ಸಾರಾಂಶ
ಕನ್ನಡಪ್ರಭ ವಾರ್ತೆ, ಶೃಂಗೇರಿ
ತಾಲೂಕಿನ ಕಂದಾಯ ಗ್ರಾಮಗಳು, ಉಪಗ್ರಾಮಗಳು ಹಾಗೂ ಗ್ರಾಮಠಾಣೆಗಳಲ್ಲಿ ವಾಸವಿರುವ ಮನೆಗಳಿಗೆ ನೀಡಲಾಗುವ ಇ-ಸ್ವತ್ತು ದಾಖಲೆ ಸಲ್ಲಿಕೆ ಅವಧಿ ವಿಸ್ತರಿಸಬೇಕೆಂದು ಒತ್ತಾಯಿಸಿ ಬಿಜೆಪಿ ಮಂಡಲ ಘಟಕ ಹಾಗೂ ತಾಲೂಕು ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ತಾಲೂಕು ಕಚೇರಿ ಎದುರು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ರೈತಮೋರ್ಚಾ ಅಧ್ಯಕ್ಷ ರಾಜೇಶ್ ಮೋಘಳ ಬೈಲು ಇ-ಸ್ವತ್ತು ದಾಖಲೆ ಸಲ್ಲಿಕೆಗೆ ಅವಕಾಶ ಕಡಿಮೆಯಾಗಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ. ತಾಲೂಕಿನಲ್ಲಿ ಅತಿ ಹೆಚ್ಚು ಗ್ರಾಮೀಣ ಪ್ರದೇಶಗಳಿದ್ದು ಇಲ್ಲಿ ವಿದ್ಯುತ್, ಇಂಟರ್ ನೆಟ್ ಸಮಸ್ಯೆ ಹೆಚ್ಚಿ, ಭಾರಿ ತೊಂದರೆಯಾಗುತ್ತಿದೆ.ಈಗಾಗಲೇ ನೀಡಿರುವ ಎರಡು ದಿನಗಳ ಅವಧಿಯನ್ನು ಹಿಂಪಡೆದು,ಇನ್ನಷ್ಟು ದಿನಗಳವರೆಗೆ ಅವಧಿ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ತಲಗಾರು ಉಮೇಶ್ ಮಾತನಾಡಿ ಶೃಂಗೇರಿ ತಾಲೂಕು ಬೌಗೋಳಿಕವಾಗಿ ದೊಡ್ಡ ಪ್ಪದೇಶವಾಗಿದ್ದು, ಹೆಚ್ಚಾಗಿ ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಿದೆ. ತಾಲೂಕಿನಲ್ಲಿ ಎಲ್ಲಾ ಮನೆಗಳ ಇ- ಸ್ವತ್ತಿಗೆ ಸಂಬಂದಿಸಿದ ಅನೇಕ ದಾಖಲೆ ಸಲ್ಲಿಸ ಬೇಕಾಗಿದ್ದು ಇದಕ್ಕೆ ಕೇವಲ ಎರಡು ದಿನ ಬಾಕಿಯಿದೆ. ಹಾಗಾಗಿ ಕೂಡಲೇ ಅವಧಿ ವಿಸ್ತರಿಸಬೇಕು ಎಂದು ಮನವಿ ಮಾಡಿದರು.ಗ್ರಾಮಠಾಣಾ ಪ್ರದೇಶಕ್ಕೆ ಜನವಸತಿ ಪ್ರದೇಶ ಎಂದು ಸೇರಿಸಬೇಕು. ತಕ್ಷಣವೇ ಶೃಂಗೇರಿ ತಾಲೂಕಿನ ದಾಖಲೆ ರಹಿತ ವಸತಿಗಳಿಗೆ ದಾಖಲೆ ಒದಗಿಸಲು ಸಹಕರಿಸಬೇಕು ಎಂದು ಒತ್ತಾಯಿಸಿದರು. ತಹಸೀಲ್ದಾರ್ ಗೌರಮ್ಮ ಮನವಿ ಸ್ವೀಕರಿಸಿದರು. ಸಂದರ್ಭದಲ್ಲಿ ಬಿಜೆಪಿ ಮುಖಂಡ ಸುರೇಶ್ ಜಟಿಗೇಶ್ವರ್, ನೂತನ್ ಕುಮಾರ್, ಎಚ್. ಕೆ. ಯೋಗಪ್ಪ, ಪಪಂ ಅಧ್ಯಕ್ಷ ವೇಣುಗೋಪಾಲ್ ಮತ್ತಿತರರು ಇದ್ದರು.
30 ಶ್ರೀ ಚಿತ್ರ 1-ಶೃಂಗೇರಿ ತಾಲೂಕು ಕಚೇರಿ ಎದುರು ತಾಲೂಕು ಬಿಜೆಪಿ ಮಂಡಲ, ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.