟೂರು)
ಇನ್ನುಳಿದ 3 ಸ್ಥಾನಕ್ಕೆ ಮಹಿಳಾ ಮೀಸಲು ಸಾಲಗಾರರ ಕ್ಷೇತ್ರದಿಂದ ಇಬ್ಬರು ಹಾಗೂ ಸಾಲಗಾರರ ಪುರುಷ ಕ್ಷೇತ್ರದಿಂದ ಒಬ್ಬರ ಆಯ್ಕೆ ನಡೆಯಲಿದ್ದು, ಮಹಿಳಾ ಮೀಸಲು ಕ್ಷೇತ್ರದಿಂದ ಬೊಳ್ಳಮ್ಮ ಅರೆಯಡ ಟಿ, ವಸಂತಿ ಅಚ್ಚಪಂಡ ಎಂ. ಹಾಗೂ ವಾಣಿ ಮಾಚೀರ ಎಂ.ನಡುವೆ ಸ್ಪರ್ಧೆ ನಡೆಯಲಿದೆ.ಪುರುಷರ ಸಾಲಗಾರರ ಕ್ಷೇತ್ರದಲ್ಲಿ ಉದಯ ಐಯ್ಯಮಾಡ ಎ ಹಾಗೂ ತಮ್ಮಯ್ಯ ಅಜ್ಜಮಾಡ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.