ಸಾರಾಂಶ
60 ಎಕರೆ ಪ್ರದೇಶ ಕೆರೆ ಈಗ ಹೂಳು ತುಂಬಿಕೊಂಡಿದೆ. ಕೆರೆಗೆ ವಿಜಯನಗರ ಕಾಲುವೆ ಮೂಲಕ ನೀರು ಹರಿದು ಬರುತ್ತಿದ್ದು ಸಾಕಷ್ಟು ನೀರು ಸಂಗ್ರಹವಾಗುತ್ತದೆ.
ಗಂಗಾವತಿ: ಐತಿಹಾಸಿಕ ಹಿನ್ನೆಲೆ ಹೊಂದಿರುವ ತಾಲೂಕಿನ ಸಂಗಾಪುರ ಬಳಿ ಇರುವ ಲಕ್ಷ್ಮೀ ನಾರಾಯಣ ಕೆರೆ ಅಭಿವೃದ್ಧಿಗೆ ಸರ್ಕಾರ ₹5 ಕೋಟಿ ಅನುದಾನ ನೀಡುವಂತೆ ಮಾಜಿ ಎಂಎಲ್ಸಿ ಎಚ್.ಆರ್. ಶ್ರೀನಾಥ ಸರ್ಕಾರಕ್ಕೆ ಒತ್ತಾಯಿಸಿದರು.
ಸಂಗಾಪುರ ಬಳಿ ಲಕ್ಷ್ಮೀ ನಾರಾಯಣ ಕೆರೆಗೆ ಭೇಟಿ ನೀಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.60 ಎಕರೆ ಪ್ರದೇಶ ಕೆರೆ ಈಗ ಹೂಳು ತುಂಬಿಕೊಂಡಿದೆ. ಕೆರೆಗೆ ವಿಜಯನಗರ ಕಾಲುವೆ ಮೂಲಕ ನೀರು ಹರಿದು ಬರುತ್ತಿದ್ದು ಸಾಕಷ್ಟು ನೀರು ಸಂಗ್ರಹವಾಗುತ್ತದೆ. ಇದನ್ನು ಅಭಿವೃದ್ಧಿ ಪಡಿಸಿದರೆ ಪ್ರವಾಸಿ ತಾಣವಾಗುವದರ ಜೊತೆಗೆ ಅಲ್ಲಿರುವ ಹಳೆಯ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ಜೀವ ತುಂಬಿದಂತಾಗುತ್ತದೆ ಎಂದು ತಿಳಿಸಿದರು.ಗಂಗಾವತಿ ಆನೆಗೊಂದಿ ಮಾರ್ಗದಲ್ಲಿ ಬರುವ ಕೆರೆ ಅಬಿವೃದ್ಧಿಯಾಗುವುದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಬೋಟಿಂಗ್ ವ್ಯವಸ್ಥೆ, ಪಾರ್ಕ್ ನಿರ್ಮಾಣ, ವಿದ್ಯುತ್ ಅಲಂಕಾರ ಕಾರಂಜಿ ಮತ್ತು ಕೆರೆ ಸುತ್ತಲು ವಾಕಿಂಗ್ ಟ್ರಾಕ್ ನಿರ್ಮಿಸುವುದರಿಂದ ಪ್ರವಾಸಿಗರಿಗೆ ಅನುಕೂಲವಾಗುತ್ತದೆ. ಮುಖ್ಯಮಂತ್ರಿ, ಸಚಿವರು, ಸ್ಥಳೀಯ ಶಾಸಕರು ಗಮನಹರಿಸ ಬೇಕೆಂದು ಆಗ್ರಹಿಸಿದರು.ಅಲ್ಲದೇ ಪ್ರವಾಸೋದ್ಯಮ ಸಚಿವರು ಸಹ ಈ ಕೆರೆಗ ₹1 ಕೋಟಿ ನೀಡುವಂತೆ ಶ್ರೀನಾಥ ಅಗ್ರಹಿಸಿದ್ದಾರೆ.ಈ ಸಂದರ್ಭದಲ್ಲಿ ಡಾ.ಶಿವಕುಮಾರ ಇದ್ದರು.