ಸಾರಾಂಶ
ಶೃಂಗೇರಿ: ತಾಲೂಕಿನಾದ್ಯಂತ ಕಳೆದೆರೆಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು ಗುರುವಾರವೂ ಬೆಳಿಗ್ಗೆಯಿಂದ ಸಂಜೆಯವರೆಗೂ ಎಡಬಿಡದೆ ಮಳೆ ಆರ್ಭಟಿಸಿತು. ಸತತ ಮಳೆಯಿಂದ ತುಂಗಾ ನದಿಯಲ್ಲಿ ಸಂಜೆಯಿಂದ ನೀರಿನ ಮಟ್ಟ ಹೆಚ್ಚಳವಾಗುತ್ತಿದ್ದು, ತಗ್ಗು ಪ್ರದೇಶಗಳೆಲ್ಲ ಮುಳುಗಡೆಯಾಗಿದೆ. ರಾತ್ರಿ ಶ್ರೀ ಮಠದ ತುಂಗಾ ನದಿಯ ತೀರದ ಕಪ್ಪೆಶಂಕರ ದೇಗು ಸಂಪೂರ್ಣ ಜಲಾವೃತಗೊಂಡಿತು.
ಶೃಂಗೇರಿ: ತಾಲೂಕಿನಾದ್ಯಂತ ಕಳೆದೆರೆಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು ಗುರುವಾರವೂ ಬೆಳಿಗ್ಗೆಯಿಂದ ಸಂಜೆಯವರೆಗೂ ಎಡಬಿಡದೆ ಮಳೆ ಆರ್ಭಟಿಸಿತು.
ಸತತ ಮಳೆಯಿಂದ ತುಂಗಾ ನದಿಯಲ್ಲಿ ಸಂಜೆಯಿಂದ ನೀರಿನ ಮಟ್ಟ ಹೆಚ್ಚಳವಾಗುತ್ತಿದ್ದು, ತಗ್ಗು ಪ್ರದೇಶಗಳೆಲ್ಲ ಮುಳುಗಡೆಯಾಗಿದೆ. ರಾತ್ರಿ ಶ್ರೀ ಮಠದ ತುಂಗಾ ನದಿಯ ತೀರದ ಕಪ್ಪೆಶಂಕರ ದೇಗು ಸಂಪೂರ್ಣ ಜಲಾವೃತಗೊಂಡಿತು.ಕೆರೆಕಟ್ಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ತುಂಗಾ ನದಿಯಲ್ಲಿ ಕ್ಷಣಕ್ಷಕ್ಕೂ ನೀರು ಹೆಚ್ಚಳವಾಗುತ್ತಿದ್ದು ತುಂಗಾ ನದಿಯಲ್ಲಿ ಪ್ರವಾಹದ ಭೀತಿ ಉಂಟಾಗಿದೆ. ಶೃಂಗೇರಿ ಪಟ್ಟಣ ಸಹಿತ ಗ್ರಾಮೀಣ ಪ್ರದೇಶದೆಲ್ಲೆಡೆ ರಾತ್ರಿವರೆಗೂ ಮಳೆ ಗಾಳಿಯ ಆರ್ಭಟ ಮುಂದುವರೆದಿತ್ತು.
27 ಶ್ರೀ ಚಿತ್ರ 1-ಶೃಂಗೇರಿ ಸುತ್ತಮುತ್ತ ಭಾರೀ ಮಳೆಯಾಗುತ್ತಿರುವುದರಿಂದ ಗುರುವಾರ ರಾತ್ರಿ ತುಂಗಾ ನದಿ ತೀರದಲ್ಲಿರುವ ಕಪ್ಪೆ ಶಂಕರ ದೇಗುಲ ಜಲಾವೃತಗೊಂಡಿರುವುದು.