ಮಲ್ಲಾಪುರ ಸೊಸೈಟಿಗೆ ಶ್ರೀನಿವಾಸ್ ಅಧ್ಯಕ್ಷ ಗಣೇಶ್ ಉಪಾಧ್ಯಕ್ಷ

| Published : Apr 11 2025, 12:35 AM IST

ಮಲ್ಲಾಪುರ ಸೊಸೈಟಿಗೆ ಶ್ರೀನಿವಾಸ್ ಅಧ್ಯಕ್ಷ ಗಣೇಶ್ ಉಪಾಧ್ಯಕ್ಷ
Share this Article
  • FB
  • TW
  • Linkdin
  • Email

ಸಾರಾಂಶ

ಮಲ್ಲಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ೧೨ ಜನ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಶ್ರೀನಿವಾಸ್, ಉಪಾಧ್ಯಕ್ಷರಾಗಿ ಗಣೇಶ್, ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರು ಮತ್ತು ಉಪಾಧ್ಯಕ್ಷರ, ನಿರ್ದೇಶಕರ ಪದಗ್ರಹಣ ಕಾರ್ಯಕ್ರಮ ನಡೆಯಿತು. ಈ ಸೊಸೈಟಿ ಬಹಳ ಚೆನ್ನಾಗಿ ನಡೆದುಕೊಂಡು ಹೋಗುತ್ತಿದೆ. ಆದ್ದರಿಂದ ಹೊಸದಾಗಿ ಆಯ್ಕೆಯಾಗಿರುವ ಎಲ್ಲಾ ನಿರ್ದೇಶಕರು ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಕಾಲು ಎಳೆಯುವ ಕೆಲಸ ಮಾಡದೆ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಹಳೇಬೀಡು

ಸಮೀಪ ಮಲ್ಲಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ೧೨ ಜನ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಶ್ರೀನಿವಾಸ್, ಉಪಾಧ್ಯಕ್ಷರಾಗಿ ಗಣೇಶ್, ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರು ಮತ್ತು ಉಪಾಧ್ಯಕ್ಷರ, ನಿರ್ದೇಶಕರ ಪದಗ್ರಹಣ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಸಹಕಾರ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ನಿರ್ದೇಶಕರಾದ ನಾಗರಾಜ್ ಮಾತನಾಡಿ, ಈ ಸೊಸೈಟಿ ಬಹಳ ಚೆನ್ನಾಗಿ ನಡೆದುಕೊಂಡು ಹೋಗುತ್ತಿದೆ. ಆದ್ದರಿಂದ ಹೊಸದಾಗಿ ಆಯ್ಕೆಯಾಗಿರುವ ಎಲ್ಲಾ ನಿರ್ದೇಶಕರು ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಕಾಲು ಎಳೆಯುವ ಕೆಲಸ ಮಾಡದೆ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಕರೆ ನೀಡಿದರು. ಪ್ರಾರಂಭದಲ್ಲಿ ೩ ಲಕ್ಷದ ೩೦ ಸಾವಿರ ನಷ್ಟ ಹೊಂದಿದ್ದ ಈ ಸಹಕಾರ ಸಂಘವನ್ನು ೧೦ ಲಕ್ಷ ವಹಿವಾಟನ್ನು ನಡೆಸಿ ಲಾಭದಾಯಕ ಸಂಘವನ್ನಾಗಿ ಮಾಡಿದ ಕೀರ್ತಿ ಈ ಸಹಕಾರ ಸಂಘದ ನಿರ್ದೇಶಕ ಮಂಡಳಿ ಹಾಗೂ ಎಲ್ಲಾ ಸದಸ್ಯರಿಗೂ ಸಲ್ಲುತ್ತದೆ. ಇದೇ ರೀತಿ ಉತ್ತಮವಾದ ಆಡಳಿತವನ್ನು ನಡೆಸಿಕೊಂಡು ಹೋಗಿ ಎಂದು ತಿಳಿಸಿದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ಸಂಘದ ನೂತನ ಅಧ್ಯಕ್ಷರಾದ ಶ್ರೀನಿವಾಸ್, ನಾನು ಸಹಕಾರ ಸಂಘಕ್ಕೆ ಮೂರನೇ ಬಾರಿ ಅಧ್ಯಕ್ಷರಾಗಿ ಆಯ್ಕೆ ಆಗಿದ್ದು, ನಷ್ಟದಲ್ಲಿದ್ದ ಈ ಸಂಘವನ್ನು ಸಂಘದ ಎಲ್ಲ ನಿರ್ದೇಶಕರು ಹಾಗೂ ಎಲ್ಲಾ ಸರ್ವ ಸದಸ್ಯರ ಸಹಕಾರದಿಂದ ಇಂದು ಸುಮಾರು ೧೬ ಹಳ್ಳಿಯ ರೈತರಿಗೆ ವಾರ್ಷಿಕ ೬ ಕೋಟಿ ಮೊತ್ತದ ವ್ಯವಹಾರವನ್ನು ನಡೆಸಲು ಸಾಧ್ಯವಾಗಿದೆ. ಇದನ್ನು ಇನ್ನು ಹೆಚ್ಚು ಮಾಡಲು ನಿರ್ದೇಶಕರಾದ ತಾವೆಲ್ಲರೂ ಸಹಕಾರ ನೀಡಬೇಕೆಂದು ಕೋರಿದರು. ನಂತರ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಪುಟ್ಟಸ್ವಾಮಿಯವರು ಮಾತನಾಡಿ, ಈ ಸಹಕಾರ ಸಂಘವು ಉತ್ತಮ ಆಡಳಿತ ತರಬೇಕು ಎಂದು ತಿಳಿಸಿದರು.