ಶ್ರೀನಿವಾಸ ಕಲ್ಯಾಣೋತ್ಸವದಿಂದ ಧಾರ್ಮಿಕ ಪ್ರಜ್ಞೆ ಜಾಗೃತ: ಸಂಸದ ಕೋಟ

| Published : Mar 17 2025, 12:30 AM IST

ಶ್ರೀನಿವಾಸ ಕಲ್ಯಾಣೋತ್ಸವದಿಂದ ಧಾರ್ಮಿಕ ಪ್ರಜ್ಞೆ ಜಾಗೃತ: ಸಂಸದ ಕೋಟ
Share this Article
  • FB
  • TW
  • Linkdin
  • Email

ಸಾರಾಂಶ

ಸಾಸ್ತಾನದ ಕಾರ್ತಿಕ್ ಎಸ್ಟೇಟ್‌ನಲ್ಲಿ ಏ.೧ರಿಂದ ೩ರ ತನಕ ನಡೆಯಲಿರುವ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವದ ಚಪ್ಪರ ಮುಹೂರ್ತ ನಡೆಯಿತು.

ಕನ್ನಡಪ್ರಭ ವಾರ್ತೆ ಕುಂದಾಪುರ

ಶ್ರೀನಿವಾಸ ಕಲ್ಯಾಣೋತ್ಸವ ಈ ಭಾಗದ ಬಹುದೊಡ್ಡ ಉತ್ಸವವಾಗಿ ಮೂಡಿಬಂದು, ಆ ಮೂಲಕ ಪ್ರತಿಯೊಬ್ಬರಲ್ಲೂ ಧಾರ್ಮಿಕ ಪ್ರಜ್ಞೆ ಜಾಗೃತಗೊಳ್ಳಲಿದೆ ಎಂದು ಉಡುಪಿ ಮತ್ತು ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಭಾನುವಾರ ಇಲ್ಲಿನ ಸಾಸ್ತಾನದ ಕಾರ್ತಿಕ್ ಎಸ್ಟೇಟ್‌ನಲ್ಲಿ ಏ.೧ರಿಂದ ೩ರ ತನಕ ನಡೆಯಲಿರುವ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವದ ಚಪ್ಪರ ಮುಹೂರ್ತದಲ್ಲಿ ಭಾಗಿಯಾಗಿ ಮಾತನಾಡಿದರು.

ಈ ಕಲ್ಯಾಣೋತ್ಸವದಲ್ಲಿ ಪ್ರತಿಯೊರ್ವರು ಸಮರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸುವಂತಾಗಲಿ ಎಂದು ಆಶಿಸಿದರು.ಸಭೆಯ ಅಧ್ಯಕ್ಷತೆಯನ್ನು ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ಎಂ.ಸಿ. ಚಂದ್ರಶೇಖರ್ ವಹಿಸಿದ್ದರು. ಸಮಿತಿ ಗೌರವಾಧ್ಯಕ್ಷ ಆನಂದ್ ಸಿ. ಕುಂದರ್, ಕೋಶಾಧಿಕಾರಿ ಸತ್ಯನಾರಾಯಣ ಚಡಗ, ಉಪಾಧ್ಯಕ್ಷ ಪ್ರತಾಪ್ ಶೆಟ್ಟಿ, ಸಮಿತಿಯ ಪ್ರಮುಖರಾದ ಸುಲತಾ ಹೆಗ್ಡೆ, ಜ್ಯೋತಿ ಉದಯ್ ಕುಮಾರ್, ದಿನೇಶ್ ಗಾಣಿಗ, ನಾಗರಾಜ್ ಗಾಣಿಗ, ಗಣೇಶ್ ಪೂಜಾರಿ, ಮಲ್ಲಿಕಾ ಬಾಲಕೃಷ್ಣ, ಪ್ರಭಾಕರ್ ಮೆಂಡನ್, ದೇವದಾಸ್ ಸಾಲಿಯಾನ್, ಲಿಲಾವತಿ ಗಂಗಾಧರ್, ಪ್ರಶಾಂತ್ ಶೆಟ್ಟಿ, ವಿಜಯ ಪೂಜಾರಿ, ಜಯೇಂದ್ರ ಪೂಜಾರಿ, ಮನೋಹರ್ ಪೂಜಾರಿ, ಮನೋಜ್ ಕುಮಾರ್, ಸುಜಾತ ಬಾಯರಿ, ಸತೀಶ್ ಪೂಜಾರಿ, ಸುಬ್ರಾಯ ಆಚಾರ್, ಶಂಕರ್ ಪೂಜಾರಿ ಪಾತ್ರಿ, ಗಣಪಯ್ಯ ಆಚಾರ್, ಕರುಣಾಕರ ಪೂಜಾರಿ, ಮಾಧವ ಕಾರ್ಕಡ, ಸಂದೀಪ ಕುಂದರ್ ಕೋಡಿ, ಸಿದ್ಧಿ ಶ್ರೀನಿವಾಸ ಪೂಜಾರಿ, ಜಯಂತಿ ಪೂಜಾರಿ ಉಪಸ್ಥಿತರಿದ್ದರು.

ಸಮಿತಿಯ ಗೌರವ ಸಲಹೆಗಾರರಾದ ವಿಜಯ ಮಂಜರ್ ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಗಣೇಶ್ ಜಿ.ಚೆಲ್ಲಮಕ್ಕಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನಕಾರ್ಯದರ್ಶಿ ಐರೋಡಿ ವಿಠಲ್ ಪೂಜಾರಿ ವಂದಿಸಿದರು. ಧಾರ್ಮಿಕ ವಿಧಿವಿಧಾನವನ್ನು ಪ್ರಸನ್ನ ತುಂಗ ನೆರವೇರಿಸಿದರು.