ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ನಡೆದ ಪ್ರತಿಷ್ಠಿತ ಗ್ಲೋಬಲ್ ಎಜುಕೇಶನ್ ಸಮ್ಮೇಳನದಲ್ಲಿ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯ ಭಾಗವಹಿಸಿದ್ದು, ಮೂರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ ಎಂದು ಸಂಸ್ಥೆಯ ಕುಲಾಧಿಪತಿ ಡಾ. ಶ್ರೀನಿವಾಸ ರಾವ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ನಡೆದ ಪ್ರತಿಷ್ಠಿತ ಗ್ಲೋಬಲ್ ಎಜುಕೇಶನ್ ಸಮ್ಮೇಳನದಲ್ಲಿ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯ ಭಾಗವಹಿಸಿದ್ದು, ಮೂರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ ಎಂದು ಸಂಸ್ಥೆಯ ಕುಲಾಧಿಪತಿ ಡಾ. ಶ್ರೀನಿವಾಸ ರಾವ್ ತಿಳಿಸಿದರು.ಅವರು ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.ಶ್ರೀನಿವಾಸ ವಿಶ್ವವಿದ್ಯಾಲಯಕ್ಕೆ ‘ಗ್ಲೋಬಲ್ ಎಕ್ಷಲೆನ್ಸ್ ಅವಾರ್ಡ್ ಇನ್ ಹೈಯರ್ ಎಜುಕೇಶನ್ ಆಂಡ್ ರಿಸರ್ಚ್’ ಪ್ರಶಸ್ತಿ, ಶ್ರೀನಿವಾಸ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ‘ಎಕ್ಸಲೆನ್ಸ್ ಇನ್ ಇಂಡಸ್ಟ್ರಿಇಂಟಿಗ್ರೇಟೆಡ್ ಟೆಕ್ನಿಕಲ್ ಎಜುಕೇಶನ್ ಅವಾರ್ಡ್’ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀನಿವಾಸ ಮಯ್ಯ ಡಿ. ಅವರಿಗೆ ವಿಷನರಿ ಎಜುಕೇಶನ್ ಲೀಡರ್ ಅವಾರ್ಡ್ ಲಭಿಸಿದೆ ಎಂದರು.
ಇದರೊಂದಿಗೆ ಆಗಸ್ಟ್ ಅಥವಾ ಸೆಪ್ಟಂಬರ್‌ನಲ್ಲಿ ಥೈಲ್ಯಾಂಡಿನಿಂದ ಒಂದು ತಂಡ ಮಂಗಳೂರಿಗೆ ಆಗಮಿಸಲಿದ್ದು, ನಮ್ಮ ಸಂಸ್ಥೆಯಲ್ಲಿ ‘ಎಐ’ ಆಧಾರಿತ ಕೌಶಲ್ಯ ತರಬೇತಿಯನ್ನು ಪಡೆಯಲಿದ್ದಾರೆ. ಇದು ೩೦ ದಿನಗಳ ಸರ್ಟಿಫಿಕೇಟ್ ಕೋರ್ಸ್ ಆಗಿರಲಿದೆ. ಮಾತ್ರವಲ್ಲ ಇಲ್ಲಿಂದ ಒಂದು ತಂಡ ಥೈಲ್ಯಾಂಡ್‌ಗೆ ತೆರಳಿ ಅಲ್ಲಿ ಅಧ್ಯಯನ ನಡೆಸಲಿದೆ ಎಂದರು.ಇಲ್ಲಿಯ ತನಕ ವಿದೇಶದೊಂದಿಗೆ ಎರಡು ಕಡೆಗಳಲ್ಲಿ ಹೊಂದಾಣಿಕೆಯೊಂದಿಗೆ ಎರಡು ಕಡೆಯ ವಿದ್ಯಾರ್ಥಿಗಳು ಕಲಿಯುವಂತಹ ಅವಕಾಶ ಇರಲಿಲ್ಲ. ಆದರೆ ಇದು ಮೊದಲ ಬಾರಿಗೆ ಶ್ರೀನಿವಾಸ ವಿವಿ ಈ ಯೋಜನೆಗೆ ಮುಂದಾಗಿದ್ದು, ಇದು ಸಂಸ್ಥೆಗೆ ಹೆಚ್ಚಿನ ಮಹತ್ವ ದೊರೆತಂತಾಗಿದೆ ಎಂದರು. ೨೦೧೭ರಲ್ಲಿ ಈ ಸಂಸ್ಥೆ ಪ್ರಾರಂಭವಾಗಿದ್ದು, ಇಲ್ಲಿಯ ತನಕ ಅಂತಾರಾಷ್ಟ್ರೀಯ ಮಟ್ಟದ ಯಾವುದೇ ಪ್ರಶಸ್ತಿಗಳು ಬಂದಿರಲಿಲ್ಲ. ಇದೇ ಮೊದಲಬಾರಿಗೆ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಬಂದಿದ್ದು, ಸಂಸ್ಥೆಯ ಗೌರವ ಹೆಚ್ಚಾಗಿದೆ ಎಂದು ಅವರು ತಿಳಿಸಿದರು.
ಸಂಸ್ಥೆಯ ಕುಲಪತಿ ಡಾ. ಸತ್ಯನಾರಾಯಣ ರೆಡ್ಡಿ, ಕುಲಸಚಿವ ಡಾ. ಅನಿಲ್ ಕುಮಾರ್, ಮೌಲ್ಯಮಾಪನ ಕುಲಸಚಿವ ಹಾಗೂ ಪ್ರಾಂಶುಪಾಲ ಡಾ. ಶ್ರೀನಿವಾಸ ಮಯ್ಯ ಡಿ., ಅಭಿವೃದ್ಧಿ ಕುಲಸಚಿವ ಡಾ. ಅಜಯ್, ತರಬೇತಿ ಮತ್ತು ನೇಮಕಾತಿ ಅಧಿಕಾರಿ ಡಾ. ಧೀರಜ್ ಹೆಬ್ರಿ ಇದ್ದರು.-----------------