ಬಾಳೆಹೊನ್ನೂರುಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ರೈಲು ಮಾರ್ಗದ 332 ಕಿಮೀ ಯೋಜನೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿ ಶೃಂಗೇರಿ-ಬಾಳೆಹೊನ್ನೂರು ಹೊಸ ಮಾರ್ಗ ಮಾಡಲು ಸರ್ವೆಗೆ ಯೋಜಿಸಲಾಗಿದೆ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ಶಿವಾನಂದ ಜಗದ್ಗುರುಗಳ ಪೀಠಾರೋಹಣ ಶತಮಾನೋತ್ಸವದಲ್ಲಿ ಸಚಿವ ಸೋಮಣ್ಣಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ರೈಲು ಮಾರ್ಗದ 332 ಕಿಮೀ ಯೋಜನೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿ ಶೃಂಗೇರಿ-ಬಾಳೆಹೊನ್ನೂರು ಹೊಸ ಮಾರ್ಗ ಮಾಡಲು ಸರ್ವೆಗೆ ಯೋಜಿಸಲಾಗಿದೆ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.ರಂಭಾಪುರಿ ಪೀಠದಲ್ಲಿ ಗುರುವಾರ ನಡೆದ ಶ್ರೀಮದ್ ರಂಭಾಪುರಿ ಲಿಂಗೈಕ್ಯ ಜಗದ್ಗುರು ಶಿವಾನಂದ ರಾಜೇಂದ್ರ ಶಿವಾಚಾರ್ಯ ಭಗವತ್ಪಾದರ ಪೀಠಾರೋಹಣ ಶತಮಾನೋತ್ಸವದಲ್ಲಿ ಮಾತನಾಡಿ, ಶೃಂಗೇರಿ-ಬಾಳೆಹೊನ್ನೂರು ಮೂಲಕ ರೈಲು ಹಾದು ಹೋಗುವ ಯೋಜನೆ ಮಾಡಲು ಶ್ರೀಗಳು ಹೇಳಿದ್ದು, ಲೋಕಸಭಾ ಅಧಿವೇಶನ ಮುಗಿದ ನಂತರ ಬಾಳೆಹೊನ್ನೂರು ಮಠಕ್ಕೆ ತಾನು ಅಧಿಕಾರಿಗಳೊಂದಿಗೆ ಬಂದು ಶೃಂಗೇರಿ-ಬಾಳೆಹೊನ್ನೂರು ಹೊಸ ರೈಲು ಮಾರ್ಗದ ಬಗ್ಗೆ ಸ್ವಾಮೀಜಿಗಳೊಂದಿಗೆ ಮತ್ತು ಪರಿಸರ ಇಲಾಖೆ ಅನುಮತಿ ಸಮಸ್ಯೆಬಗ್ಗೆಯೂ ಚರ್ಚಿಸಲಾಗುವುದು ಎಂದು ಮಾಹಿತಿ ನೀಡಿದರು.

ಈ ಮಾರ್ಗ ಇಲ್ಲಿರುವ ರೈತರು, ಸಾರ್ವಜನಿಕರು ಹಾಗೂ ಭಕ್ತರಿಗೂ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು. 2014ರವರೆಗೆ ರಾಜ್ಯದಲ್ಲಿ ರೈಲು ಯೋಜನೆ ಏನು ಇರಲಿಲ್ಲ. ಆನಂತರ ರಾಜ್ಯದಲ್ಲಿ ₹49 ಸಾವಿರ ಕೋಟಿ ಖರ್ಚು ಮಾಡಿದ್ದು, ನಾನೇ ಉದ್ಘಾಟನೆ ಮಾಡುತ್ತಿದ್ದೇನೆ. ಕಡೂರು-ಚಿಕ್ಕಮಗಳೂರು ಮಾರ್ಗದ ಕಾಮಗಾರಿ ಈಗಾಗಲೇ ಮುಗಿಯುತ್ತಿದ್ದು, ಸುಮಾರು ₹535 ಕೋಟಿ ಖರ್ಚು ಮಾಡಲಾಗಿದೆ. ಸ್ವಲ್ಪ ದಿನಗಳಲ್ಲಿ ರೈಲು ಚಾಲನೆಯಾಗಲಿದೆ ಎಂದರು.

ಬೀರೂರು-ಶಿವಮೊಗ್ಗ ಡಬಲ್ ರೈಲು ಯೋಜನೆ ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ಈ ಹಿಂದೆ ಚಿಕ್ಕಮಗಳೂರು-ಬೇಲೂರಿಗೆ, ಬೇಲೂರಿನಿಂದ ಹಾಸನಕ್ಕೆ ರೈಲು ಕನಸು ಕಂಡಿರಲಿಲ್ಲ. ಇವೆಲ್ಲವನ್ನೂ ಎರಡೂವರೆ ವರ್ಷದಲ್ಲಿ ಮಾಡಿದ್ದೇವೆ. ಅಮೃತ್ ಭಾರತ್ ಯೋಜನೆಯಡಿ ಚಿಕ್ಕಮಗಳೂರಿನಲ್ಲಿ ₹27 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಯಾಗುತ್ತಿದೆ. ಸಕಲೇಶಪುರದ ರೈಲ್ವೇ ನಿಲ್ದಾಣಕ್ಕೆ ₹22 ಕೋಟಿ. ಅರಸೀಕೆರೆ-ತುಮಕೂರು ಡಬಲ್ ರೈಲ್ವೇಗೆ ₹750 ಕೋಟಿ ಖರ್ಚು ಮಾಡಿ ಮಾಡಲಾಗಿದೆ. ಇದೆಲ್ಲಕ್ಕೂ ಕೇಂದ್ರ ಸರ್ಕಾರ ಹಣ ನೀಡಿದ್ದು, ರಾಜ್ಯ ಸರ್ಕಾರ ಒಂದು ಪೈಸೆಯೂ ನೀಡಿಲ್ಲ ಎಂದರು.

ಚಿಕ್ಕಬಾಣಾವರ-ಹಾಸನ ರೈಲು ಮಾರ್ಗದ ವಿದ್ಯುತೀಕರಣಕ್ಕೆ ₹187 ಕೋಟಿ ಕಾಮಗಾರಿ ಪೂರ್ಣ ವಾಗಿದೆ. ಸಕಲೇಶಪುರ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ಸುರಂಗ ಮಾರ್ಗ ಡೀಸೆಲ್‌ನಲ್ಲಿ ಓಡಬೇಕಿತ್ತು. ಇದನ್ನು ಅರ್ಥ ಮಾಡಿಕೊಂಡ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಆದೇಶ ಮಾಡಿ ಇನ್ನು ಒಂದೂವರೆ ತಿಂಗಳಲ್ಲಿ ಬೆಂಗಳೂರು-ಚಿಕ್ಕಮಗಳೂರು ಮಾರ್ಗವನ್ನು ಶೇ.100 ವಿದ್ಯುತ್‌ಕರಣ ಮಾಡಲಾಗುವುದು. ಚಿಕ್ಕಮಗಳೂರು-ಬೀರೂರು ರೈಲ್ವೇ ನಡುವೆ ಇದ್ದ ಲೆವೆಲ್ ಕ್ರಾಸಿಂಗ್ ಅನ್ನು ಮೇಲ್ಸೇತುವೆ ಮಾಡಲಾಗುತ್ತಿದೆ. ನಾಗಮಂಗಲ-ಅಜ್ಜಂಪುರ ರೈಲ್ವೇ ಮಾರ್ಗಕ್ಕೆ ₹೫೦ ಕೋಟಿ ಮಂಜೂರು ಮಾಡಿ ಟೆಂಡರ್ ಕರೆಯಲಾಗಿದೆ ಎಂದರು. ಪ್ರಧಾನಿ ಎಲ್ಲಾ ರಾಜ್ಯಗಳಿಗೂ ಶುದ್ಧ ಕುಡಿಯುವ ನೀರು ಕೊಡಬೇಕು ಎಂದು 2019ರಲ್ಲಿ ಜಲಶಕ್ತಿ ಇಲಾಖೆಯಡಿ ರಾಜ್ಯಗಳಿಗೆ ₹5 ಲಕ್ಷ ಕೋಟಿ ಕೊಟ್ಟು ಶೇ.50 ಕಾಮಗಾರಿ ರಾಜ್ಯದಿಂದ ಮಾಡುವಂತೆ ಹೇಳಿದ್ದಾರೆ.

5-6ರಾಜ್ಯಗಳಲ್ಲಿ ಇದು ದುರುಪಯೋಗವಾಗಿರುವುದು ತಿಳಿದುಬಂದಿದೆ. ಈ ಬಗ್ಗೆ ದೇಶದ ಎಲ್ಲಾ ರಾಜ್ಯಗಳ ಅಧಿಕಾರಿಗಳ ಸಭೆಯನ್ನು ಶುಕ್ರವಾರ ಬೆಳಿಗ್ಗೆ ಕೇಂದ್ರ ಸಚಿವ ಸಿ.ಆರ್.ಪಾಟೀಲ್ ಅವರೊಂದಿಗೆ ಸೇರಿ ಕರೆಯಲಾಗಿದೆ. ರಾಷ್ಟ್ರದಲ್ಲಿ ಸುಜಲ ಎಂಬ ಹೆಸರಿಟ್ಟು ಕಡಿಮೆ ಮಳೆ ಬರುವ ಜಿಲ್ಲೆಗಳಿಗೆ ಮಳೆ ನೀರು ಕೊಯ್ಲಿಗೆ, ಸಾಮಾನ್ಯ ರೈತರ ಸಂಕಷ್ಟ ಅರ್ಥ ಮಾಡಿಕೊಂಡು ಲಕ್ಷಾಂತರ ರು. ನೀಡಲು ಯೋಜಿಸಲಾಗಿದೆ.

ದೇಶದ ಸರ್ವಾಂಗೀಣ ಅಭಿವೃದ್ಧಿಯಾಗೆ ಎಲ್ಲಾ ರಾಜ್ಯಗಳ ಅಭಿವೃದ್ಧಿಯಾಗಬೇಕು. ರಾಜ್ಯಗಳ ಅಭಿವೃದ್ಧಿಗೆ ಜಿಲ್ಲಾ ಕೇಂದ್ರಗಳು ಅಭಿವೃದ್ಧಿಯಾಗಬೇಕು ಎಂದು ಪ್ರಧಾನಿ ನಮ್ಮೆಲ್ಲರಿಗೂ ಸಂದೇಶ ನೀಡಿದ್ದಾರೆ. ಚುನಾವಣೆ ಬಂದಾಗ ರಾಜಕಾರಣ ಮಾಡಿ. ಅಭಿವೃದ್ಧಿ ಹೆಸರಿನಲ್ಲಿ ರಾಜಕಾರಣ ಬೇಡ ಎಂದಿದ್ದಾರೆ ಎಂದು ಹೇಳಿದರು.-- (ಬಾಕ್ಸ್)--

ಅಸತ್ಯದಿಂದ ಸತ್ಯದ ಕಡೆಗೆ ಕೊಂಡೊಯ್ದ ಕೊಡುಗೆ ಪಂಚಪೀಠಗಳದ್ದು

ವೀರಶೈವ ಧರ್ಮವನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಪಂಚ ಪೀಠಾಧೀಶ್ವರರಿಗೆ ಸಲ್ಲುತ್ತದೆ. ವಿಶ್ವದಲ್ಲಿ ಏನೇನು ಮಾಡ ಬಹುದು ಎಂಬುದಕ್ಕೆ ಪಂಚ ಪೀಠಾಧೀಶ್ವರರ ಕೊಡುಗೆ ನಿದರ್ಶನ. ಅಸತ್ಯದಿಂದ ಸತ್ಯದ ಕಡೆಗೆ ಕೊಂಡೊಯ್ಯುವ ಕೊಡುಗೆ ಅವಿಸ್ಮರಣೀಯ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.ಗುರು ಮತ್ತು ಶಿಷ್ಯಂದಿರ ಸಂಬಂಧ, ಸಹಬಾಳ್ವೆಯಲ್ಲಿ ನಾವು ಯಾವ ರೀತಿ ನಡೆದುಕೊಳ್ಳಬೇಕು ಎಂಬುದಕ್ಕೆ ಶಿವಾನಂದ ಜಗದ್ಗುರುಗಳು ಕಿರಿಯರಲ್ಲಿ ಕಿರಿಯರಾಗಿ, ಹಿರಿಯರಲ್ಲಿ ಹಿರಿಯರಾಗಿ ಬದುಕಿದವರು. ಸಮಾಜದ ಎಲ್ಲಾ ವ್ಯವಸ್ಥೆಗೂ ಪರಿಹಾರ ಕೊಡಬೇಕು ಎಂದು ಈ ದೇಶಕ್ಕೆ ಸಮರ್ಪಣೆ ಮಾಡುವ ಮುಖೇನ ಬಾಳೆಹೊನ್ನೂರು ಪೀಠ ವಿಶ್ವದ ಭೂಪಟದಲ್ಲಿ ತನ್ನದೇ ಆದ ಸ್ಥಾನ ಪಡೆದಿದೆ.ವೀರಶೈವ ಲಿಂಗಾಯತ ಎಂಬ ಕಿತ್ತಾಟ ಯಾವ ರೀತಿ ಬಗೆಹರಿಸಬೇಕು ಎಂಬ ದೃಷ್ಟಿ ಯಿಂದ ಬಾಳೆಹೊನ್ನೂರು ಶ್ರೀಗಳು ದಾವಣಗೆರೆಯಲ್ಲಿ ತೆಗೆದುಕೊಂಡ ತೀರ್ಮಾನ ಐತಿಹಾಸಿಕ. ಗುರು ವಿರಕ್ತರೆಲ್ಲ ಒಂದೇ ರಾಷ್ಟ್ರದಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಿದಾಗ ಧರ್ಮ ಬೆಳೆಯುತ್ತದೆ. ಧರ್ಮದೊಂದಿಗೆ ಸಮಾಜ ಶಕ್ತಿಯುತವಾಗಿ ಬೆಳೆಯಲು ಸಾಧ್ಯವಿದೆ ಎಂದರು.

-- (ಬಾಕ್ಸ್)--

ಚಿಕ್ಕಮಗಳೂರು-ಬಾಳೆಹೊನ್ನೂರು ರಾಷ್ಟ್ರೀಯ ಹೆದ್ದಾರಿಗೆಚಿಕ್ಕಮಗಳೂರಿನಿಂದ ರಸ್ತೆ ನೋಡುತ್ತ ಬಂದೆ. 50 ಕಿಮೀ ಬರಲು ಒಂದು ಮುಕ್ಕಾಲು ಗಂಟೆ ಬೇಕಾಯಿತು ಸಚಿವ ಸೋಮಣ್ಣ ಈ ರಸ್ತೆ ದುರವಸ್ಥೆ ಬಗ್ಗೆ ಹೇಳಿದರು. ಮಹಾರಾಜರಿಗೆ (ಯದುವೀರ್) ಎಷ್ಟು ಗಂಟೆ ತೆಗೆದುಕೊಂಡಿತೋ ನನಗೆ ಗೊತ್ತಿಲ್ಲ. ಇದು ಆಗಬಾರದು. ಈ ಬಗ್ಗೆ ಸಿ.ಟಿ.ರವಿ, ಜೀವರಾಜ್, ರಾಜೇಗೌಡರಿಗೆ ಹೇಳಿದ್ದು, ಒಂದು ಪತ್ರ ಕಳುಹಿಸಿಕೊಟ್ಟರೆ ಈ ರಸ್ತೆಯನ್ನು (ಚಿಕ್ಕಮಗಳೂರು-ಬಾಳೆಹೊನ್ನೂರು) ರಾಷ್ಟ್ರೀಯ ಹೆದ್ದಾರಿಗೆ ಸೇರಿಸಲು ಗಡ್ಕರಿ ಅವರೊಂದಿಗೆ ಮಾತನಾಡಲಿದ್ದೇವೆ ಎಂದರು.ಶಾಸಕ ಟಿ.ಡಿ.ರಾಜೇಗೌಡ ರಂಭಾಪುರಿ ಬೆಳಗು ಬಿಡುಗಡೆಗೊಳಿಸಿದರು. ಜಮಖಂಡಿ ಶಾಸಕ ಜಗದೀಶ್ ಗುಡಗುಂಟಿ ಮಠ, ಅಭಾವೀಲಿಂ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ಎಂ.ಲೋಕೇಶ್, ಜಗದ್ಗುರು ರೇಣುಕಾಚಾರ್ಯ ವಿದ್ಯಾಸಂಸ್ಥೆ ಅಧ್ಯಕ್ಷ ಯು.ಎಂ.ಬಸವರಾಜ್, ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ, ಸೂಡಿ ಜುಕ್ತಿ ಹಿರೇಮಠ, ತಪೋವನ ಮಠ, ಮಳಲಿಮಠ, ಬೀರೂರು, ಕಡೇನಂದಿಹಳ್ಳಿ, ಎಡೆಯೂರು, ಮುಕ್ತಿಮಂದಿರ, ಪಂಚಗೃಹ ಹಿರೇಮಠ, ಬಂಕಾಪುರ ಹಿರೇಮಠ, ಸಿದ್ಧರಬೆಟ್ಟ ಕ್ಷೇತ್ರಗಳ ಶಿವಾಚಾರ್ಯರು ಹಾಜರಿದ್ದರು.೨೭ಬಿಹೆಚ್‌ಆರ್ ೧:

ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನಡೆದ ಶ್ರೀಮದ್ ರಂಭಾಪುರಿ ಲಿಂಗೈಕ್ಯ ಜಗದ್ಗುರು ಶಿವಾನಂದ ರಾಜೇಂದ್ರ ಶಿವಾಚಾರ್ಯ ಭಗವತ್ಪಾದರ ಪೀಠಾರೋಹಣದ ಶತಮಾನೋತ್ಸವ ಸಮಾರಂಭವನ್ನು ಸಂಸದ ಯದುವೀರ ಕೃಷ್ಣದತ್ತ ಚಾಮರಾಜೇಂದ್ರ ಒಡೆಯರ್ ಪಂಚಾ ಪೀಠಾಧೀಶ್ವರರ ಸಮ್ಮುಖದಲ್ಲಿ ಉದ್ಘಾಟಿಸಿದರು. ವಿ.ಸೋಮಣ್ಣ, ಸಿ.ಟಿ.ರವಿ, ಟಿ.ಡಿ.ರಾಜೇಗೌಡ, ಡಿ.ಎನ್.ಜೀವರಾಜ್ ಇದ್ದರು. ೨೭ಬಿಹೆಚ್‌ಆರ್ ೨: ಶ್ರೀಮದ್ ರಂಭಾಪುರಿ ಲಿಂಗೈಕ್ಯ ಜಗದ್ಗುರು ಶಿವಾನಂದ ರಾಜೇಂದ್ರ ಶಿವಾಚಾರ್ಯ ಭಗವತ್ಪಾದರ ಪೀಠಾರೋಹಣದ ಶತಮಾನೋತ್ಸವ ಸಮಾರಂಭದ ಅಂಗವಾಗಿ ಜಗದ್ಗುರುಗಳ ಭಾವಚಿತ್ರದ ಅಡ್ಡಪಲ್ಲಕ್ಕಿ ಉತ್ಸವ ಸಂಭ್ರಮದಿAದ ನಡೆಯಿತು.